Categories
ಮಲ್ನಾಡ್

ಮಲ್ನಾಡ್ ಟಾಪ್ ನ್ಯೂಸ್

ಹೊತ್ತಿ ಉರಿಯುತ್ತಿದ್ದ ಮನೆಯೊಳಗೆ ನುಗ್ಗಿ ಇಬ್ಬರ ಜೀವ ಉಳಿಸಿದ ಮಹಿಳೆಯರು!
– ಕಡೂರಿನಲ್ಲಿ ನಡೆದ ಘಟನೆ: ಮಗು, ತಂದೆ ಪಾರು
– ಹೊಸನಗರ : ತಾಲ್ಲೂಕಿನಲ್ಲಿ ಭೀಕರ ಅಪಘಾತ
– ಭದ್ರಾವತಿ: ಕದ್ದ ಬೈಕ್ ಓಡಿಸಿ ಸಿಕ್ಕಿಬಿದ್ದ ಕಳ್ಳ!
– ಬಾಳೆಹೊನ್ನೂರು : ಹಾವು ಕಚ್ಚಿ ವ್ಯಕ್ತಿ ಸಾವು

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಗುಮ್ಮನಹಳ್ಳಿ ಸಮೀಪದ ಬೋವಿ ಕಾಲೋನಿಯಲ್ಲಿ ಸಾವೊಂದು ಸಂಭವಿಸಿತ್ತು. ಆ ವ್ಯಕ್ತಿಯ ಅಂತ್ಯಕ್ರಿಯೆಗೆ ಅಲ್ಲಿದ್ದವರೆಲ್ಲಾ ತೆರಳಿದ್ದರು, ಮನೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳಷ್ಟೆ ಉಳಿದುಕೊಂಡಿದ್ದರು. ಅಷ್ಟೊತ್ತಿಗೆ ಇದ್ದಕ್ಕಿದ್ದ ಹಾಗೆ ಒಂದು ಮನೆ ಹೊತ್ತಿ ಉರಿಯಲು ಆರಂಭವಾಗಿತ್ತು. ಗೃಹಚಾರಕ್ಕೆ ಆ ಮನೆಯಲ್ಲಿ ಒಬ್ಬ ಯಜಮಾನ ಮಲಗಿದ್ದ, ಮದ್ಯಪಾನ ಮಲಗಿದ್ದ ಆತನಿಗೆ ಎಚ್ಚರಿಕೆ ಇರಲಿಲ್ಲ. ಇನ್ನೊಂದೆಡೆ ಪುಟ್ಟ ಮಗುವೊಂದು ಮಲಗಿತ್ತು. ಈ ಕಡೆ ಉರಿ ಆವರಿಸಿ, ಇಡೀ ಮನೆ ಧಗಧಗ ಅನ್ನಲು ಆರಂಭವಾಯ್ತು. ಅದೇನೂ ಅದೃಷ್ಟವೋ ಏನೋ ಊರಲ್ಲಿದ್ದ ಮಹಿಳೆಯರೇ ಓಡಿ ಬಂದರು. ಒಂದಿಬ್ಬರು ಮನೆಯೊಳಗೆ ಜೀವದ ಹಂಗು ತೊರೆದು ನುಗ್ಗಿದ್ದಾರೆ.. ಹೇಳಿಕೇಳಿ ಗುಡಿಸಲು ಜೋಪಡಿ ಮನೆ, ಕೆಲವೇ ನಿಮಿಷಗಳಲ್ಲಿ ಬೂದಿಯಾಗುತ್ತಿದ್ದ ಮನೆಯೊಳಗೆ ನುಗ್ಗಿದ ಮಹಿಳೆಯರು ಮಗುವನ್ನ ಹೊರಕ್ಕೆ ಎತ್ತಿಕೊಂಡು ಬಂದಿದ್ದಾರೆ. ಯಜಮಾನನ್ನ ಎಳೆದು ತಂದು ಜೀವ ಉಳಿಸಿದ್ದಾರೆ. ಕಲ್ಲೇಶ್ ಎಂಬುವರ ಗುಡಿಸಿಲಿನಲ್ಲಿ ಈ ಘಟನೆ ನಡೆದಿತ್ತು. ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹೋದರು ಸಹ ಊರಿನ ಹೆಂಗಸರ ಸಾಹಸದಿಂದ ಎರಡು ಜೀವ ಉಳಿಯಿತು. ಅಷ್ಟರಲ್ಲಿ ವಿಷಯ ತಿಳಿದು ವಾಪಸ್​ ಆದ ಪುರುಷರು ಬೆಂಕಿ ಹರಡುವುದನ್ನ ತಪ್ಪಿಸಿದರು.

