ಟಾಪ್ ನ್ಯೂಸ್ ಮಲ್ನಾಡ್
ಪತ್ನಿಯ ಕತ್ತು ಸೀಳಿ ಬರ್ಬರ ಕೊಲೆ!
– ಜಾತ್ರೆಗೆ ಬಂದಿದ್ದ ಪತ್ನಿ ಹಿಂಬಾಲಿಸಿ ಮಚ್ಚಲ್ಲಿ ಕೊಚ್ಚಿ ಹತ್ಯೆ
– ಶಿವಮೊಗ್ಗ : ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಮೊಬೈಲ್ ಅಂಗಡಿ ಬೆಂಕಿಗೆ ಆಹುತಿ!
– ಶಿಕಾರಿಪುರ : ಬೊಲೇರೋ ಡಿಕ್ಕಿಯಾಗಿ ಮಹಿಳೆ ಸಾವು
– ಶಿವಮೊಗ್ಗ : ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ
– ಶಿವಮೊಗ್ಗ : ಕಸ ಹಾಕಲು ತೆರಳಿದ್ದ ವೃದ್ಧೆ ಶವವಾಗಿ ಪತ್ತೆ
– ಮೂಡಿಗೆರೆ: ವಿದ್ಯಾರ್ಥಿ ಕೃಷಿ ಹೊಂಡದಲ್ಲಿ ಮುಳುಗಿ ಸಾವು
NAMMUR EXPRESS NEWS
ತರೀಕೆರೆ: ಪ್ರೀತಿಸಿ ವಿವಾಹವಾಗಿ ದೂರವಾಗಿದ್ದ ಪತ್ನಿ ತವರು ಮನೆಗೆ ಜಾತ್ರೆಗೆ ಬಂದಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ಪತಿ ಕೊಲೆ ಮಾಡಿದ್ದಾನೆ. ಮೇಘಾ (20) ಹತ್ಯೆಯಾದ ದುರ್ಧೈವಿ. ಬಟ್ಟೆ ಒಗೆಯಲು ಹೋದಾಗ ಹಿಂಬಾಲಿಸಿ ಬಂದು ಬರ್ಬರವಾಗಿ ಕೊಂದು ಭದ್ರಾ ಚಾನಲ್‌ನಲ್ಲಿ ರಕ್ತದೊಕುಳಿ ಹರಿಸಿದ್ದಾನೆ. ಪ್ರೀತಿಸುವಾಗಲೇ ಅತ್ಯಾಚಾರ ಎಸಗಿ ಪೋಕೋ ಪ್ರಕರಣ ಹಾಕಿಸಿಕೊಂಡು ಅದೇ ಬಾಲಕಿಯ ವಿವಾಹವಾಗಿ ನಿತ್ಯ ಕಿರುಕುಳ ಕೊಟ್ಟು ದೂರಾಗಿದ್ದ ಪತಿ ಹೊಂಚು ಹಾಕಿ ತವರಿಗೆ ಮುಳಕಟ್ಟಮ್ಮ ಜಾತ್ರೆಗೆ ಬಂದಿದ್ದ ಪತ್ನಿಯನ್ನು ಮಚ್ಚಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ತಾಲ್ಲೂಕಿನ ಕರಕುಚ್ಚಿ ಗ್ರಾಮದ ಮೇಘನಾಳನ್ನು ಅದೇ ಗ್ರಾಮದ ಚರಣ್ ಪ್ರೀತಿಸಿ ವಿವಾಹವಾಗಿದ್ದ ಬಾಲಕಿಯಾಗಿದ್ದ ಕಾರಣ ವಿವಾಹಕ್ಕೂ ಮೊದಲು ಅತ್ಯಾಚಾರ ಎಸಗಿದ್ದ ಕಾರಣ ಪೋಕ್ಸೋ ಪ್ರಕರಣ ದಾಖಲಾಗಿತ್ತು, ನಂತರ ಎರಡೂ ಮನೆಯವರು ಸೇರಿ ಇಬ್ಬರಿಗೂ ಮದುವೆ ಮಾಡಿದ್ದರು. ಕೆಲ ಕಾಲದ ಬಳಿಕ ನಿತ್ಯ ಪತ್ನಿಗೆ ಕಿರುಕುಳ ಕೊಡಲಾರಂಭಿಸಿದ ಇದರಿಂದ ಬೇಸತ್ತ ಮೇಘನಾ ಮನೆಯವರು ಅವಳನ್ನು ಅಜ್ಜಿಯ ಮನೆ ಬಿ.ಆರ್.ಪಿ ಗೆ ಕಳುಹಿಸಿದ್ದರು. ಕರಕುಚ್ಚಿಯಲ್ಲಿ ಮುಳಕಟ್ಟಮ್ಮ ಜಾತ್ರೆ ಇರುವ ಕಾರಣ ತವರು ಮನೆಗೆ ಬಂದಿದ್ದ ಅವಳು ಇಂದು ಹೊಳೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ವೇಳೆ ಹಿಂಬಾಲಿಸಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಶರಣ್ ತಲೆಮರೆಸಿಕೊಂಡಿದ್ದು ಲಕ್ಕವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಮೊಬೈಲ್ ಅಂಗಡಿ ಬೆಂಕಿಗೆ ಆಹುತಿ!
