Categories
ಕೊಪ್ಪ ಶಿವಮೊಗ್ಗ

ಸರ್ಕಾರಿ ಶಾಲೆ ಭಂಡಿಗಡಿ ಮಕ್ಕಳ ಸಂತೆ, ಶಾರದಪೂಜೆ ಸೂಪರ್

ಸರ್ಕಾರಿ ಶಾಲೆ ಭಂಡಿಗಡಿ ಮಕ್ಕಳ ಸಂತೆ, ಶಾರದಪೂಜೆ ಸೂಪರ್
– ಮಕ್ಕಳ ಸಂತೆಯಲ್ಲಿ ಮಕ್ಕಳದ್ದೇ ವ್ಯಾಪಾರ ಜೋರು!
– ಗಮನ ಸೆಳೆದ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

NAMMUR EXPRESS NEWS
ಕೊಪ್ಪ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಭಂಡಿಗಡಿ, ಕೊಪ್ಪ ತಾಲೂಕು ಶಾಲೆಯು 125 ವರ್ಷ ಇತಿಹಾಸವನ್ನು ಹೊಂದಿರುವ ಶಾಲೆಯಾಗಿದ್ದು,1902ರಲ್ಲಿ ಆರಂಭಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಹಾಗೂ ತಾಲೂಕಿನ ಉತ್ತಮ ಶಾಲೆಗಳಲ್ಲಿ ಒಂದಾಗಿದೆ. ಈ ಶಾಲೆ ಇದೀಗ ಅನೇಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದೆ.

– “ಮಕ್ಕಳ ಸಂತೆ ” ಎಂಬ ವಿಶಿಷ್ಟವಾದ ಕಾರ್ಯಕ್ರಮದ ಸೊಬಗು!

2024-25 ನೇ ಸಾಲಿನ ಶಾರದಪೂಜೆ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದ ಸಲುವಾಗಿ ಮಾ. 10ರ ಸೋಮವಾರ ವಿದ್ಯಾರ್ಥಿಗಳಿಗೆ ವ್ಯಾವಹಾರಿಕ ಗಣಿತದ ಕಲಿಕೆಗೆ ಅನುಕೂಲವಾಗುವಂತೆ “ಮಕ್ಕಳ ಸಂತೆ ” ಎಂಬ ವಿಶಿಷ್ಟವಾದ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ತಮ್ಮ ನೆರೆಹೊರೆಯಲ್ಲಿ ಬೆಳೆದ ತರಕಾರಿ, ಹಣ್ಣು, ಸೊಪ್ಪು, ಹಲಸಿನ ಗುಜ್ಜೆ, ಕಬ್ಬು, ಜೀರಿಗೆ ಮೆಣಸು, ವಾಟೆ ಹುಳಿ ಹೀಗೆ ಮಲೆನಾಡಿನ ವಿಶೇಷತೆಗಳನ್ನು ತಂದು ವ್ಯಾಪಾರ ಮಾಡುವುದರೊಂದಿಗೆ ಚಿರುಮುರಿ, ಬಜ್ಜಿ, ಗೋಬಿ ಮಂಚೂರಿ, ಪಾನಿಪೂರಿಗಳನ್ನು ಮಕ್ಕಳೇ ತಯಾರಿಸಿ ವ್ಯಾಪಾರ ಮಾಡಿದರು. ಕಡಬು ಕೆಸವಿನಸೊಪ್ಪು ಪಲ್ಯ ವಿಶೇಷ ಆಕರ್ಷಣೀಯಾಗಿತ್ತು.
ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಘವೇಂದ್ರರವರು ಬೇಟಿ ನೀಡಿ ಸಂತೆಯಲ್ಲಿ ಖರೀದಿಸಿ ಮಕ್ಕಳಿಗೆ ಪ್ರೋತ್ಸಾಹಿಸುವುದರೊಂದಿಗೆ, ಕಾರ್ಯಕ್ರಮದ ಆಯೋಜನೆ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು.
ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳ ಸಂತೆಯಲ್ಲಿ ಮಕ್ಕಳ ಉತ್ಸಾಹ ಕಂಡು, ಸಂತೆಯಲ್ಲಿ ವ್ಯಾಪಾರ ವ್ಯವಹಾರ ನಡೆಸಿ ಅತ್ಯಂತ ಸಂತೋಷಪಡುವುದರೊಂದಿಗೆ ಮಕ್ಕಳನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದ ಪೋಷಕರು ಹಾಗು ಸಾರ್ವಜನಿಕರಿಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಮುಖ್ಯೋಪದ್ಯಾಯರು ಹಾಗೂ ಸಹಶಿಕ್ಷಕರು, ಹಳೆವಿದ್ಯಾರ್ಥಿ ಸಂಘದವರು ಅಭಿನಂದನೆ ಸಲ್ಲಿಸಿದರು.

