Categories
ಮಂಗಳೂರು

ಕುಡುಪು ಗುಂಪು ಹಲ್ಲೆ, ನೈಜ ಆರೋಪಿಗಳಿಗೆ ಸರಕಾರದ ರಕ್ಷಣೆ ಬೇಡ: ಮುಸ್ಲಿಂ ಒಕ್ಕೂಟ ಖಂಡನೆ

ಕುಡುಪು ಗುಂಪು ಹಲ್ಲೆ, ನೈಜ ಆರೋಪಿಗಳಿಗೆ ಸರಕಾರದ ರಕ್ಷಣೆ ಬೇಡ: ಮುಸ್ಲಿಂ ಒಕ್ಕೂಟ ಖಂಡನೆ

– ಕೊಲೆಯ ನೈಜ ಆರೋಪಿಗಳ ಶೀಘ್ರ ಬಂಧನವಾಗಲಿ!
– ಆರೋಪಿ ಸ್ಥಳೀಯರ ಬೈಮಾತಿನಲ್ಲಿದ್ದರೂ ಪೊಲೀಸರ ಮೌನ ಖಂಡನೀಯ
– ದ.ಕ .ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದಿಂದ ಪತ್ರಿಕಾ ಪ್ರಕಟಣೆ

NAMMUR EXPRESS NEWS
ಮಂಗಳೂರು: ಮಂಗಳೂರಿನಲ್ಲಿ ಯುಪಿ ಮಾದರಿಯಲ್ಲಿ ನಡೆದ ಗುಂಪು ಹಲ್ಲೆ ಮಾಡಿ, ಚಿತ್ರ ಹಿಂಸೆಕೊಟ್ಟು ಭೀಕರವಾಗಿ ಕೊಲೆ ಮಾಡಿರುವವರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ದ.ಕ.ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟವು ಆಗ್ರಹಿಸಿದೆ.
ಈ ಘಟನೆ ನಡೆದಿದ್ದು, ಕೊಲೆ ಮಾಡಿದವರು ಯಾರು?? ಎಂಬುವುದು ಸ್ಥಳೀಯರ ಬಾಯಿ ಮಾತಿನಲ್ಲಿ ಇರುವುದನ್ನು ಗಮನಿಸಬಹುದು.
ಆದರೂ ಪೊಲೀಸ್ ಇಲಾಖೆ ಮತ್ತು ಸರಕಾರದ ಮೌನದ ಬಗ್ಗೆ ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಖಂಡಿಸುತ್ತದೆ ಎಂದು ದ.ಕ.ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಅಧ್ಯಕ್ಷರು  ಸಿರಾಜ್ ಬಜ್ಪೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕೂಡಲೇ ಸರಕಾರ ಪೊಲೀಸ್ ಇಲಾಖೆಗೆ ತಾಕಿತ್ತು ಮಾಡಿ ನೈಜ ಆರೋಪಿಗಳನ್ನು ಬಂಧಿಸಿ ಒಳಗೆ ಹಾಕಬೇಕು .ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ವಿಧಾನ ಸೌಧದ ಮುಂದೆ ಧರಣಿ ಕುಳಿತುಕೊಳ್ಳ ಬೇಕಾಗುತ್ತದೆ ಎಂದು ಸಿರಾಜ್ ಬಜ್ಪೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.