Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್
ಚಿಕ್ಕಮಗಳೂರಲ್ಲಿ ಕಾರು ಕೆರೆಗೆ ಓರ್ವ ಸಾವು, ಶಿವಮೊಗ್ಗದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಾವು!
– ತೀರ್ಥಹಳ್ಳಿ: ಪಟ್ಟಣದ ಅಂಗಡಿಗೆ ನುಗ್ಗಿದ ಬೃಹತ್ ಗಾತ್ರದ ಉಡ.!
– ಸಾಗರ: ಬೇಳೂರು ಗೋಪಾಲಕೃಷ್ಣ ವಿರುದ್ಧ “ವಿಮಲ್ ಕಹಾನಿ” ರೀಲ್ಸ್ ಹರಿಬಿಟ್ಟ ಕಿಡಿಗೇಡಿಗಳು: ಕೇಸ್

NAMMUR EXPRESS NEWS
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ಸಾವಿಗೀಡಾಗಿದ ಘಟನೆ ಅಂಬಳೆ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮೃತನನ್ನು ಗ್ರಾಮದ ದಿನೇಶ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಚಿಕ್ಕಮಗಳೂರಿಗೆ ಹೋಗಿ ಗ್ರಾಮಕ್ಕೆ ವಾಪಸ್‌ ಆಗುವ ವೇಳೆ ಈ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನ ಒಳಗೆ ನೀರು ತುಂಬಿದ್ದು ಒಳಗಿದ್ದ ಚಾಲಕ ಕೋಡಲೇ ಹೊರಗೆ ಬಂದಿದ್ದು, ಮತ್ತೋರ್ವನಿಗೆ ಹೊರಗೆ ಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ.

– ಶಿವಮೊಗ್ಗ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಾವು !

ಶಿವಮೊಗ್ಗ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ಆಯನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. ಅಶೋಕ ಎಂಬುವರಿಗೆ ಸೇರಿದ ಸುಮಾರು 12 ಅಡಿ ಆಳವಿರುವ ಕೃಷಿ ಹೊಂಡದಲ್ಲಿ ಚನ್ನಹಳ್ಳಿ ಗ್ರಾಮದ ಮಹೇಶ್ ಎಂಬುವರ ಮಗ ಅಭಯ್ (14) ಕಾಲು ಜಾರಿ ಬಿದ್ದು ಮೇಲಕ್ಕೆ ಬರುವಾಗ ಕಾಲು ಜಾರಿ ಪುನಃ ಕೃಷಿಹೊಂಡದ ನೀರಿಗೆ ಬಿದ್ದಿದ್ದಾನೆ. ಮೊದಲೇ ಸುಸ್ತಾಗಿದ್ದ ಅಭಯ್ ನೀರಿನಿಂದ ಮೇಲಕ್ಕೆ ಬರಲಾಗದೆ ಜೋರಾಗಿ ಕಿರುಚಿಕೊಂಡಿದ್ದರಿಂದ ಅಲ್ಲೇ ಪಕ್ಕದ ಜಮೀನಿನಲ್ಲಿದ್ದ ನೀಲಣ್ಣ ಎಂಬುವರ ಮಗನಾದ ಮಾಲ್ತೇಶ್ (29) ಅಭಯ್ ಅವರನ್ನು ರಕ್ಷಣೆ ಮಾಡಲು ಕೃಷಿ ಹೊಂಡಕ್ಕೆ ಇಳಿದಿದ್ದಾರೆ ಅಷ್ಟರಲ್ಲೇ ಇವರ ಕಿರುಚಾಟದ ಶಬ್ದ ಕೇಳಿ ಸ್ಥಳಕ್ಕೆ ಅಕ್ಕ-ಪಕ್ಕದ ಜಮೀನಿನಲ್ಲಿದ್ದ ರೈತರು ಕೃಷಿ ಹೊಂಡದ ಬಳಿ ಧಾವಿಸಿದ್ದು ಅಭಯ್ ಹಾಗೂ ಮಾಲ್ತೇಶನನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಅಷ್ಟರಲ್ಲೇ ಇಬ್ಬರು ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮಾಲ್ತೇಶನಿಗೆ ಮದುವೆಯಾಗಿ ಕೇವಲ ಎಂಟು ತಿಂಗಳಾಗಿದ್ದು ಆತನ ಪತ್ನಿ ಇದೀಗ ತುಂಬು ಗರ್ಭಿಣಿ. ಸ್ಥಳೀಯರ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ತೀರ್ಥಹಳ್ಳಿ: ಪಟ್ಟಣದ ಅಂಗಡಿಗೆ ನುಗ್ಗಿದ ಬೃಹತ್ ಗಾತ್ರದ ಉಡ.!

ತೀರ್ಥಹಳ್ಳಿ: ಅಜಾದ್ ರಸ್ತೆಯಲ್ಲಿರುವ ಶ್ರೀ ಕಾಫಿ ವರ್ಕ್ಸ್ ಅಂಗಡಿಯೊಳಗೆ ಮೇ 22ರಂದು ಅಂದಾಜು 5 ಅಡಿ ಉದ್ದದ ಉಡ ಒಂದು ನುಗ್ಗಿತ್ತು. 2-3 ದಿನಗಳಿಂದ ತುಂಗಾನದಿ ಛತ್ರಕೇರಿ ಕೆರೆದಂಡೆ ಆಸುಪಾಸಿನಲ್ಲಿ ತಿರುಗುತ್ತಿದ್ದ ಈ ಪ್ರಾಣಿ ನಿನ್ನೆ ಜನ-ವಾಹನಗಳಿಂದ ಗಾಬರಿ ಬಿದ್ದು ಅಂಗಡಿ ಒಳಗೆ ಸೇರಿಕೊಂಡಿತ್ತು. ಅಂಗಡಿ ಮಾಲೀಕರಾದ ನೀಲೇಶ್ ಜವಳಿ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದರು. ತಕ್ಷಣ ಸ್ಥಳಕ್ಕೆ ಬಂದ ಸುರಕ್ಷಿತ ಅರಣ್ಯ ಸಿಬ್ಬಂದಿಗಳು ಉಡವನ್ನು ಸೆರೆಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟರು. ಬೃಹತ್ ಗಾತ್ರದ ಜೀವಿಯನ್ನು ನೋಡಲು ಭಾರೀ ಸಂಖ್ಯೆಯ ಜನ ಜಮಾಯಿಸಿದ್ದರು.

– ಬೇಳೂರು ಗೋಪಾಲಕೃಷ್ಣ ವಿರುದ್ಧ “ವಿಮಲ್ ಕಹಾನಿ” ರೀಲ್ಸ್ ಹರಿಬಿಟ್ಟ ಕಿಡಿಗೇಡಿಗಳು

ಸಾಗರ : ಕರ್ನಾಟಕ ರಾಜ್ಯ ಅರಣ್ಯ ಮತ್ತು ಕೈಗಾರಿಕೆ ನಿಗಮದ ಅಧ್ಯಕ್ಷರು ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ರವರು ಶಾಸಕರು ಇತ್ತೀಚೆಗೆ ಸಾಗರದ ಶಿವಮೊಗ್ಗ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜು ಮುಂಭಾಗದ ಅಂಗಡಿಯಲ್ಲಿ ಗುಟ್ಕಾ ಹಾಗೂ ಸಿಗರೇಟು, ಮೊದಲಾದ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ಕತ್ತಾಗಿ ವೈರಲ್ ಆಗಿತ್ತು. ಸದರಿ ವಿಡಿಯೋವನ್ನು ದುರುಪಯೋಗಪಡಿಸಿಕೊಂಡ ಅಪರಿಚಿತ ಕಿಡಿಗೇಡಿಗಳು ಜನಪ್ರಿಯ ಶಾಸಕ ಗೋಪಾಲಕೃಷ್ಣ ಬೇಳೂರುರ ವಿರುದ್ಧ ಇನ್ಸ್ಟಾಗ್ರಾಮಿನಲ್ಲಿ ಆಪಪ್ರಚಾರ ಮಾಡುವ ಉದ್ದೇಶದಿಂದ ಆರೋಪಿಯು ಇನ್ಸಾಗ್ರಾಮ್ ನಲ್ಲಿ”khadeema_congress” ಎಂಬ ಖಾತೆಯಿಂದ ವೀಡಿಯೋ ಒಂದನ್ನು ಹರಿಬಿಟ್ಟಿದ್ದಾನೆ.

ಆರೋಪಿಯು ಶಾಸಕರಿಗೆ ತೋಜೋವಧೆ ಮಾಡುವ ಮತ್ತು ಆಗೌರವವನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದಾನೆ ಎಂದು ಆರೋಪಿಸಿ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ “ಚಿನ್ಮಯ್ ಸಿ.ಎಂ” ರವರು ಸಾಗರ ಪೇಟೆ ಠಾಣೆಗೆ ದೂರು ನೀಡಿ ಆರೋಪಿಯ ಈ ಕೃತ್ಯವು ಕಾನೂನುಬಾಹಿರವಾಗಿದ್ದು ಗೌರವಾನ್ವಿತ ಶಾಸಕರ ತೋಜೋವಧೆ ಮಾಡಿದ ಆರೋಪಿಯನ್ನು ಪತ್ತೆ ಹಚ್ಚಿ ಆರೋಪಿಯ ವಿರುದ್ಧ ಕಾನೂನಿನ ಕಠಿಣ ಕ್ರಮಕ್ಕಾಗಿ ಒತ್ತಾಯಿಸಿ ದೂರನ್ನು ನೀಡಿದ್ದಾರೆ. ಇದೀಗ ಸಾಗರ ಪೇಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರನ್ನು ದಾಖಲಿಸಿಕೊಂಡ ಸಾಗರ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.