Categories
ಮಂಗಳೂರು

ಮಂಗಳೂರಿನಲ್ಲಿ ನಟ ರಿಷಬ್ ಶೆಟ್ಟಿಗೆ ದೈವದ ಖಡಕ್ ಎಚ್ಚರಿಕೆ!

ಮಂಗಳೂರಿನಲ್ಲಿ ನಟ ರಿಷಬ್ ಶೆಟ್ಟಿಗೆ ದೈವದ ಖಡಕ್ ಎಚ್ಚರಿಕೆ!

– ಮಂಗಳೂರಿನಲ್ಲಿ ನಡೆದ ದೈವದ ನೇಮದಲ್ಲಿ ಪಾಲ್ಗೊಂಡ ಕಾಂತಾರದ ಹೀರೋ!
– ವಾರಾಹಿ ಪಂಜುರ್ಲಿ ದೈವ ಕೊಟ್ಟ ನುಡಿಯೇನು?

NAMMUR EXPRESS NEWS
ಮಂಗಳೂರು: ಕಾಂತಾರ ಚಿತ್ರದ ಮೂಲಕ ಸಿನಿಮಾ ರಂಗದಲ್ಲಿ ಇಡೀ ದೇಶದಲ್ಲೇ ಸಂಚಲನಗೊಳಿಸಿದ ನಟ ರಿಷಬ್ ಶೆಟ್ಟಿ ಅವರು ಕಾಂತಾರ-೧ರ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯದಲ್ಲೇ ಕರಾವಳಿಯ ಪ್ರಸಿದ್ಧ ಕ್ಷೇತ್ರಗಳಿಗೆ ಕುಟುಂಬ ಸಮೇತ ಭೇಟಿ ನೀಡಿದ್ದರು ಕೂಡಾ… ಇದೀಗ ಅವರು ಮಂಗಳೂರಿನಲ್ಲಿ ನಡೆದ ದೈವದ ನೇಮದಲ್ಲಿ ಪಾಲ್ಗೊಂಡಿದ್ದು ದೈವ ಅವರಿಗೆ ಎಚ್ಚರಿಕೆ ನೀಡಿದೆ.
ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ನೇಮೋತ್ಸವದಲ್ಲಿ ಅವರು ಪಾಲ್ಗೊಂಡಿದ್ದು ದೈವ ಅವರಿಗೆ `ಜಗತ್ತಲ್ಲಿ ನಿನಗೆ ಶತ್ರುಗಳೇ ತುಂಬಿದ್ದಾರೆ. ನಿನ್ನ ಕುಟುಂಬ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಂಬಿದ ದೈವ ಕೈ ಬಿಡುವುದಿಲ್ಲ. ನನಗೆ ಸೇವೆ ನೀಡುವ ಹರಕೆ ಹೇಳಿಕೋ. ಐದು ತಿಂಗಳೊಳಗೆ ಸರಿ ಮಾಡುತ್ತೇನೆ ಎಂದು ಅಭಯ ನೀಡಿದೆ. ಪತ್ನಿ ಮತ್ತು ಮಕ್ಕಳೊಂದಿಗೆ ರಾತ್ರಿಯಿಂದ ಬೆಳಗ್ಗಿನವರೆಗೆ ನಟ ರಿಷಬ್ ಶೆಟ್ಟಿ ಅವರು ದೈವದ ಕೋಲವನ್ನು ಕಣ್ತುಂಬಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.