ಬಜ್ಪೆ ಭಟ್ರಕೆರೆಯಲ್ಲಿ ನೂತನ ರಿಕ್ಷಾ ಪಾರ್ಕ್ ಉದ್ಘಾಟನೆ!
– ಉದ್ಘಾಟನೆ ಮಾಡಿ ಮಾತನಾಡಿದ – ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ
– “ರಿಕ್ಷಾ, ಆಟೋ ಚಾಲಕ ಮಾಲಕರ ಪರವಾಗಿ ಎಂದಿಗೂ ನಾನಿದ್ದೇನೆ”: ಐವನ್
NAMMUR EXPRESS NEWS
ಬಜ್ಪೆ: ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಟ್ರಕೆರೆ ಎಂಬಲ್ಲಿ ನೂತನ ರಿಕ್ಷಾ ಪಾರ್ಕ್ ಉದ್ಘಾಟನೆಯು ನಡೆಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾರವರು ರಿಕ್ಷಾ ಪಾರ್ಕ್ ಉದ್ಘಾಟನೆ ಮಾಡಿ ಮಾತನಾಡಿದರು.
ರಿಕ್ಷಾ ಆಟೋ ಚಾಲಕ ಮಾಲಕರ ಪರವಾಗಿ ನಾನು ಯಾವಾಗಲು ಇದ್ದೇನೆ, ತಮ್ಮ ಕುಟುಂಬ ನಿರ್ವಹಣೆಗೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರದಿಂದ ಸಿಗುವ ಸವಲತುಗಳನ್ನು ತಮಗೆ ಪ್ರಾಮಾಣಿಕವಾಗಿ ಸಿಗಲು ಪ್ರಯತ್ನಿಸುತ್ತೇನೆ ಮತ್ತು ಅದರ ಸದುಪಾಯೋಗ ತಾವುಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ, ಗ್ರಾ. ಪಂ ಉಪಾಧ್ಯಕ್ಷರಾದ ಸಂದೇಶ್ ,ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ, ಗ್ರಾ. ಪಂ ಸದಸ್ಯರಾದ ಸರೋಜ, ಸಾದಿಕ್, ಗ್ರಾ ಪಂ PDO ರಾಥೋಡ್, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಸುಹೈಲ್, ದೀಪಕ್ ಪೆರ್ಮುದೆ ಉಪಸ್ಥಿತರಿದ್ದರು.