– ವಾರ್ಷಿಕ ಶಾರದಾ ಪೂಜೆ ಹಾಗೂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಫೆ. 14ರ ಶುಕ್ರವಾರದಂದು ಶಾಲೆಯಲ್ಲಿ ವಾರ್ಷಿಕ ಶಾರದಾ ಪೂಜೆ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ವೈಭವದಿಂದ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ “ವಿದ್ಯೆ ಮತ್ತು ಸಂಸ್ಕಾರ” ಕುರಿತು ಸುಮಂಗಲಿ ಆನಂದಸ್ವಾಮಿ ಕಾ ಸಾ ಪ ಅಧ್ಯಕ್ಷರು ಶೃಂಗೇರಿ ಹಾಗೂ ನಿವೃತ್ತ ಮುಖ್ಯೋಪಾದ್ಯಾಯರು ನಲ್ಲೂರು ಸತ್ಯನಾರಾಯಣ ಇವರು ಉಪನ್ಯಾಸ ನೀಡಿದರು.
ನಂತರ ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಧ್ಯಾಹ್ನ ವಿಶೇಷ ಬೋಜನ ವ್ಯವಸ್ಥೆ ಮಾಡಲಾಗಿದ್ದು, ನಂತರ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರವಿಚಂದ್ರ ಇವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಮಹಮದ್ ಹುಸೇನ್ ಇವರು ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕರಾದ ಕೆ ಕೆ ಶ್ರೀದರ್ ಇವರು ಶಾಲೆಯ ವಾರ್ಷಿಕ ವಿವರಗಳನ್ನು ಹಾಗೂ ಶಾಲೆಗೆ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರುಗಳು, ಎಸ್ ಡಿ ಎಂ ಸಿ ಸರ್ವ ಸದಸ್ಯರು, ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗು ದಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಧ್ಯಾಹ್ನದ ವಿಶೇಷ ಬೋಜನ ವ್ಯವಸ್ಥೆಗೆ ಸಹಕಾರ ನೀಡಿದ ಭಾರತಿ ಪ್ರತಿಷ್ಠಾನ (ರಿ) ಭಂಡಿಗಡಿ ಇವರಿಗೂ ಹಾಗೂ ಬಹುಮಾನಗಳನ್ನು ನೀಡಲು ಸಹಕಾರ ನೀಡಿದ ನಿಜಾಮುದ್ದೀನ್ ಭಂಡಿಗಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಿದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕವೃಂದ ಹಾಗೂ ಹಳೆ ವಿದ್ಯಾರ್ಥಿ ಸಂಘದವರ ಕಾರ್ಯಗಳಿಗೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.
ಸಂಪೂರ್ಣ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಶಾಲೆಯ ಶಿಕ್ಷಕವೃಂದ ಹಾಗೂ ಎಸ್ ಡಿ ಎಂ ಸಿ, ಹಾಗೂ ಹಳೆವಿದ್ಯಾರ್ಥಿ ಸಂಘದ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.