Categories
ಮಂಗಳೂರು

ಮಂಗಳೂರಲ್ಲಿ ಜಾಲಿ ಗೈಸ್ ವತಿಯಿಂದ ಸೌಹಾರ್ದ ಈದ್ ಸಂಭ್ರಮ!

ಮಂಗಳೂರಲ್ಲಿ ಜಾಲಿ ಗೈಸ್ ವತಿಯಿಂದ ಸೌಹಾರ್ದ ಈದ್ ಸಂಭ್ರಮ!

– ಪ್ರಯಾಣಿಕರಿಗೆ ತಂಪು ಪಾನೀಯ ಮತ್ತು ಸ್ವೀಟ್ ಹಂಚುವ ಮೂಲಕ ಆಚರಣೆ!
– ತಂಡದ ಅಧ್ಯಕ್ಷರಾದ ನಿಸಾರ್ ಕರಾವಳಿರವರ ನೇತೃತ್ವದಲ್ಲಿ ಕಾರ್ಯಕ್ರಮ

NAMMUR EXPRESS NEWS
ಮಂಗಳೂರು: ಬಜ್ಪೆ ಕಿನ್ನಿಪದವು ಜಂಕ್ಷನ್ ಬಳಿ ಸಾರ್ವಜನಿಕರಿಗೆ ಮತ್ತು ಬಸ್ಸು ಕಾರುಗಳಲ್ಲಿ ಹೋಗುವ ಪ್ರಯಾಣಿಕರಿಗೆ ತಂಪು ಪಾನೀಯ ಮತ್ತು ಸ್ವೀಟ್ ಹಂಚುವ ಮೂಲಕ ಜಾಲಿ ಗೈಸ್ ತಂಡ ಸೌಹಾರ್ದ ಈದ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.
ಜಾಲಿ ಗೈಸ್ ತಂಡದ ಅಧ್ಯಕ್ಷರಾದ ನಿಸಾರ್ ಕರಾವಳಿರವರ ನೇತೃತ್ವದಲ್ಲಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಮುಖ್ಯ ಅತಿಥಿಯಾಗಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ ಮಾತನಾಡಿ ಇದೊಂದು ಸೌಹಾರ್ದತೆಯ ನಡೆ, ಸಾಮರಸ್ಯದ ಬದುಕು ಬಹಳ ಮುಖ್ಯ.
ಸಮಾಜದ ಕಟ್ಟಕಡೆ ಜನರ ನೋವಿಗೆ ಧ್ವನಿಯಾಗಿ ಸ್ಪಂದಿಸುವ ಕೆಲಸ ಜಾಲಿ ಗೈಸ್ ತಂಡದಿಂದ ಆಗಬೇಕು ಎಂದು ಹೇಳಿ ಶುಭ ಹಾರೈಸಿದರು.
ಇನೋರ್ವ ಅತಿಥಿ ಹಿರಿಯರಾದ ಮೊನಕ ಮತ್ತು ಇಂಜಿನಿಯೆರ್ ಇಸ್ಮಾಯಿಲ್ ,ಬಜ್ಪೆ ಠಾಣಾಧಿಕಾರಿ ಸಂದೀಪ್ ಇದೊಂದು ಸಮಾಜಕ್ಕೆ ಮಾದರಿ ಕೆಲಸ ಎಂದು ಶುಭ ಹಾರೈಸಿದರು .ಬಜ್ಪೆ ಜಾಲಿ ಗೈಸ್ ತಂಡದ ಎಲ್ಲಾ ಹಿರಿಯ ಕಿರಿಯ ಸದಸ್ಯರುಗಳು ಭಾಗವಹಿಸಿ ಪರಸ್ಪರ ಈದ್ ವಿನಿಮಯ ಮಾಡಿಕೊಂಡಿಕೊಳ್ಳುವ ಮೂಲಕ ಸಂಭ್ರಮಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.