Categories
ಮಂಗಳೂರು

ಮಂಗಳೂರು ಕೆಇಬಿ ಸಿಬ್ಬಂದಿ ಜಾಗೃತಿ ಜಾಥಾ!

ಮಂಗಳೂರು ಕೆಇಬಿ ಸಿಬ್ಬಂದಿ ಜಾಗೃತಿ ಜಾಥಾ!

– ವಿದ್ಯುತ್ ಸುರಕ್ಷತೆಯ ಬಗ್ಗೆ ಆಡಿಯೋ ತುಣುಕಿನ ಮೂಲಕ ಮಾಹಿತಿ

NAMMUR EXPRESS NEWS
ಮಂಗಳೂರು: ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ 2024 ಅಂಗವಾಗಿ ಮೆಸ್ಕಾಂ ಕೈಕಂಬ ಉಪ ವಿಭಾಗದಿಂದ ಪ್ರಾರಂಭಗೊಂಡ ಸುರಕ್ಷತಾ ಜಾಥಾ ಕೈಕಂಬ ಪೇಟೆ, ಎಡಪದವು ಜಂಕ್ಷನ್ ಮತ್ತು ಮುಚ್ಚೂರು ಜಂಕ್ಷನ್ ನಲ್ಲಿ ಗ್ರಾಹಕರಿಗೆ ವಿದ್ಯುತ್ ಸುರಕ್ಷತೆಯ ಬಗ್ಗೆ ಆಡಿಯೋ ತುಣುಕಿನ ಮೂಲಕ ಮಾಹಿತಿ ನೀಡಿ ಎಚ್ಚರಿಕೆ ನೀಡಲಾಯಿತು.

ಕೈಕಂಬ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮತ್ತು ಕೈಕಂಬ, ಎಡಪದವು, ಮುಚ್ಚೂರು ಶಾಖೆಯ ಶಾಖಾಧಿಕಾರಿಗಳು ಮತ್ತು ಕೈಕಂಬ ಉಪ ವಿಭಾಗ ದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು
ಕೈಕಂಬ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಸುನೀಲ್ ಮೊಂತೆರೊ, ಕೈಕಂಬ ಶಾಖೆಯ ಸಹಾಯಕ ಇಂಜಿನಿಯರ್ ದೇವಿಪ್ರಸಾದ್, ಎಡಪದವು ಶಾಖೆಯ ಕಿರಿಯ ಇಂಜಿನಿಯರ್ ವೀರಭದ್ರಪ್ಪ, ಮುಚ್ಚುರ್ ಶಾಖೆಯ ಕಿರಿಯ ಇಂಜಿನಿಯರ್ ಶಿವರಾಮ್, ಕೈಕಂಬ ಉಪವಿಭಾಗದ ಎಲ್ಲಾ ಪವರ್ ಮ್ಯಾನ್ ಗಳು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.