ಆಟೋ ಡ್ರೈವರ್ ಈಗ ರೋಲ್ಸ್ ರಾಯ್ಸ್ ಮಾಲೀಕ!
– ಪುಟ್ಟ ಊರು ಪುತ್ತೂರಿನಲ್ಲಿ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಕಾರಿನ ಓಡಾಟ!
– ಬಿಂದು ಜೀರಾ ಡ್ರಿಂಕ್ ಕಂಪನಿ ಒಡೆಯ ಸತ್ಯಶಂಕರ್ ಕಥೆ ಇಲ್ಲಿದೆ ನೋಡಿ
NAMMUR EXPRESS NEWS
ಮಂಗಳೂರು: ಯಶಸ್ಸಿನ ಕತೆಗಳು ನಮಗೆ ಸ್ಪೂರ್ತಿ ನೀಡುತ್ತವೆ ನಿಜ. ಆದರೆ ಸೋಲಿನ ಕತೆಗಳು ಸವಾಲುಗಳನ್ನು ಎದುರಿಸಲು ಮತ್ತು ಸೋಲಿನಿಂದ ಹೊರಬರಲು ನಮ್ಮನ್ನು ಸಜ್ಜುಗೊಳಿಸುತ್ತವೆ.
ಇಲ್ಲೊಬ್ಬ ಅದೇ ರೀತಿ ಆಟೋ ಡ್ರೈವರ್ ಆಗಿದ್ದ ವ್ಯಕ್ತಿ, ಇದೀಗ ಬಿಂದು ಮಿನರ್ ವಾಟರ್, ಬಿಂದು ಜೀರಾ ಮಸಾಲಾ, ಸಿಪ್ಪಾನ್ ಸೇರಿದಂತೆ 50ಕ್ಕೂ ಅಧಿಕ ಪಾನೀಯಗಳು ಮತ್ತು ಸ್ಪೈಸಿ ತಿನಿಸುಗಳ ತಯಾರಕರಾದ ಪ್ರತಿಷ್ಠಿತ ಎಸ್‌ಜಿ ಗ್ರೂಪ್‌ನ ಎಂಡಿ ಸತ್ಯಶಂಕರ್, ಗ್ರಾಮೀಣ ಕನ್ನಡಿಗರಿಗೆ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ನೀಡಿದ್ದಾರೆ. ಎಸ್‌ಜಿ ಗ್ರೂಪ್ ಕಂಪನಿಗಳಲ್ಲಿ 2,000 ಮಂದಿ ನೇರ ಉದ್ಯೋಗದಲ್ಲಿದ್ದರೆ, 10,000ಕ್ಕೂ ಅಧಿಕ ಮಂದಿ ಪರೋಕ್ಷ ಉದ್ಯೋಗ ಪಡೆದಿದ್ದಾರೆ.
ಇಲ್ಲಿ ದುಡಿಯುತ್ತಿರುವವರ ಪೈಕಿ ಶೇ. 60ರಷ್ಟು ಮಹಿಳೆಯರು ಎಂಬುದು ಇನ್ನೊಂದು ವಿಶೇಷ.
ಹಳ್ಳಿಯ ಸರಕಾರಿ ಕನ್ನಡ ಶಾಲೆಯಲ್ಲಿ ಓದಿ ಬೆಳೆದು, ಪ್ರತಿಷ್ಠಿತ ‘ಬಿಂದು’ ಕಂಪನಿ ಮೂಲಕ ಜಗತ್ತಿನ ಗಮನ ಸೆಳೆದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸತ್ಯಶಂಕರ್ ಅವರು ಮತ್ತೊಂದು ಬಾರಿ ಪ್ರಪಂಚವೇ ತನ್ನತ್ತ ಮುಖ ಮಾಡುವ ಸಾಧನೆ ಮಾಡಿದ್ದಾರೆ.
ಆಟೋ ಡ್ರೈವರ್ ಈಗ ರೋಲ್ಸ್ ರಾಯ್ಸ್ ಮಾಲೀಕ!
ಭಾರತದ ಯಾವುದೇ ಪ್ರದೇಶವಾಗಲಿ, ಹೆಚ್ಚಿನ ಶ್ರೀಮಂತರೇ ಇರುವ ನಗರವಾಗಲಿ ರೋಲ್ಸ್ ರಾಯ್ಸ್ ಕಾರುಗಳು ಕಾಣ ಸಿಗವುದು ವಿರಳ. ಇದನ್ನು ಖರೀದಿಸುವುದು ಮಾತ್ರವಲ್ಲ, ನಿರ್ವಹಣೆ ಮಾಡಲು ಶ್ರೀಮಂತರಾದರೆ ಮಾತ್ರ ಸಾಲದು ಆಗರ್ಭ ಶ್ರೀಮಂತಿಕೆಯೇ ಬೇಕು. ಆದರೆ ಇದೀಗ ಕರ್ನಾಟಕ ಪುಟ್ಟ ಊರಾದ ಪುತ್ತೂರಿನಲ್ಲಿ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಕಾರು ರಸ್ತೆಯಲ್ಲಿ ಕಾಣಸಿಗುತ್ತಿದೆ.
ಇದು ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು.
ಈ ಕಾರಿನ ಮಾಲೀಕ ಬೇರೆ ಯಾರು ಅಲ್ಲ, ಒನ್ ಅ್ಯಂಡ್ ಒನ್ಲಿ ಬಿಂದು ಜೀರಾ ಮಸಾಲಾ ಡ್ರಿಂಕ್ ಕಂಪನಿಯ ಮಾಲೀಕ ಸತ್ಯ ಶಂಕರ್.
ಆಟೋ ಡ್ರೈವರ್ ಆಗಿದ್ದ ಸತ್ಯ ಶಂಕರ್ ಎಸ್‌ಜಿ ಗ್ರೂಪ್ ಸಂಸ್ಥೆ ಕಟ್ಟಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಇದೀಗ ಸತ್ಯ ಶಂಕರ್ ಕಂಪನಿ 850 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಹೊಂದಿದೆ. ಆಟೋ ಡ್ರೈವರ್ ಆಗಿದ್ದ ಸತ್ಯ ಶಂಕರ್ ಇತ್ತೀಚೆಗೆ ಅತೀ ದುಬಾರಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಖರೀದಿಸಿದ್ದಾರೆ. ಕರ್ನಾಟಕದಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಬೆಲೆ ಸರಿಸುಮಾರು 11.30 ಕೋಟಿ ರೂಪಾಯಿ.
