Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

– ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಸಮಯ ಬದಲು
– ಶಿವಮೊಗ್ಗದಲ್ಲಿ ಬೈಕ್ ಅಪಘಾತಕ್ಕೆ ಇಬ್ಬರು ಬಲಿ!
– ಚಿಕ್ಕಮಗಳೂರು: ಪ್ರಪಾತಕ್ಕೆ ಕಾರು ಬಿದ್ದು ಸಾವು

NAMMUR EXPRESS NEWS
ಮಂಗಳೂರು: ಅ.28ರಂದು ಶನಿವಾರ ಚಂದ್ರಗ್ರಹಣ ಇರುವುದರಿಂದ ಶ್ರೀ ದೇವಲಾಯದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತಾಧಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ
ಅ.28ರಂದು ಶನಿವಾರ ರಾತ್ರಿ ಮಹಾಪೂಜೆ ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯಗೊಳ್ಳಲಿದೆ.ಆ ಬಳಿಕ ಶ್ರೀ ದೇವರ ದರುಶನಕ್ಕೆ ಅವಕಾಶ ಇರುವುದಿಲ್ಲ.ಅಲ್ಲದೆ ಈ ದಿನ ಸಾಯಂಕಾಲ ಸಂಜೆಯ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ. ರಾತ್ರಿ ಪ್ರಸಾದ ಭೋಜನ ಪ್ರಸಾದ ವಿತರಣೆ ಇರುವುದಿಲ್ಲ ಎಂದು ಶ್ರೀ ದೇವಲಾಯದ ಪ್ರಕಟಣೆ ತಿಳಿಸಿದೆ.

200 ಅಡಿ ಆಳಕ್ಕೆ ಬಿದ್ದ ಕಾರು: ಓರ್ವ ಸಾವು

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆ ಹಾರ ಸಮೀಪ ಕಾರೊಂದು ಕಂದಕ್ಕೆ ಉರುಳಿದೆ. ಸುಮಾರು 200 ಅಡಿ ಆಳಕ್ಕೆ ಬಿದ್ದ ಕಾರಿನಲ್ಲಿದ್ದ ವ್ಯಕ್ತಿ ದುರ್ಮರಣ ಹೊಂದಿದ್ದಾರೆ. ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯ ಅಬ್ರುಕೊಡುಗೆ ಬಳಿ ಈ ಘಟನೆ ಸಂಭವಿಸಿದೆ. ಮೃತರು 38 ವರ್ಷದ ರಂಜನ್ ಎಂದು ಗುರುತಿಸಲಾಗಿದೆ. ಹೋಟೆಲ್​ ನಡೆಸ್ತಿದ್ದ ರಂಜನ್​ ಕಳಸದ ಕಡೆಗೆ ಹೊರಟಿದ್ದರು. ಈ ಮಧ್ಯೆ ಅವರಿದ್ದ ಕಾರು ನಿಯಂತ್ರಣ ತಪ್ಪಿ, ಟರ್ನಿಂಗ್​ನಲ್ಲಿ ಕಂದಕಕ್ಕೆ ಉರುಳಿದೆ. ಸುಮಾರು 200 ಅಡಿ ಆಳಕ್ಕೆ ಕಾರು ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ರಂಜನ್​ ರವರು ಸಾವನ್ನಪ್ಪಿದ್ದಾರೆ.

ಬೈಕ್ ಅಪಘಾತಕ್ಕೆ ಇಬ್ಬರು ಬಲಿ

ಶಿವಮೊಗ್ಗ: ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಸಂಭವಿಸಿದ ಘಟನೆಯಲ್ಲಿ ಪಾದಚಾರಿ ಹಾಗೂ ಬೈಕ್​ ಸವಾರ ಇಬ್ಬರು ಮೃತಪಟ್ಟಿರುವ ಘಟನೆ ಸುತ್ತುಕೋಟೆಯ ಬಳಿ ಬುಧವಾರ ರಾತ್ರಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆ ಗ್ರಾಮಾಂತರ ವ್ಯಾಪ್ತಿಯಲ್ಲಿ, ಬರುವ ಸುತ್ತುಕೋಟೆಯಲ್ಲಿ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಹನುಮಮಂತಪ್ಪ ಹಾಗೂ ಮೇಘರಾಜ್ ಎಂಬವರು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಹೊನ್ನಾಪುರದ ಮೇಘರಾಜ್ ಎಂಬವರು ಶಿವಮೊಗ್ಗ, ಆಯನೂರು , ಕುಂಸಿ ಚೋರಡಿ ಮಾರ್ಗವಾಗಿ ಶಿರಾಳಕೊಪ್ಪದ ಮಂಚಿಕೊಪ್ಪಕ್ಕೆ ಹೋಗುತ್ತಿದ್ದರು. ಈ ವೇಳೆ ಸುತ್ತುಕೋಟೆಯಲ್ಲಿ ಬಳಿ ಹನುಮಂತಪ್ಪ ಎಂಬವರು ನಡೆದುಕೊಂಡು ಬರುತ್ತಿದ್ದರು. ರಾತ್ರಿ ಕತ್ತಲಲ್ಲಿ ಮೇಘರಾಜ್​ ಬೈಕ್ ಹನುಮಂತಪ್ಪರವರಿಗೆ ಡಿಕ್ಕಿ ಹೊಡೆದಿದೆ. ಇನ್ನೊಂದೆಡೆ ನಿಯಂತ್ರಣಕ್ಕೆ ಸಿಗದ ಬೈಕ್​ ಕರೆಂಟ್ ಕಂಬಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಮೇಘರಾಜ್​ಗೆ ಗಂಭೀರ ಗಾಯವಾಗಿ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಪಾದಚಾರಿ ಹನುಮಂತಪ್ಪ ಆಸ್ಪತ್ರೆಗೆ ಸಾಗುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.