Categories
ಮಂಗಳೂರು

ಡಾ. ಕಬ್ಬಿನಾಲೆಗೆ ‘ಆಟ ಸಿರಿಮುಡಿ ಪ್ರಶಸ್ತಿ–2025’

ಡಾ. ಕಬ್ಬಿನಾಲೆಗೆ ‘ಆಟ ಸಿರಿಮುಡಿ ಪ್ರಶಸ್ತಿ–2025’

ಮಂಗಳೂರು: ಅಮೆರಿಕಾದ ತುಳುಸಂಸ್ಥೆ (AATA – American Tulu Association) ನೀಡುವ ಪ್ರತಿಷ್ಠಿತ *‘ಆಟ ಸಿರಿಮುಡಿ ಪ್ರಶಸ್ತಿ–2025’*ಕ್ಕೆ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಭಾಜನರಾಗಿದ್ದಾರೆ. ಅವರು ರಚಿಸಿರುವ “ತುಳು ಕಾವ್ಯಮೀಮಂಸೆ” ಎಂಬ ಗಣನೀಯ ಸಮಾಲೋಚನಾ ಕೃತಿಗೆ ಈ ಪ್ರಶಸ್ತಿ ಲಭಿಸಿದೆ.

ಈ ಅಂತಾರಾಷ್ಟ್ರೀಯ ಗೌರವ ಪುರಸ್ಕಾರವು ರೂ. 75,000/- ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ತುಳು ಸಾಹಿತ್ಯದ ತಾತ್ವಿಕ ಅಧ್ಯಯನ ಹಾಗೂ ವಿಮರ್ಶಾ ಪರಂಪರೆಯಲ್ಲಿ ಈ ಕೃತಿಯು ಹೊಸ ಮಾರ್ಗದರ್ಶನ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.

ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ತುಳು ಭಾಷೆಯ ಗಂಭೀರ ಅಧ್ಯಯನಕಾರರಾಗಿದ್ದು, ಹಲವು ದಶಕಗಳಿಂದ ಅವರು ತುಳುನಾಡಿನ ಭಾಷಾ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. AATA ಸಂಘಟನೆಯು ಪ್ರತಿ ವರ್ಷ ತುಳು ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ವ್ಯಕ್ತಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.

ಈ ಸಾಧನೆಯು ತುಳು ಸಾಹಿತ್ಯ ಲೋಕಕ್ಕೆ ಹೆಮ್ಮೆ ತಂದಿದೆ. 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.