Categories
ಮಲ್ನಾಡ್

ಮಳೆಯಲಿ ಮಲೆನಾಡಿನ ಜೊತೆಯಲಿ…!

ಮಳೆಯಲಿ ಮಲೆನಾಡಿನ ಜೊತೆಯಲಿ…!
– ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಿಗರ ಲಗ್ಗೆ
– ಮಳೆಯಲ್ಲಿ ವೀಕೆಂಡ್ ಮಜಾ: ಪ್ರವಾಸಿಗರ ಹೆಚ್ಚಳ
– ಜೋಗ, ಶೃಂಗೇರಿ, ಮುಳ್ಳಯ್ಯನಗಿರಿಗೆ ಜನವೋ ಜನ
– ಮಳೆಗಾಲದ ಮಲೆನಾಡು ನೋಡಲು ಸೊಬಗು!

NAMMUR EXPRESS NEWS
ಶಿವಮೊಗ್ಗ/ ಚಿಕ್ಕಮಗಳೂರು: ಮಳೆಗಾಲದ ಮಲೆನಾಡು, ಜೋಗದ ಸೊಬಗು, ದೇವಾಲಯಗಳ ದರ್ಶನಕ್ಕಾಗಿ ಈ ವಾರದ ಅಂತ್ಯ ಇಡೀ ಮಲೆನಾಡಲ್ಲಿ ಪ್ರವಾಸಿಗರಿಂದ ತುಂಬಿ ಹೋಗಿತ್ತು.
ಬೆಂಗಳೂರು, ಮೈಸೂರು, ರಾಜ್ಯದ ವಿವಿಧ ಕಡೆಯಿಂದ ಮಲೆನಾಡ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೆ ಜನರು ಆಗಮಿಸಿದ್ದರು. ಎಲ್ಲಾ ಕಡೆ ವಾಹನ ಸಂಖ್ಯೆ ಹೆಚ್ಚಳವಾಗಿ ದ್ದವು.

ಜೋಗ, ಸಿಗಂದೂರು, ಆಗುಂಬೆ ಫುಲ್!:

ವಿಶ್ವವಿಖ್ಯಾತ ಜೋಗ ಜಲಪಾತದ ಜಲಧಾರೆಯ ವೈಭೋಗ ವೀಕ್ಷಣೆಗೆ, ಭಾನುವಾರ ಪ್ರವಾಸಿಗರ ದಂಡೇ ಜಲಪಾತಕ್ಕೆ ಹರಿದುಬಂದಿತ್ತು. ಹಲವು ದಿನಗಳ ನಂತರ ಜೋಗವು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಇನ್ನು ಸಿಗಂದೂರು, ಆಗುಂಬೆಯಲ್ಲೂ ಪ್ರವಾಸಿಗರು ಈ ವಾರ ಹೆಚ್ಚಾಗಿ ಕಂಡು ಬಂತು.
ಜೋಗಕ್ಕೆ ಹೆಚ್ಚಿನ ಜನ! ಮಲೆನಾಡಲ್ಲಿ ಬೀಳುವ ಮಳೆ, ಮಂಜು ಮುಸುಕಿದ ವಾತಾವರಣ, ಹಚ್ಚ ಹಸಿರಿನ ನಡುವೆ ಕಾಡು, ಧುಮ್ಮಿಕ್ಕುವ ಜಲಧಾರೆಯ ಸೊಬಗು ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ.

ಜುಲೈ ತಿಂಗಳ ಮೊದಲ ವಾರದಿಂದ ಶರಾವತಿ ಕಣಿವೆ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ವರ್ಷಧಾರೆಯಾಗುತ್ತಿದೆ. ಇದರಿಂದ ಮತ್ತೆ ಜಲಪಾತ ಭೋರ್ಗರೆಯಲಾರಂಭಿಸಿದೆ. ಇದನ್ನು ಕಣ್ಣುಂಬಿಕೊಳ್ಳಲು ವಿವಿಧೆಡೆಯಿಂದ ಪ್ರವಾಸಿಗರು ಬರಲು ಆರಂಭಿಸಿದ್ದಾರೆ.
ಇನ್ನು ಕುಪ್ಪಳಿ, ಕುಂದಾದ್ರಿ, ಮಂಡಗದ್ದೆ, ಕವಲೆದುರ್ಗಾದಲ್ಲೂ ಸಾವಿರಾರು ಪ್ರವಾಸಿಗರು ಕಂಡು ಬಂದರು.

ಕಾಫಿ ನಾಡಿಗೂ ಜನರ ಲಗ್ಗೆ!

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಹೊರನಾಡು, ಕೆಮ್ಮಣ್ಣುಗುಂಡಿ, ಮುಳ್ಳಯ್ಯನಗಿರಿ ಸೇರಿ ಬಹುತೇಕ ಕಡೆ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಮಳೆ ಕೊಂಚ ಕಡಿಮೆಯಾಗಿರುವುದು ಪ್ರವಾಸೋದ್ಯಮ ಹೆಚ್ಚಳಕ್ಕೆ ಕಾರಣ ಆಗಿದೆ.

ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!

[embedyt] https://www.youtube.com/watch?v=-UejHxlYBXg%5B/embedyt%5D

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.