Categories
ಮಂಗಳೂರು

ನ್ಯೂ ವೈಬ್ರೆಂಟ್ ಪಿಯು ಕಾಲೇಜಲ್ಲಿ ಯೋಗ ದಿನಾಚರಣೆ

ನ್ಯೂ ವೈಬ್ರೆಂಟ್ ಪಿಯು ಕಾಲೇಜಲ್ಲಿ ಯೋಗ ದಿನಾಚರಣೆ
– .ವೃಂದಾ ಬೆಡೇಕರ್ ನೇತೃತ್ವದಲ್ಲಿ ಯೋಗ ದಿನಾಚರಣೆ
– ವಿದ್ಯಾರ್ಥಿಗಳು ಭಾಗಿ: ಯೋಗದ ಮಹತ್ವದ ಮಾಹಿತಿ

NAMMUR EXPRESS NEWS
ಮೂಡಬಿದಿರೆ: ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜು, ಕಲ್ಲಬೆಟ್ಟು ಮೂಡುಬಿದಿರೆ ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.
ಸಂಸ್ಥೆಯಲ್ಲಿ ಬೆಳಗ್ಗೆ ಆರು ಗಂಟೆಯಿಂದ ಸುಮಾರು ಒಂದು ಗಂಟೆಗಳ ಕಾಲ ಆಯುಷ್ ಮಂತ್ರಾಲಯ ಸೂಚಿಸಿದ ಸಾಮಾನ್ಯ ಯೋಗಾಭ್ಯಾಸ ಕ್ರಮವನ್ನು ವಿದ್ಯಾರ್ಥಿಗಳು ಅನುಸರಿಸಿದರು .ಡಾ.ವೃಂದಾ ಬೆಡೇಕರ್ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಸನದ ಮಹತ್ವವನ್ನು ತಿಳಿ ಹೇಳಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರಸ್ಟಿಗಳಾದ ಮಹಮ್ಮದ್ ಭಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೇಕರ್,ಸುಭಾಶ್ ಝಾ,ಡಾ. ಎಸ್ ಎನ್ ವೆಂಕಟೇಶ್ ನಾಯಕ್,ಶರತ್ ಗೋರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.