ಬಂಟ್ವಾಳ: ರಹೀಮ್ ಹತ್ಯೆ ದ.ಕ ಜಿಲ್ಲಾದ್ಯಾಂತ ಮುಸ್ಲಿಂ ವರ್ತಕರಿಂದ ಸ್ವಯಂ ಪ್ರೇರಿತ ಬಂದ್
– ರಹೀಮ್ ಮೃತದೇಹ ನೋಡಲು ಹರಿದು ಬರುತ್ತಿರುವ ಜನ ಸಾಗರ!
– ಮಂಗಳೂರು: ಬಂಧನವಾದ ಒಂದು ಗಂಟೆಯಲ್ಲೇ ಶರಣ್ ಪಂಪ್ ವೆಲ್ ಗೆ ಜಾಮೀನು
– ಎಲ್ಲೆಡೆ ವ್ಯಾಪಕ ಆಕ್ರೋಶ
NAMMUR EXPRESS NEWS
ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ರಹೀಮ್ ರವರ ಹತ್ಯೆ ಖಂಡಿಸಿ ದ.ಕ ಜಿಲ್ಲಾದ್ಯಾಂತ ಮುಸ್ಲಿಂ ವರ್ತಕರಿಂದ ಸ್ವಯಂ ಪ್ರೇರಿತ ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಜಿಲ್ಲೆಯ ಮಂಗಳೂರು,ಬಂಟ್ವಾಳ,ಪುತ್ತೂರು ಬೆಳ್ತಂಗಡಿ,ಉಪ್ಪಿನಂಗಡಿ,ಕಡಬ,ಸುಳ್ಯ ಸಹಿತ ವಿವಿಧ ಕಡೆಗಳಲ್ಲಿ ಮುಸ್ಲಿಂ ವರ್ತಕರು ತಮ್ಮ ವ್ಯಾಪಾರ ವಹಿವಾಟುಗಳನ್ನು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಹೀಮ್ ರವರ ಮೃತದೇಹ ಅವರ ಮನೆಗೆ ತಲುಪಿದ್ದು ಮೃತದೇಹ ನೋಡಲು ಜನಸಾಗರವೇ ಹರಿದು ಬರುತ್ತಿದೆ.
ಮೃತದೇಹವನ್ನು ಮಂಗಳೂರಿನಿಂದ ರಹೀಮ್ ರವರ ಕೋಳ್ತಮಜಲು ಮನೆಗೆ ಕರೆ ತರುವ ವೇಳೆ ಫರಂಗಿಪೇಟೆ ಮತ್ತು ಬಿಸಿರೋಡ್ ನಲ್ಲಿ ಆಂಬುಲೆನ್ಸ್ ನ್ನು ತಡೆದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
– ಮಂಗಳೂರು: ಬಂಧನವಾದ ಒಂದು ಗಂಟೆಯಲ್ಲೇ ಶರಣ್ ಪಂಪ್ ವೆಲ್ ಗೆ ಜಾಮೀನು
ಮಂಗಳೂರು: ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಬಂಧನವಾದ ಒಂದೇ ಗಂಟೆಯಲ್ಲಿ ಜಾಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ.
ಸುಹಾಸ್ ಶೆಟ್ಟಿಯ ಹತ್ಯೆ ಹಿನ್ನೆಲೆ ಜಿಲ್ಲಾ ಬಂದ್ ಗೆ ಕರೆಕೊಟ್ಟ ಹಿನ್ನಲೆ ಕದ್ರಿ ಪೊಲೀಸರು ಶರಣ್ ಪಂಪ್ ವೆಲ್ ನನ್ನು ಬಂದನ ಮಾಡಿದ್ದರು ಬಂಧನ ಮಾಡಿದ ಗಂಟೆಗಳ ಒಳಗಾಗಿ ಜಾಮೀನು ಮಂಜೂರಾಗಿದ್ದು ಇದೀಗ ಬಾರೀ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