ಹಾವು ಕಚ್ಚಿ ಕಾರ್ಮಿಕನೊರ್ವ ಸಾವು..!

ಬಾಳೆಹೊನ್ನೂರು: ಹಾವು ಕಚ್ಚಿ ಕಾರ್ಮಿಕನೊರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರು ವ್ಯಾಪ್ತಿಯ ಮಾಗುಂಡಿಯಲ್ಲಿ ನಡೆದಿದೆ. ಹನೀಫ್ (37) ಹಾವು ಕಚ್ಚಿ ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಬಟ್ಟೆಯನ್ನು ಬಿಸಿಲಿಗೆ ಒಣ ಹಾಕುವ ಸಂದರ್ಭದಲ್ಲಿ ಬಲಗಾಲಿಗೆ ಹಾವು
ಕಚ್ಚಿದ್ದು, ಆ ಸಂದರ್ಭದಲ್ಲಿ ತೋಟದ ಕೆಲಸಕ್ಕೆ ತೆರಳಿದ್ದ ನನಗೆ ಕರೆ ಮಾಡಿ ತಿಳಿಸಿದರು, ತಕ್ಷಣವೇ ಪ್ರಾಥಮಿಕ ಚಿಕಿತ್ಸೆಗಾಗಿ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ರವಾನಿಸುವಾಗ
ಸಾವನ್ನಪ್ಪಿದ್ದಾರೆ ಎಂದು ಅವರ ಪತ್ನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಮೃತಪಟ್ಟ ಹನೀಫ್ ಮಾಗುಂಡಿ ಪಂಚಾಯಿತಿಯ ತಾತ್ಕಾಲಿಕ ಕಸ ವಿಲೇವಾರಿ ವಾಹನದ ಚಾಲಕನಾಗಿದ್ದರು ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಗುಂಡಿಯಲ್ಲಿ ಘಟನೆ ನಡೆದಿದೆ.

ರಿಪ್ಪಿನಪೇಟೆಯಲ್ಲಿ ಅಪಘಾತ: ಗಾಯ

ರಿಪ್ಪನಪೇಟೆ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಅರಸಾಳು ಬಳಿಯಲ್ಲಿ ಗುರುವಾರ ಖಾಸಗಿ ಬಸ್ ಹಾಗೂ ಒಮಿನಿ ನಡುವೆ ಡಿಕ್ಕಿಯಾಗಿದ್ದು ಘಟನೆಯಲ್ಲಿ ಓರ್ವನಿಗೆ ಗಾಯಗವಾಗಿದೆ. ರಿಪ್ಪನ್​ಪೇಟೆಯ ಸಮೀಪದ ಅರಸಾಳು ಬಳಿ ಘಟನೆ ನಡೆದಿದ್ದು ರಿಪ್ಪನ್​ಪೇಟೆಯಿಂದ ಶಿವಮೊಗ್ಗದ ಕಡೆಗೆ ಖಾಸಗಿ ಬಸ್ ಹೋಗುತ್ತಿತ್ತು. ಅದೇ ಸಂದರ್ಭದಲ್ಲಿ ಶಿವಮೊಗ್ಗದಿಂದ ರಿಪ್ಪನ್​ಪೇಟೆಗೆ ಮಾರುತಿ ಒಮಿನಿ ಬರುತ್ತಿತ್ತು. ಅರಸಾಳು ಕೆರೆಯ ಬಳಿ ಸಿಗುವ ಟರ್ನಿಂಗ್​ನಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಒಮಿನಿ ಚಾಲಕ ಗಾಗೊಂಡಿದ್ದು, ಆತನನ್ನು ಗರ್ತಿಕೆರೆ ಮೂಲದವನು ಎಂದು ತಿಳಿದುಬಂದಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಇನ್ನೂ ಘಟನೆಯಲ್ಲಿ ಕಾರು ಬಹುತೇಕ ಜಖಂಗೊಂಡಿದೆ.

ಸ್ನೇಹಿತನ ಕಾರು ಪಡೆದು ಪರಾರಿ!

