Categories
ಮಲ್ನಾಡ್

ಈಜಲು ಹೋಗಿದ್ದ ಇಬ್ಬರು ಜೋಗದಲ್ಲಿ ನೀರಿಗೆ ಬಲಿ..!

ಈಜಲು ಹೋಗಿದ್ದ ಇಬ್ಬರು ಜೋಗದಲ್ಲಿ ನೀರಿಗೆ ಬಲಿ..!
– ಪ್ರವಾಸಕ್ಕೆ ಹೋದಾಗ ಜೋಗದ ದೇವಿ ಗುಂಡಿ ಬಳಿ ದುರಂತ
– ಹೊಸನಗರ: ಬೈಕ್ ಸವಾರನ ಮೇಲೆ ಬಿದ್ದ ಮರದ ತುಂಡು
– ಕೊಪ್ಪ: ರಸ್ತೆ ಮಧ್ಯೆ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು!

NAMMUR EXPRESS NEWS
ಸಾಗರ: ಮಲೆನಾಡಿನಲ್ಲಿ ಮತ್ತೊಂದು ನೀರಿನ ದುರಂತ ಸಂಭವಿಸಿದೆ. ಜೋಗದ ದೇವಿ ಗುಂಡಿ ಬಳಿ ಸಾಗರದ ಕೃಷಿ ಅಧಿಕಾರಿ ಕುಮಾರ್ ಕೆ. ಟಿ. ಹಾಗೂ ಕಲೆಕ್ಟರ್ ಅರುಣ್ ಈಜಲು ಹೋಗಿ ಮುಳುಗಿ ಸಾವು ಕಂಡಿದ್ದಾರೆ. ಸಾಗರದ ಕರ್ತವ್ಯ ನಿರತ ಕೃಷಿ ಅಧಿಕಾರಿ ಕುಮಾರ್ ಕೆ. ಟಿ ಹಾಗೂ ಕುಟುಂಬ ಜೋಗ ನೋಡಲು ಪ್ರವಾಸಕ್ಕೆ ಆಗಮಿಸಿದ್ದರು. ಜೋಗ ಸನಿಹದ ದೇವಿ ಗುಂಡಿ ಬಳಿ ಈಜಲು ಹೋಗಿ ಕೃಷಿ ಅಧಿಕಾರಿ ಕುಮಾರ್ ಕೆ. ಟಿ ಹಾಗೂ ಐಡಿಎಫ್ಸಿ ಬ್ಯಾಂಕ್ ಕಲೆಕ್ಟರ್ ಅರುಣ್ ಮುಳುಗಿ ನಿಧನರಾಗಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪೊಲೀಸ್ ಇಲಾಖೆ ಸ್ಥಳದಲ್ಲಿ ಮುಂದಿನ ತನಿಖೆಯಲ್ಲಿ ಮುಳುಗಿ ನಿಧನರಾಗಿರುವ ಶವ ಪತ್ತೆಯಾಗಿದೆ. ಶವವನ್ನೂ ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗುತ್ತಿದೆ.

ಬೈಕ್ ಸವಾರನ ಮೇಲೆ ಬಿದ್ದ ಮರದ ತುಂಡು: ಗಂಭೀರ

ಹೊಸನಗರ: ರಿಪ್ಪನ್‌ಪೇಟೆ ಸಮೀಪದ ಬಿಲ್ಲೇಶ್ವರದಲ್ಲಿ ಚಲಿಸುತಿದ್ದ ಬೈಕ್ ಸವಾರನ ಮೇಲೆ ಟಿಂಬರ್ ಲಾರಿಯಿಂದ ಮರದ ತುಂಡು ಬಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಕಡಸೂರು ಗ್ರಾಮದ ನವೀನ್ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ನವೀನ್ ಕುತ್ತಿಗೆ ಬಳಿ ಗಂಭೀರ ಗಾಯಗಳಾಗಿವೆ. ಮೆಗ್ಗಾನ್ ನಲ್ಲಿ ನವೀನ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಿಲ್ಲೇಶ್ವರ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತಿದ್ದ ನವೀನ್ ತಲೆ ಮೇಲೆ ಟಿಂಬರ್ ಲಾರಿಯಲ್ಲಿದ್ದ ಮರದ ತುಂಡು ಕುತ್ತಿಗೆ ಮೇಲೆ ಬಿದ್ದ ಪರಿಣಾಮ ಗಾಯಾಳುವಿನ ಕುತ್ತಿಗೆಯ ಭಾಗ ತುಂಡಾಗಿ ತೀವ್ರ ರಕ್ತಸ್ರಾವವಾಗಿದೆ.

ರಸ್ತೆ ಮಧ್ಯೆ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು!

ಕೊಪ್ಪ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರೊಂದು ರಸ್ತೆ ಮಧ್ಯೆಯೇ ಬೆಂಕಿಗಾಹುತಿಯಾದ ಘಟನೆ ಶನಿವಾರ ಕೊಪ್ಪ ತಾಲೂಕಿನ ಕುದುರೆಗುಂಡಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಬೆಂಕಿ ಕಂಡ ತಕ್ಷಣ ಕಾರಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಸಂಶಯ ವ್ಯಕ್ತವಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ, ಬೆಂಕಿಯ ತೀವ್ರತೆಯಿಂದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.