Categories
ರಾಷ್ಟ್ರೀಯ ವಾರ್ತೆ

ಹಂದಿ ಕಿಡ್ನಿ ಹಾಕಿಸಿಕೊಂಡಿದ್ದವ ಸಾವು!

ಹಂದಿ ಕಿಡ್ನಿ ಹಾಕಿಸಿಕೊಂಡಿದ್ದವ ಸಾವು!
– ಕಸಿ ಚಿಕಿತ್ಸೆ ನಡೆದ ಎರಡೇ ತಿಂಗಳಿನಲ್ಲಿ ನಿಧನ
– ಸಕ್ಕರೆ ಕಾಯಲೆ ಹಿನ್ನೆಲೆ ಹೊಸ ಪ್ರಯೋಗ

NAMMUR EXPRESS NEWS
ಹಂದಿ ಕಿಡ್ನಿ ಅಳವಡಿಸಿಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ಐತಿಹಾಸಿಕ ದಾಖಲೆಗೆ ಕಾರಣನಾದ ರಿಚರ್ಡ್ ಸ್ಲೇಮನ್ ಅವರು ಈ ಶಸ್ತ್ರಚಿಕಿತ್ಸೆ ನಡೆದು 2 ತಿಂಗಳ ಬಳಿಕ ಪ್ರಾಣ ಬಿಟ್ಟಿದ್ದಾರೆ. ಅಮೆರಿಕಾದ ಮೂಲದ 62 ವರ್ಷ ಪ್ರಾಯದ ರಿಚರ್ಡ್ ಸ್ಲೇಮನ್ ಅವರಿಗೆ 2 ತಿಂಗಳ ಹಿಂದಷ್ಟೇ ತಳೀಯವಾಗಿ ಮಾರ್ಪಡಿಸಿದ ಹಂದಿಯ ಕಿಡ್ನಿಯನ್ನು ಅಳವಡಿಸಲಾಗಿತ್ತು. ಈ ಮೂಲಕ ಹಂದಿಯ ಕಿಡ್ನಿಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಆದರೆ ಇದಾದ ಎರಡು ತಿಂಗಳ ನಂತರ ಅವರು ಸಾವಿಗೀಡಾಗಿದ್ದಾರೆ.

ಬೋಸ್ಟನ್‌ನ ಮ್ಯಾಸಚುಸೆಟ್ಸ್‌ನ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು. ಶಸ್ತ್ರಚಿಕಿತ್ಸೆ ನಡೆದ 2 ವಾರಗಳ ನಂತರ ಅವರು ಮನೆಗೆ ಮರಳಿದ್ದರು. ಡಯಲಿಸೀಸ್‌ನಲ್ಲಿಯೂ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಿಚರ್ಡ್ ಸ್ಲೇಮನ್ ಅವರು ಹಂದಿ ಕಿಡ್ನಿಯ ಕಸಿಗೆ ಒಳಗಾಗುವ ಪ್ರಕ್ರಿಯೆಗೆ ಮುಂದಾದರು. ಡಯಲಿಸೀಸ್‌ನಲ್ಲಿನ ಸಮಸ್ಯೆಯಿಂದಾಗಿ ಅವರು ಪ್ರತಿ ಎರಡು ವಾರಗಳಿಗೊಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾಗಿತ್ತು. ಹೀಗಾಗಿ ಅವರು ಹಂದಿ ಕಿಡ್ನಿ ಕಸಿಗೆ ಒಳಗಾಗಲು ಬಯಸಿದ್ದರು. ‘ಇದು ಕೇವಲ ನನಗೆ ಮಾತ್ರ ಸಹಾಯ ಮಾಡುವುದಿಲ್ಲ, ಇದು ಬದುಕಲು ಕಿಡ್ನಿ ಕಸಿಗೆ ಒಳಗಾಗಲೇಬೇಕು ಎಂಬ ಸ್ಥಿತಿಯಲ್ಲಿರುವ ಅನೇಕರಿಗೆ ಒಂದು ಭರವಸೆಯ ಮಾರ್ಗವಾಗಿದೆ ಎಂದು ಅವರು ಕಸಿ ಪ್ರಕ್ರಿಯೆಗೆ ಒಳಗಾದ ಸಂದರ್ಭದಲ್ಲಿ ಹೇಳಿಕೊಂಡಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.