ಶಿವಮೊಗ್ಗ : ಪತ್ನಿಗೆ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಕೇಳಿದ ವ್ಯಕ್ತಿಗೆ , ತನ್ನ ಕಾರನ್ನ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ತಮ್ಮ ಏರಿಯಾದಲ್ಲಿ ಟಿ ಅಂಗಡಿ ನಡೆಸ್ತಿದ್ದ ವ್ಯಕ್ತಿಯೊಬ್ಬರ ಪರಿಚಯದಲ್ಲಿದ್ದರು. ಪರಿಚಯಸ್ತ ವ್ಯಕ್ತಿಯು ತನ್ನ ಹೆಂಡತಿಗೆ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಬೇಕು ಹೀಗಾಗಿ ನಿಮ್ಮ ಕಾರನ್ನ ಸ್ವಲ್ಪ ಕೊಡಿ ಎಂದು ಟಿ ಕುಡಿಯಲು ಬಂದಿದ್ದ ವೇಳೆ ದೂರುದಾರರಿಗೆ ಹೇಳಿದ್ದಾರೆ. ಇದನ್ನ ನಂಬಿದ ಸಂತ್ರಸ್ತರು ತಮ್ಮ ಕಾರನ್ನು ತಾವೆ ಖುದ್ದಾಗಿ ತೆಗೆದುಕೊಂಡು ಹೋಗಿ ಕೊಟ್ಟಿದ್ದರು. ಆದರೆ ಟೀ ಅಂಗಡಿಯವ ಕಾರನ್ನ ವಾಪಸ್​ ಅದರ ಮಾಲಿಕರಿಗೆ ಮುಟ್ಟಿಸಲಿಲ್ಲ. ಇದರಿಂದ ಅನುಮಾನಗೊಂಡು ಫೋನ್ ಮಾಡಿದರು, ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವುದು ಗೊತ್ತಾಗಿದೆ. ವಾಹನ ಜಿಪಿಎಸ್ ಚೆಕ್ ಮಾಡಿದರೆ, ಅದು ನೆರೆಯ ಜಿಲ್ಲೆಯಲ್ಲಿ ಇರುವುದು ಗೊತ್ತಾಗಿದೆ. ಹೀಗಾಗಿ ತಮ್ಮ ಕಾರನ್ನ ಯಾರಿಗೋ ಮಾರಿರುವ ಅನುಮಾನದ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಭದ್ರಾವತಿ : ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸ್ತಿದ್ದ ವೇಳೆ ದ್ವಿಚಕ್ರ ವಾಹನವೊಂದರಲ್ಲಿ ಬಂದವ ಪೊಲೀಸರ ಚೆಕ್ಕಿಂಗ್ ನೋಡುತ್ತಲೇ ಹತ್ತಿರ ಬಂದವನು ಬೈಕ್​ ತಿರುಗಿಸಿ ಓಡಲು ಆರಂಭಿಸಿದ್ದಾನೆ. ಆತ ಹಾಗೂ ಆತನಿದ್ದ ಬೈಕ್​ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ತಕ್ಷಣ ಹಿಂಬಾಲಿಸಿ ಆತನನ್ನ ಹಿಡಿದಿದ್ದಾರೆ. ಈ ವೇಳೆ ಮೊದಲು ತನ್ನದೇ ಬೈಕ್​ ಡಾಕ್ಯುಮೆಂಟ್ ಮನೆಯಲ್ಲಿ ಇಟ್ಟಿದ್ದೇನೆ ಎಂದಿದ್ದಾನೆ. ಆನಂತರ ಕಳೆದುಹೋಗಿದೆ ಎಂದಿದ್ದಾನೆ. ಬಳಿಕ ಜೋರು ಮಾಡಿದ ಮೇಲೆ ಸಾರ್ ಬೈಕ್ ಕದ್ದಿದ್ದು ಮಾರೋದಕ್ಕೆ ತರ್ತಿದ್ದೇನೆ ಎಂದಿದ್ದಾನೆ. ತಕ್ಷಣ ಅಲರ್ಟ್​ ಆದ ಪೊಲೀಸರು ಆತನನ್ನು ಸ್ಟೇಷನ್​ಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೇ ಬಂಧಿತ ವ್ಯಕ್ತಿ ಉಮೇಶ ಅಲಿಯಾಸ್ ಮುದ್ದ ಬಿನ್ ಹರಿಹರಪ್ಪ ನಡೆಸಿದ ನಾಲ್ಕು ಕಳ್ಳತನ ಪ್ರಕರಣಗಳು ಬಯಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.