Categories
ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಎರಡು ತಾಲೂಕಿನಲ್ಲಿ ರಜೆ ಘೋಷಣೆ

ಶಿವಮೊಗ್ಗ ಜಿಲ್ಲೆಯ ಎರಡು ತಾಲೂಕಿನಲ್ಲಿ ರಜೆ ಘೋಷಣೆ
– ಸಾಗರ, ಹೊಸನಗರ ತಾಲೂಕು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
– ತೀರ್ಥಹಳ್ಳಿಯಲ್ಲಿ ರಜೆ ಘೋಷಣೆ: ಸ್ಥಳೀಯ ಆಡಳಿತಕ್ಕೆ ಜವಾಬ್ದಾರಿ

NAMMUR EXPRESS NEWS
ಜೂ. 16ರಂದು ಸಾಗರ, ಹೊಸನಗರ ತಾಲೂಕಿನಾದ್ಯಂತ ಅತಿ ಹೆಚ್ಚು ಮಳೆ ಹಾಗೂ ಗಾಳಿ ಇರುವುದರಿಂದ ಎಲ್ಲಾ ಅಂಗನವಾಡಿಗಳು, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಮಾನ್ಯ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನಾದ್ಯಂತ ಇಂದು ರಜೆ ಘೋಷಿಸಲಾಗಿದೆ.
ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ಮಳೆ ಹಿನ್ನಲೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಗೆ ರಜೆ ನೀಡುವ ಅಧಿಕಾರ ಘೋಷಣೆ ಮಾಡಿದ್ದಾರೆ. ಅನೇಕ ಶಾಲೆಗಳು ರಜೆ ನೀಡಿವೆ.
ತೀರ್ಥಹಳ್ಳಿ ಸೇರಿ ಮಲೆನಾಡ ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಮಳೆ ಬಗ್ಗೆ ಜನ ಜಾಗೃತಿ ವಹಿಸಬೇಕಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.