ಶಿವಮೊಗ್ಗ: ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಅಂಗಡಿಯೊಂದು ಧಗ ಧಗ ಹೊತ್ತಿ ಉರಿದಿದೆ. ಸುಮಾರು 4 ಲಕ್ಷ ರೂ ಮೌಲ್ಯದ ಕಂಪ್ಯೂಟರ್ ಮತ್ತು ರಿಪೇರಿಗೆ ಬಂದ ಮೊಬೈಲ್ ಹಾಗೂ ಮಾರಾಟದ ಹೊಸ ಮೊಬೈಲ್ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ವಾಸಿಂ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿಗೆ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಬೆಂಕಿಗೆ ಆಹುತಿಯಾಗಿದೆ. ಬಸ್ ನಿಲ್ದಾಣದ ಜನರಿಗೆ ಈ ದೃಶ್ಯಗಳನ್ನ ಒಮ್ಮಲೆ ಕಂಡು ಭಯಗೊಂಡಿದ್ದಾರೆ. ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
– ಶಿಕಾರಿಪುರ : ಬೊಲೇರೋ ಡಿಕ್ಕಿಯಾಗಿ ಮಹಿಳೆ ಸಾವು
ಶಿಕಾರಿಪುರ : ಬೊಲೇರೊ ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ತರಲಘಟ್ಟ ನಿವಾಸಿ ಮುತ್ತಮ್ಮ (60) ಮೃತರು. ಮುನೆ ಮುಂಭಾಗ ರಸ್ತೆ ದಾಟುತ್ತಿದ್ದ ಮುತ್ತಮ್ಮಗೆ ಶಿವಮೊಗ್ಗ ಕಡೆಯಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಬೊಲೇರೊ ವಾಹನ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿ ವೈದ್ಯರು ಮುತ್ತಮ್ಮ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
– ಶಿವಮೊಗ್ಗ : ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ
ಶಿವಮೊಗ್ಗ: ಗಾಂಧಿ ಬಜಾರ್ ನಲ್ಲಿರುವ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಬಾಗಿಲು ಮುರಿದು ಕಳ್ಳತನ ನಡೆದಿದೆ. ಸುಮಾರು 2 ಲಕ್ಷ ರೂ ಮೌಲ್ಯದ ನಗದ ಮತ್ತು ಚಿನ್ನಾಭರಣ ಕಳುವಾಗಿದೆ. ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿರುವ ಶ್ರೀ ಕಾಳಿಕಾ ಪರಮೇಶ್ವರಿ ದೇವಾಸ್ಥಾನದಲ್ಲಿ ಬೀಗ ಮುರಿದು ದೇವಾಸ್ಥಾನದ ಗರ್ಭಗುಡಿಗೆ ಹಾಕಿದ್ದ ಬೀಗಗಳನ್ನು ಸಹ ಮುರಿದು ದೇವರಿಗೆ ಧರಿಸಿದ್ದ ಬೆಳ್ಳಿಯ ಕಿರೀಟ 480 ಗ್ರಾಂ ತೂಕದ ಬೆಳ್ಳಿಯ ತ್ರಿಶೂಲ, ಬೆಳ್ಳಿಯ ಸೊಂಟದ ಪಟ್ಟಿ ಬಂಗಾರದ ತಾಳಿ, ತಾಮ್ರದ ಶೆಡ್ಡಪ್ಪ, 13 ಪಂಚಲೋಹದ ವಿಗ್ರಹಗಳು ಟೇಬಲ್ ಡ್ರಾ ದಲ್ಲಿಟ್ಟಿದ್ದ ನಗದು 52,000 /- ರೂ ಕಳುವಾಗಿದೆ. ಮತ್ತು ದೇವಿಯ ಮೂತರ್ ಮುಖದ ಮೇಲೆ ಗೀಚಿ ಡ್ಯಾಮೇಜ್ ಮಾಡಿದ್ದಾರೆ. ದೇವಸ್ಥಾನದ ಅಧ್ಯಕ್ಷ ರಮೇಶ್ ಅವರ ಮನೆಯ ಗೃಹಪ್ರವೇಶ ಕಾರ್ಯಕ್ರಮ ಇದ್ದುದ್ದರಿಂದ ಊಟದ ವ್ಯವಸ್ಥೆ ಶ್ರೀ ಕಾಳಿಕಾ ಪರಮೇಶ್ವರಿ ದೇವಾಸ್ಥಾನದ ಮೇಲ್ಬಾಗದ ಹಾಲ್ ನಲ್ಲಿ ಇಟ್ಟುಕೊಂಡಿದ್ದರು. ಏ.27 ರಾತ್ರಿ 11-30 ಏ28 ರ ಬೆಳಿಗ್ಗೆ,, 07-00 ಗಂಟೆಯ ಮದ್ಯಾವಧಿಯಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಬೆಳ್ಳಿಯ, ಬಂಗಾರದ, ಪಂಚಲೋಹದ ಸಾಮಾಗ್ರಿಗಳನ್ನು ಹಾಗೂ ನಗದು ಹಣ ಸೇರಿ ಒಟ್ಟು 1.97.300 /- ರೂ ಬೆಳೆ ಬಾಳುವ ವಸ್ತುಗಳನ್ನು ಕಳ್ಳತನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
– ಶಿವಮೊಗ್ಗ : ಕಸ ಹಾಕಲು ತೆರಳಿದ್ದ ವೃದ್ಧೆ ಶವವಾಗಿ ಪತ್ತೆ
ಶಿವಮೊಗ್ಗ: ಕಸ ಹಾಕಲು ಹೋಗಿದ್ದ ವೃದ್ಧೆ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಭದ್ರಾವತಿಯ ಶ್ರೀರಾಮ ನಗರದ ನಿವಾಸಿ ರಾಮೇಗೌಡರ ಪತ್ನಿ ಪದ್ಮ @ ಪದ್ಮಮ್ಮ(53), ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬೆಳಗ್ಗಿನ ಜಾವ ಸುಮಾರು 5.30 ಗಂಟೆಗೆ ಪದ್ಮ ಎದ್ದು ಮನೆ ಕಸ ಗುಡಿಸಿ, ಕಸ ಮತ್ತು ಕೋಳಿ ಕಸವನ್ನು ಬಿಸಾಕಿ ಬರಲು ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಚಾನಲ್ ಹತ್ತಿರ ಹೋಗಿದ್ದಾರೆ. ನಂತರ ಸುಮಾರು ಬೆಳಿಗ್ಗೆ 06.00 ಗಂಟೆಗೆ ಪದ್ಮರರವರ ಪಕ್ಕದ ಮಬೆಯವರು ಬಂದು ರಾಮೇಗೌಡರನ್ನ ಜೆ.ಕೆ ಇಂಡಸ್ಟ್ರೀಸ್ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಜೆ.ಕೆ ಇಂಡಸ್ಟ್ರಿಟೀಸ್ ಮುಂದೆ ಇರುವ ಭದ್ರಾವತಿ-ಚನ್ನಗಿರಿ ರಾಜ್ಯ ಹೆದ್ದಾರಿ ಟಾರ್ ರಸ್ತೆಯ ಮೇಲೆ ಪದ್ಮರವರ ಮೃತ ದೇಹ ಪತ್ತೆಯಾಗಿದ್ದಾರೆ. ಬೆಳಗಿನ ಜಾವ ಸುಮಾರು 05.50 ಗಂಟೆಗೆ ಕಸ ಬಿಸಾಕಲು ತೆರಳಿದ್ದ ವೃದ್ಧೆ ಪದ್ಮರಿಗೆ ಜೆ.ಕೆ ಇಂಡಸ್ಟ್ರೀಸ್ ಮುಂದೆ ಇರುವ ಭದ್ರಾವತಿ-ಚೆನ್ನಗಿರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಭದ್ರಾವತಿ ಕಡೆಯಿಂದ ಬಂದ ಕಾರು ಗುದ್ದಿದೆ. ಗುದ್ದಿದ ಕಾರು ಪದ್ಮರವರ ಜೀವ ತೆಗೆದಿದೆ. ಚಾಲಕ ನಿಲ್ಲಸದೆ ಪರಾರಿಯಾಗಿದ್ದಾನೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
– ಮೂಡಿಗೆರೆ: ಕೃಷಿ ಹೊಂಡದಲ್ಲಿ ಮುಳುಗಿ ಸಾವು !
