ವಿಟಿಯ ವ್ಯಾಪ್ತಿಯಲ್ಲೇ ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್!
* ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪಿನಲ್ಲಿ ಮಂಗಳೂರು ಸಹ್ಯಾದ್ರಿಯೇ ಮೇಲುಗೈ!
– ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು!
NAMMUR EXPRESS NEWS
ಮಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ 201 ಕಾಲೇಜು 4 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ.
ಈ ಬಾರಿ ಮಾರ್ಚ್ 15 ರಿಂದ 18ರವರೆಗೆ ಶಿವಮೊಗ್ಗದ ಜೆಎನ್‌ಎನ್‌ಸಿಇಯಲ್ಲಿ ನಡೆದ ವಿಟಿಯು 26ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್ ನಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ ಮೆಂಟ್ ಮಂಗಳೂರು ಹೊಸ ಚರಿತ್ರೆಯನ್ನು ಬರೆದಿದೆ.
ಈ ವಿಶ್ವವಿದ್ಯಾಲಯದ ಅಡಿಯಲ್ಲಿ ಶಾಸಕರಾದ ಮಂಜುನಾಥ ಭಂಡಾರಿಯರವರ ನೇತೃತ್ವದಲ್ಲಿ 2007- 2008 ರಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ ಮೆಂಟ್ ಕಾಲೇಜು ಮಂಗಳೂರಿನಲ್ಲಿ ಸ್ಥಾಪನೆಯಾಗಿರುತ್ತದೆ.
2008-2009ರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರಂಭಿಸಿದ್ದು, ಅಂದಿನಿಂದ ಇಂದಿನವರೆಗೆ ಸುಮಾರು 16 ಕ್ರೀಡಾಕೂಟದಲ್ಲಿ ಭಾಗವಹಿಸಿದ ಸುಮಾರು 8 ಭಾರಿ ಓವರ್ ಆಲ್ ಚಾಂಪಿಯನ್ 5 ರನ್ನರ್ಸ್ ಹಾಗೂ 3ನೇ ಬಾರಿ 4 ನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಾಂಪಿಯನಿನ ಚಾಂಪಿಯನ್ ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು!
– ಇಷ್ಟೊಂದು ಬಾರಿ ಚಾಂಪಿಯನ್ ಆದ ಬೇರೊಂದು ಕಾಲೇಜು ವಿಶ್ವವಿದ್ಯಾಲಯ ಇತಿಹಾಸದಲ್ಲೇ ಇಲ್ಲ!
ಪುರುಷರು ವಾಲಿಬಾಲ್ – 7 ಬಾರಿ, ಮಹಿಳೆಯರು ವಾಲಿಬಾಲ್ 8 ಬಾರಿ, ಥ್ರೋಬಾಲ್ – 9 ಬಾರಿ ರಾಜ್ಯ 4 ಬಾರಿ, ಮಹಿಳೆಯರು ಕರಾಟೆ ಚಾಂಪಿಯನ್‌ಗಳು-1 ಬಾರಿ, ಭಾರ ಎತ್ತುವುದು – ಮಹಿಳೆಯರು 5 ಬಾರಿ ಪುರುಷರು 4 ಬಾರಿ, ಮಹಿಳೆಯರು ಪವರ್‌ಲಿಫ್ಟಿಂಗ್ 4 ಬಾರಿ ಪುರುಷರು 2 ಬಾರಿ, ಅತ್ಯುತ್ತಮ ಮೈಕಟ್ಟು – 1 ಬಾರಿ, ಈಜು ಓಟಗಾರರು 1 ಬಾರಿ, ಕುಸ್ತಿ – 5 ಪದಕಗಳು, ಚೆಸ್, ಕ್ರಿಕೆಟ್ ಹಾಕಿ,ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ 4 ಬಾರಿ, ಪ್ರತೀ ವರ್ಷ 10-14 ವಿದ್ಯಾರ್ಥಿಗಳು ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
– ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು!
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ WUSHU- ಬೆಳ್ಳಿ ಪದಕ ಹಾಗೂ ಹಲವಾರು ಪದಕಗಳನ್ನು ಪಡೆದಿರುತ್ತಾರೆ.
ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು ಎಂಬುದಾಗಿ ಹೆಸರು ಪಡೆದಿರುವ ಸಹ್ಯಾದ್ರಿ ಕಾಲೇಜು ವಿದ್ಯಾಲಯದ ಮಟ್ಟದಲ್ಲಿ ಹಲವಾರು ರ‍್ಯಾಂಕ್ ಗಳಿಸಿರುತ್ತದೆ ಅಲ್ಲದೆ ಪ್ಲೇಸ್ಮೆಂಟ್ ಅಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುತ್ತದೆ. ಅತೀ ಹೆಚ್ಚು ಸಂಬಳ 48 ಲಕ್ಷ ಅದರ ವಿದ್ಯಾರ್ಥಿಗಳಿಗೆ ದೊರಕಿರುವುದು ಕಾಲೇಜಿನ ಗುಣಮಟ್ಟವನ್ನು ತೋರಿಸುತ್ತದೆ.
– ಹಲವರ ಮಾರ್ಗದರ್ಶನ ಈ ಸಾಧನೆಗೆ ಸಾಥ್!
ಶಿಕ್ಷಣದೊಂದಿಗೆ ಕ್ರೀಡಾ, ಕೌಶಲ್ಯವನ್ನು ಕೊಡುವುದು ಕಾಲೇಜಿನ ಮುಖ್ಯ ನಿರ್ಣಯಗಳಲ್ಲಿ ಒಂದಾಗಿರುತ್ತದೆ. ಈ ಕಾಲೇಜಿನ ಅಭಿವೃದ್ಧಿಗೆ ದುಡಿಯುತ್ತಿರುವ ಕಾಲೇಜಿನ ಚೇರ್ಮನ್ ಹಾಗೂ ಶಾಸಕರಾದ ಮಂಜುನಾಥ ಭಂಡಾರಿ ಅವರು ಹಾಗೂ ಅವರೊಂದಿಗೆ ಎಲ್ಲಾ ಟ್ರಸ್ಟ್ ಗಳು , ಪ್ರಾಂಶುಪಾಲರು ಹಾಗೂ ಶಿಕ್ಷಕ ವರ್ಗ ಮುಖ್ಯವಾಗಿ ಈ ಕೀರ್ತಿಯನ್ನು ಗಳಿಸಲು ಮಾರ್ಗದರ್ಶನ ನೀಡುತ್ತಿರುವ ದೈಹಿಕ ನಿರ್ದೇಶಕರಾದ ಕರ್ಣ ಕುಮಾರ್ ಕೆ.ಎಸ್., ರಮ್ಯಾ ಪಿ. ಹಾಗೂ ಇದಕ್ಕಿಂತ ಹಿಂದೆ ಮಾರ್ಗದರ್ಶನ ನೀಡಿದಂತಹ ನಿತೀಶ ರೊಡ್ರಿಗಸ್ ಮತ್ತು ಸದಾನಂದ ಗೌಡ ಇವರ ಮಾರ್ಗದರ್ಶನವಿದ್ದು ಈ ಸಾಧನೆಯಲ್ಲಿ ಇವರೆಲ್ಲರ ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.
