Categories
ಮಂಗಳೂರು

ಧರ್ಮಸ್ಥಳ ಬುರುಡೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ದಾಳಿ

ಧರ್ಮಸ್ಥಳ ಬುರುಡೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ದಾಳಿ

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಟ್ಟಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದ ಮೇಲೆ ವಿಶೇಷ ತನಿಖಾ ತಂಡ (SIT) ಇಂದು ದಾಳಿ ನಡೆಸಿದೆ.

ಸಾಕ್ಷಿದಾರನಾಗಿ ಹಾಜರಾದ ನಂತರ ಇದೀಗ ಆರೋಪಿಯಾಗಿರುವ ಚಿನ್ನಯ್ಯ ನೀಡಿದ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಕೋರ್ಟ್‌ನಿಂದ ಸರ್ಚ್ ವಾರಂಟ್ ಪಡೆದು ತಿಮರೋಡಿಗೆ ಆಗಮಿಸಿದ್ದಾರೆ.

ಚಿನ್ನಯ್ಯ ನೀಡಿದ ಮಾಹಿತಿಯ ಪ್ರಕಾರ, ಆತ ತಿಮರೋಡಿ ನಿವಾಸದಲ್ಲಿ ತಂಗಿದ್ದು, ಅಲ್ಲೊಂದು ಕೊಠಡಿ ನೀಡಲಾಗಿತ್ತು. ಆ ಕೊಠಡಿಯಲ್ಲಿ ತನ್ನ ಬಟ್ಟೆ ಮತ್ತು ಬ್ಯಾಗ್ ಇಟ್ಟಿದ್ದನೆಂದು ಹೇಳಿದ್ದಾನೆ. ಜೊತೆಗೆ, ಆತ ಮೊಬೈಲ್ ಬಳಸದಿದ್ದು, ತನ್ನ ಮೊಬೈಲ್ ತಿಮರೋಡಿ ಕುಟುಂಬದವರ ಬಳಿಯೇ ಇತ್ತು ಎಂದು ಕೂಡ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ನಡೆಸಿ, ಸಂಬಂಧಿತ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರು ತಿಮರೋಡಿ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಪೊಲೀಸ್ ವಾಹನಗಳೊಂದಿಗೆ ಮಾಧ್ಯಮ ಪ್ರತಿನಿಧಿಗಳ ವಾಹನಗಳೂ ತಿಮರೋಡಿಗೆ ತೆರಳಿದ್ದರೂ, ಮನೆಗೆ ತಲುಪುವ ಮುನ್ನ ಸುಮಾರು 1 ಕಿ.ಮೀ ದೂರದಲ್ಲೇ ಪೊಲೀಸರೇ ಮಾಧ್ಯಮ ವಾಹನಗಳನ್ನು ತಡೆದಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.