ಮೂಡಿಗೆರೆ : ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಫಿ ತೋಟದ ಮಾಲಿಕರೊಬ್ಬರ ಜಮೀನಿನಲ್ಲಿದ್ದ ಬೃಹತ್ ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮೃತ ಯುವಕನನ್ನು ಹಾವೇರಿ ಜಿಲ್ಲೆಯ ಮಕರವಳ್ಳಿ ಗ್ರಾಮದ ಆಕಾಶ್ ಎಂ.ಪಿ (21) ಎಂದು ಗುರುತಿಸಲಾಗಿದ್ದು, ಈತ ಕಳೆದ 15 ವರ್ಷಗಳಿಂದbಬೆಂಗಳೂರಿನಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದ. ಏ.27ರಂದು ತನ್ನ ಅಣ್ಣ ಕುಶಾಲ್ ಹಾಗೂ ಸ್ನೇಹಿತದಾರ ಭರತ್, ಶ್ರೇಯಸ್ ಎಂಬುವವರೊಂದಿಗೆ ಆಕಾಶ್ ಬೆಂಗಳೂರಿನಿಂದ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ಎನ್ನಲಾಗಿದೆ.
ಗೋಣಿಬೀಡು ಗ್ರಾಮದಲ್ಲಿರುವ ಜಯ ರಾಮೇಗೌಡ ಎಂಬುವವರ ಹೋಮ್ ಸ್ಟೇನಲ್ಲಿ ಉಳಿದು ಕೊಂಡಿದ್ದರು. ಭಾನುವಾರ ಸಂಜೆ ನಾಲ್ವರು ಜಯ ರಾಮೇಗೌಡ ಅವರ ಜಮೀನಿನಲ್ಲಿದ್ದ ಬೃಹತ್ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದರು ಎಂದು ಹೇಳಲಾಗಿದೆ. ಈ ವೇಳೆ ಕೃಷಿ ಹೊಂಡದ ಆಳದ ಅರಿವಿದರ ಆಕಾಶ್ ಈಜಾಡುತ್ತ ಆಳದ ಗುಂಡಿಗೆ ಇಳಿದಿದ್ದಾನೆ. ಈ ವೇಳೆ ಗುಂಡಿಯ ಕೆಸರಿನಲ್ಲಿ ಸಿಲುಕಿಕೊಂಡ ಆಕಾಶ್ ಮೇಲೆ ಬರಲಾರದೇ ನಾಪತ್ತೆಯಾಗಿದ್ದ. ಸಹೋದರ ಹಾಗೂ ಸ್ನೇಹಿತರು ಕೃಷಿ ಹೊಂಡದಲ್ಲಿ ಆಕಾಶ್‌ಗಾಗಿ ಎಷ್ಟೇ ಹುಡುಕಿದರೂ ಪತ್ತೆಯಾಗಿಲ್ಲ. ನಂತರ ಸ್ಥಳೀಯ ಮುಳುಗುತಜ್ಞ ಸ್ನೇಕ್ ಆರೀಫ್ ಜತೆ ಗೋಣಿಬೀಡು ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸಂಜೆ, ರಾತ್ರಿವರೆಗೂ ಹುಡುಕಾಡಿದರೂ ಆಕಾಶ್ ಮೃತದೇಹ ಪತ್ತೆಯಾಗಿಲ್ಲ. ಸೋಮವಾರ ಬೆಳಗ್ಗೆ ಮಂಗಳೂರು ಮೂಲದ ಮುಳುಗುತಜ್ಞರು ಹಾಗೂ ಸ್ನೇಕ್ ಆರೀಫ್ ಆಕಾಶ್ ಶವಕ್ಕಾಗಿ ಹುಡುಕಾಡಿದ ಸುಮಾರು 2 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.