Categories
ರಾಷ್ಟ್ರೀಯ ವಾರ್ತೆ

ಬಾಲಿವುಡ್‌ ನಟಿ, ಮಾಡೆಲ್‌ ಪೂನಂ ಪಾಂಡೆ ಕ್ಯಾನ್ಸರಿಗೆ ಬಲಿ!

ಬಾಲಿವುಡ್‌ ನಟಿ, ಮಾಡೆಲ್‌ ಪೂನಂ ಪಾಂಡೆ ಕ್ಯಾನ್ಸರಿಗೆ ಬಲಿ!
– ಗರ್ಭಕಂಠ ಕ್ಯಾನ್ಸರ್‌ಗೆ ಬಲಿ: ಕನ್ನಡ ಸಿನಿಮಾದಲ್ಲೂ ಪೂನಂ ಪಾಂಡೆ
– ಬೋಲ್ಡ್‌ ಫೋಟೊಗಳು, ಬೋಲ್ಡ್‌ ನಟನೆ, ಹೇಳಿಕೆ ಯಿಂದಲೇ ಫೇಮಸ್

NAMMUR EXPRESS NEWS
ಬಾಲಿವುಡ್‌ ನಟಿ, ರೂಪದರ್ಶಿ ಪೂನಂ ಪಾಂಡೆ (32) ಅವರು ನಿಧನರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೆಲ ತಿಂಗಳಿಂದ ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ (ಫೆಬ್ರವರಿ 2) 6 ಗಂಟೆಗೆ ಮೃತಪಟ್ಟಿದ್ದಾರೆ ಎಂದು ಪೂನಂ ಪಾಂಡೆ ಅವರ ಮ್ಯಾನೇಜರ್‌ ತಿಳಿಸಿದ್ದಾರೆ. ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ನಿಂದ ಅಗಲಿದರು ಎಂದು ಹೇಳಲು ಭಾರಿ ದುಃಖವಾಗುತ್ತಿದೆ. ಜೀವನದಲ್ಲಿ ಅವರು ಯಾರನ್ನೇ ಭೇಟಿಯಾದರೂ, ಪ್ರೀತಿ ಹಾಗೂ ವಿನಯದಿಂದ ವರ್ತಿಸಿದ್ದರು. ಅವರ ಖಾಸಗಿ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಯಾರೂ ಮಾತನಾಡಬಾರದು ಎಂಬುದಾಗಿ ಮನವಿ ಮಾಡುತ್ತೇವೆ” ಎಂದು ಅವರ ಮ್ಯಾನೇಜರ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಬೋಲ್ಡ್‌ ಫೋಟೊಗಳು, ಬೋಲ್ಡ್‌ ನಟನೆ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ಧರಾಗಿದ್ದ ಪೂನಂ ಪಾಂಡೆ ಅವರು ಬಿಹಾರದವರು. ಬಿಹಾರದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದ ಇವರು ಮೊದಲು ಮಾಡೆಲಿಂಗ್‌ ಕ್ಷೇತ್ರ ಪ್ರವೇಶಿಸಿದರು. 2013ರಲ್ಲಿ ನಶಾ ಎಂಬ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ ಪೂನಂ ಪಾಂಡೆ, ಭೋಜ್‌ಪುರಿಯ ಅದಾಲತ್‌, ತೆಲುಗಿನಲ್ಲಿ ಮಾಲಿನಿ & ಕೊ., ಹಿಂದಿಯ ಜಿಎಸ್‌ಟಿ-ಗಲ್ತಿ ಸಿರ್ಫ್‌ ತುಮ್ಹಾರಿ ಹಾಗೂ ದಿ ಜರ್ನಿ ಆಫ್‌ ಕರ್ಮ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡ ಸಿನಿಮಾದಲ್ಲೂ ಪೂನಂ ಪಾಂಡೆ ಛಾಪು ಇದೆ. ಅವರು 2014ರಲ್ಲಿ ಬಿಡುಗಡೆಯಾದ ಲವ್‌ ಈಸ್‌ ಪಾಯ್ಸನ್‌ ಕನ್ನಡ ಸಿನಿಮಾದಲ್ಲಿ ಹಾಡೊಂದಿಗೆ ಹೆಜ್ಜೆ ಹಾಕಿದ್ದರು. 2011ರಲ್ಲಿ ಭಾರತ ಕ್ರಿಕೆಟ್‌ ತಂಡವು ವಿಶ್ವಕಪ್‌ ಗೆದ್ದರೆ ತಂಡ ಎದುರು ನಾನು ಸಂಪೂರ್ಣವಾಗಿ ಬೆತ್ತಲಾಗುವೆ ಎಂದು ಹೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು. ಇದಾದ ಬಳಿಕವೂ ಅವರು ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.