ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ-2025: ಮಂಗಳೂರಿನ ಅಪುಲ್ ಆಳ್ವಾ ದ್ವಿತೀಯ ಸ್ಥಾನ, ಉಡುಪಿ-ಕುಂದಾಪುರದ ಛಾಯಾಗ್ರಾಹಕರು ಭಾಜನ
ಮಂಗಳೂರು/ವಿಜಯಪುರ,ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಹಾಗೂ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಛಾಯಾಗ್ರಹಣ ಸ್ಪರ್ಧೆ–2025ರಲ್ಲಿ “ಮಧುವೆ ಮಧುರ ಕ್ಷಣಗಳು” ವಿಭಾಗದಲ್ಲಿ ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಅಪುಲ್ ಆಳ್ವಾ ಇರಾ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಭಾವ ಬೀಸಿದ್ದಾರೆ.
ಅದೇ ವಿಭಾಗದಲ್ಲಿ ಮಣಿಪಾಲದ ಖ್ಯಾತ ಛಾಯಾಗ್ರಾಹಕ ಸಂದೀಪ್ ಕಾಮತ್ ಅವರ ಛಾಯಾಚಿತ್ರ ಆಯ್ಕೆಯಾಗಿ ಗಮನ ಸೆಳೆದಿದೆ.. ಈ ವರ್ಷದ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಛಾಯಾಗ್ರಾಹಕರು ಭಾಗವಹಿಸಿದ್ದರು.
ಉಡುಪಿ ಯಿಂದ ಉಮೇಶ್ ಪೈ, ನಿದೀಶ್ ಕುಮಾರ್, ಗಣೇಶ್ ಪೆರ್ಡೂರು ಮತ್ತು ಕುಂದಾಪುರದಿಂದ ಜಾವೇದ್ ಅಕ್ಥರ್, ಅಮೃತ ಬೀಜಾಡಿ, ರಮಾನಂದ ಪೈ ಹೀಗೆ ಹಲವಾರು ಪ್ರತಿಭಾವಂತ ಛಾಯಾಗ್ರಾಹಕರು ತಮ್ಮ ಕಲಾತ್ಮಕ ಛಾಯಾಚಿತ್ರಗಳ ಮೂಲಕ ಸ್ಪರ್ಧೆಯಲ್ಲಿ ಭಾಜನರಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.