Categories
ಇತರೆ ಸುದ್ದಿ

10 ರೂ. ಕೇಳಿದ್ದಕ್ಕೆ ಮಗನನ್ನೇ ಕೊಂದ ತಂದೆ.

10 ರೂ. ಕೇಳಿದ್ದಕ್ಕೆ ಮಗನನ್ನೇ ಕೊಂದ ತಂದೆ..!
– ತಾಯಿ ಕೊಂದು ಶವ ಸೂಟ್‌ಕೇಸ್‌ನಲ್ಲಿ ತುಂಬಿಸಿ ಪೊಲೀಸ್ ಠಾಣೆಗೆ ತಂದ ಮಗಳು!
– ವಿಜಯಪುರದಲ್ಲಿ ಮಹಿಳೆ ಮರ್ಡರ್
– ರಾಜ್ಯದಲ್ಲಿ ಏನೇನ್ ಆಯ್ತು.. ಇಲ್ಲಿದೆ ವಿಶೇಷ ವರದಿ

NAMMUR EXPRESS NEWS
ಮಹಿಳೆಯೊಬ್ಬಳು ತಾಯಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಪೊಲೀಸ್ ಠಾಣೆಗೆ ತಂದು ಶರಣಾದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
39 ವರ್ಷ ಪ್ರಾಯದ ಫಿಸಿಯೋಥೆರಪಿಸ್ಟ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಕೋಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಬೀವಾಪಾಲ್ ಮೃತ ದುರ್ದೈವಿಯಾಗಿದ್ದಾರೆ. ಸೆನಾಲಿ ಸೇನ್ (39) ಕೊಲೆ ಮಾಡಿದ ಮಗಳು.

ಇಲ್ಲಿನ ಬಿಳೇಕಹಳ್ಳಿಯ ಎನ್‌ಎಸ್‌ಆರ್ ಗ್ರೀನ್ ಅಪಾರ್ಟ್ ಮೆಂಟ್‌ನ ಒಂದೇ ಫ್ಲಾಟ್‌ನಲ್ಲಿ ಸೆನಾಲಿ ಸೇನ್ , ಆಕೆಯ ತಾಯಿ ಬೀವಾ ಪಾಲ್ ಮತ್ತು ಅತ್ತೆ ವಾಸವಿದ್ದರು. ನಿತ್ಯ ಆರೋಪಿ ಸೆನಾಲಿ ಸೇನ್ ತಾಯಿ ಮತ್ತು ಅತ್ತೆ ಗಲಾಟೆ ಮಾಡುತ್ತಿದ್ದರಂತೆ. ಹೀಗಾಗಿ ಮನನೊಂದು ಈ ಕೃತ್ಯವೆಸಗಿರುವುದಾಗಿ ಆಕೆ ಪೊಲೀಸರ ಬಳಿ ಹೇಳಿದ್ದಾಳೆ. ತಾಯಿಗೆ ಮೊದಲು ನಿದ್ರೆ ಮಾತ್ರೆ ನೀಡಿದ್ದು, ಹೊಟ್ಟೆ ನೋವು ಎಂದು ಕೂಗಲು ಆರಂಭಿಸಿದಾಗ ವೇಲ್‌ನಿಂದ ಕತ್ತನ್ನು ಹಿಸುಕಿ ಕೊಂದಿದ್ದಾಳೆ. ಮೂಲತಃ ಪಶ್ಚಿಮ ಬಂಗಾಳದ ಬೆಂಗಳೂರಿನಲ್ಲಿ ಫಿಸಿಯೊಥೆರಪಿಸ್ಟ್ ಆಗಿದ್ದಾಳೆ. ಕೊಲೆ ಮಾಡುವಾಗ ಮಹಿಳೆಯ ಗಂಡ ಈ ವೇಳೆ ಮನೆಯಲ್ಲಿ ಇರಲಿಲ್ಲ. ವೃದ್ಧ ಅತ್ತೆ ಇದ್ದರೂ ಕೋಲೆ ಕೋಣೆಯೊಳಗೆ ನಡೆದ ಕಾರಣ ಅವರ ಅರಿವಿಗೆ ಬಂದಿರಲಿಲ್ಲ. ಪೊಲೀಸ್ ಠಾಣೆಗೆ ಬಂದ ಮಹಿಳೆ ತಾನು ತಾಯಿಯನ್ನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾಳೆ.

ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಸರ ಕಳ್ಳತನ

ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಸರ ಕದ್ದಿರುವ ಘಟನೆ ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯ ಸುಗ್ಗಿಕಲ್ ರಸ್ತೆಯಲ್ಲಿ ನಡೆದಿದೆ. ಲೀಲಾವತಿ ಚಿನ್ನದ ಸರ ಕಳೆದುಕೊಂಡ ವೃದ್ಧೆ, ಸುಗ್ಗಿಕಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವೇಗವಾಗಿ ಬೈಕಿನಲ್ಲಿ ಬಂದು ಕೊರಳಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದಾರೆ. ಹಾಡಹಗಲೇ ಚಿನ್ನದ ಸರ ಕಳ್ಳತನ ಹಿನ್ನೆಲೆ ಮಹಿಳೆಯರಿಗೆ ಆತಂಕ ಉಂಟುಮಾಡಿದ್ದು, ಕಳ್ಳತನದ ವಿಡೀಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಖಾಸಗಿ ಬಸ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ

ಖಾಸಗಿ ಬಸ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸೂರ್ಳಿಯಲ್ಲಿ ನಡೆದಿದೆ. ಕೊಪ್ಪದಿಂದ ಶೃಂಗೇರಿ ಕಡೆ ಬರುತ್ತಿದ್ದ ಎಸ್.ಕೆ.ಎಮ್.ಎಸ್ ಸೂರ್ಳಿಯ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟೈರ್ ಬ್ಲಾಸ್ಟ್ ಆಗಿ ಕಾರು ಪಲ್ಟಿ: ಐವರಿಗೆ ಗಾಯ!

ವೇಗವಾಗಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ಐದು ಮಂದಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಮಾಗೋಡ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವ ಬಗ್ಗೆ ವರಿಯಾಗಿದೆ.
ಗಾಯಾಳುಗಳನ್ನು ತುಮಕೂರು ಜಿಲ್ಲೆ ಶಿರಾ ಮೂಲದವರು ಎಂದು ಗುರುತಿಸಲಾಗಿದೆ. ಓರ್ವನ ಕಿವಿ ಕಟ್ ಆಗಿ ತೀವ್ರ ರಕ್ತ ಸ್ರಾವದಿಂದ ಸ್ಥಿತಿ ಗಂಭೀರವಾಗಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯಪುರದಲ್ಲಿ ಮಹಿಳೆ ಬರ್ಬರ ಹತ್ಯೆ!

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ರೇವಪ್ಪ ಮಡ್ಡಿಯಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಕೊಲೆಯಾದ ಮಹಿಳೆ ರೇಣುಕಾ ವಾಘೋರೆ (40) ಎಂದು ತಿಳಿದುಬಂದಿದೆ. ಹರಿತವಾದ ಆಯುಧಗಳಿಂದ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

10 ರೂ. ಕೇಳಿದ್ದಕ್ಕೆ ಮಗನನ್ನೇ ಕೊಂದ ತಂದೆ..!

ಹತ್ತು ರೂಪಾಯಿ ಹಣ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ 12 ವರ್ಷದ ಮಗನನ್ನು ಕತ್ತು ಹಿಸುಕಿ ಕೊಲೆಗೈದ ಪ್ರಕರಣ ಜಾಖಂಡ್‌ ನ ಛತ್ರಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಮೃತ ಬಾಲಕನನ್ನು ಪಪ್ಪು ಕುಮಾರ್ ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಬಿಲೇಶ್ ಭುಯಾನ್ (48) ಎಂದು ಗುರುತಿಸಲಾಗಿದೆ. ಮೃತನ 15 ವರ್ಷದ ಸಹೋದರಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಶಿಷ್ಟನಗರ ಪೊಲೀಸರು ಬಂಧಿಸಿದ್ದಾರೆ.

One reply on “10 ರೂ. ಕೇಳಿದ್ದಕ್ಕೆ ಮಗನನ್ನೇ ಕೊಂದ ತಂದೆ.”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.