ಶಿವಮೊಗ್ಗದಲ್ಲಿ ರಾತ್ರಿ ಗುಂಪು ಘರ್ಷಣೆ!
– ಶಿವಮೊಗ್ಗದ ಆಲ್ಕೋಳ ಸಮೀಪ 2 ಗುಂಪುಗಳ ಸಂಘರ್ಷ: ಐವರಿಗೆ ಚಾಕು ಇರಿತ
– ಶಿಕಾರಿಪುರ: ಕ್ಯಾನ್ಸರ್ ಮಹಾಮಾರಿಗೆ ಪೊಲೀಸ್ ಇನ್ಸ್ಪೆಕ್ಟರ್ ಬಲಿ
– ಎನ್. ಆರ್. ಪುರ: ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ಸಮೀಪ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದ್ದು 5 ಮಂದಿಗೆ ಚಾಕು ಇರಿಯಲಾಗಿದೆ. ಆಲ್ಕೋಳ ಸಮೀಪ ಇರುವ ವಿಶಾಲ್ ಮಾರ್ಟ್ ಬಳಿಯಲ್ಲಿ ಎಲ್ಐಸಿ ಆಫೀಸ್ ಹಿಂಭಾಗದಲ್ಲಿ ಎರಡು ಗುಂಪುಗಳು ಪರಸ್ಪರ ಮಾರಾಮಾರಿಯಾಗಿದೆ. ಘಟನೆಯಲ್ಲಿ ಐದು ಮಂದಿಗೆ ಚಾಕುವಿಗೆ ಇರಿಯಲಾಗಿದೆ ಗಂಭೀರ ಗಾಯಗೊಂಡ ಓರ್ವನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದೆ. ಈ ಭಾಗದಲ್ಲಿರುವ ಪವನ್ ಮತ್ತು ಕಿರಣ್ ಎಂಬಿಬ್ಬರು ಸ್ನೇಹಿತರಾಗಿದ್ದು, ಇವರ ನಡುವೆ ಕಳೆದ 2 ವರ್ಷಗಳಿಂದ ಸಣ್ಣಪುಟ್ಟ ವಿಚಾರಕ್ಕೆ ಬಿನ್ನಾಭಿಪ್ರಾಯಗಳಿದ್ದವು.
ಅಲ್ಲದೆ ಇದೇ ಕಾರಣಕ್ಕೆ ಕಿರಿಕ್ ಆಗುತ್ತಿತ್ತು. ಗುರುವಾರ ರಾತ್ರಿ ನೇತಾಜಿ ಸರ್ಕಲ್ನಲ್ಲಿ ಇದೇ ವಿಚಾರಕ್ಕೆ ಕಿರಿಕ್ ಆಗಿದೆ. ನೇತಾಜಿ ಸರ್ಕಲ್ನಲ್ಲಿ ನಡೆದ ಜಗಳದ ಬೆನ್ನಲ್ಲಿಯೇ ಪವನ್ ಆ್ಯಂಡ್ ಟೀಂ ವಿಶಾಲ್ ಮಾರ್ಟ್ ಸಮೀಪವಿದ್ದ ಕಿರಣ್ ಆ್ಯಂಡ್ ಗ್ಯಾಂಗ್ ಮೇಲೆ ಅಟ್ಯಾಕ್ ಮಾಡಿದೆ. ಈ ವೇಳೆ ಕಿರಣ್ ಗ್ಯಾಂಗ್ನ ಐವರಿಗೆ ಗಾಯಗಳಾಗಿದೆ. ಐವರಿಗೆ ಇರಿತವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದು ಗ್ಯಾಂಗ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕ್ಯಾನ್ಸರ್ ಮಹಾಮಾರಿಗೆ ಪೊಲೀಸ್ ಇನ್ಸ್ಪೆಕ್ಟರ್ ಬಲಿ
ಶಿವಮೊಗ್ಗ: ಬೀದರ್ ಜಿಲ್ಲೆಯ ಔರಾದ್ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ನಳೀನಕೊಪ್ಪ ಗ್ರಾಮದ ಜಗದೀಶ್ ನಾಯ್ಯ ಅಕಾಲಿಕ ಮರಣ ಹೊಂದಿದ್ದಾರೆ. ಶಿಕಾರಿಪುರ ತಾಲೂಕಿನ ನಳಿನಕೊಪ್ಪ ಗ್ರಾಮದ ಮಧ್ಯಮ ವರ್ಗದ ಕುಟುಂಬದಿಂದ ಬಂದ ಜಗದೀಶ್ ನಾಯ್ಕ್ ಪ್ರಸ್ತುತ ಔರಾದ್ ಸ್ಟೇಷನ್ ಗಾಂಧಿ ಗಂಜ್ ಪೊಲೀಸ್ ಠಾಣೆ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಂದೆ ಈರ ನಾಯ್ಕ, ತಾಯಿ ಸಾವಿತ್ರಿ ಬಾಯಿ,
ಒಬ್ಬ ಸಹೋದರ ಸಹ ಸಿವಿಲ್ ಪೊಲೀಸ್ ಸೇವೆ ಸಲ್ಲಿಸುತ್ತಿದ್ದರು. ಮೃತರು ಇಬ್ಬರು ಸಹೋದರಿಯನ್ನ ಹೊಂದಿದ್ದಾರೆ.
ಸಹೋದರರು ಇಬ್ಬರೂ ಸಹ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ವಿಶೇಷವಾಗಿದ್ದು,ಮಗನ ಅಕಾಲಿಕ ಮರಣಕ್ಕೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕ್ಯಾನ್ಸರ್ ಮಹಾಮಾರಿಯಿಂದ ಪ್ರಾಣ ತ್ಯಜಿಸಿದ್ದಾರೆ. ಕಳೆದ 2 ವರ್ಷದ ಹಿಂದೆ ಶಿವಮೊಗ್ಗದ ಹೊಸಕೊಪ್ಪ ಸಮೀಪದ ಯುವತಿಯನ್ನ ಮದುವೆ ಸಹ ಆಗಿದ್ದರು. ಇಡೀ ಶಿವಮೊಗ್ಗ ಪೊಲೀಸ್ ಇಲಾಖೆ ಸ್ನೇಹಿತರು, ಕುತುಂಬಸ್ತರು ಜಗದೀಶ್ ನಾಯಕರ ಅಕಾಲಿಕ ಮರಣಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಹಾನಿ
ಎನ್.ಆರ್.ಪುರ: ಎನ್.ಆರ್.ಪುರ ಪಟ್ಟಣದ ಮಂಡಗದ್ದೆ ಸರ್ಕಲ್ ಬಳಿ ಇರುವ ಮಂಜುನಾಥ್ ಎಂಬುವರ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅಹುತಿಯಾಗಿದ್ದು ಮನೆ ಸಂಪೂರ್ಣ ನಾಶವಾದ ಘಟನೆ ಗುರುವಾರ ನಡೆದಿದೆ. ಅಗ್ನಿ ಶಾಮಕ ದಳದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.