ಎಕ್ಸೆಲ್ ಸಂಸ್ಥೆಯ ಪ್ರಾಥಮಿಕ ಶಿಕ್ಷಣ ಶುರು
– ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ಪ್ರಾರಂಭೋತ್ಸವ
– ಅದ್ಧೂರಿಯಾಗಿ ವಿದ್ಯಾರ್ಥಿಗಳಿಗೆ ಸ್ವಾಗತ: ಕ್ಯಾಂಪಸ್ಸಲ್ಲಿ ಸಂಭ್ರಮ
– ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಪ್ರಾಶಸ್ತ್ಯ – ಸುಮಂತ್ ಕುಮಾರ್ ಜೈನ್
– ಕಾಲೇಜು ಬಳಿಕ ಇದೀಗ ಪ್ರಾಥಮಿಕ ಶಿಕ್ಷಣಕ್ಕೂ ಸೈ ಎಂದ ಸಂಸ್ಥೆ
NAMMUR EXPRESS NEWS
ಗುರುವಾಯನಕೆರೆ: ನಾಡಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ
ಗುರುವಾಯನಕೆರೆ ಎಕ್ಸೆಲ್ ಸಂಸ್ಥೆ ಇದೀಗ ಎಕ್ಸೆಲ್ ಟೆಕ್ನೋ ಸ್ಕೂಲ್ ಪ್ರಾರಂಭೋತ್ಸವ ಮೂಲಕ ಪ್ರಾಥಮಿಕ ಶಿಕ್ಷಣದಲ್ಲೂ ಹೊಸ ಕ್ರಾಂತಿ ಹೆಜ್ಜೆ ಇಟ್ಟಿದೆ.
ಪಿಯು ಶಿಕ್ಷಣದಲ್ಲಿ ರಾಜ್ಯದಲ್ಲಿ ಛಾಪು ಮೂಡಿಸಿರುವ ಸಂಸ್ಥೆ ಇದೀಗ
ಜೂ.9ರಂದು ವಿದ್ಯಾಸಾಗರ್ ಕ್ಯಾಂಪಸ್ಸಿನಲ್ಲಿ ಎಕ್ಸೆಲ್ ಟೆಕ್ನೋ ಸ್ಕೂಲ್
ಆರಂಭ ಮಾಡಿದೆ.
ವಿದ್ಯಾರ್ಥಿಗಳನ್ನು ಆರತಿ ಬೆಳಗಿ, ಗುಲಾಬಿ ಹೂ ನೀಡಿ , ಬ್ಯಾಂಡ್ ಸೆಟ್, ಗೊಂಬೆಗಳ ಮೂಲಕ ಆಕರ್ಷಕವಾಗಿ ಶಿಕ್ಷಕರು ಬರಮಾಡಿಕೊಂಡರು. ನರ್ಸರಿ, ಎಲ್ ಕೆ ಜಿ, ಯುಕೆಜಿ, 1 ನೇ ತರಗತಿಗೆ ವಿದ್ಯಾರ್ಥಿಗಳು ಅತ್ಯಂತ ಖುಷಿಯಿಂದ ಹೆಜ್ಜೆ ಹಾಕಿದರು.
ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ, ಅರಮಲೆಬೆಟ್ಟ ಕ್ಯಾಂಪಸ್ ಪ್ರಾಂಶುಪಾಲ ಡಾ. ಪ್ರಜ್ವಲ್, ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್, ಎಒ ಕೀರ್ತಿನಿಧಿ ಜೈನ್ ,ಎಕ್ಸೆಲ್ ವೇಣೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಬಿ., ಗುರುವಾಯನಕೆರೆ ಉಪಸ್ಥಿತರಿದ್ದರು. ಎಕ್ಸೆಲ್ ಮುಖ್ಯ ಶಿಕ್ಷಕಿ ಲೀನಾ ಫ್ಲೋರಿನಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.
ಮೌಲ್ಯ ಆಧಾರಿತ, ಗುಣಮಟ್ಟದ ಶಿಕ್ಷಣ ಗುರಿ: ಸುಮಂತ್ ಕುಮಾರ್ ಜೈನ್
ಎಕ್ಸೆಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗಿ ರೂಪಿಸಲಾಗುವುದು ಎಂದರು.
