ಟಾಪ್ ನ್ಯೂಸ್ ಮಲ್ನಾಡ್
ಶಿವಮೊಗ್ಗ: ನಕಲಿ ದಾಖಲಾತಿ ಹಾಗೂ ಸಹಿ ಸೃಷ್ಟಿಸಿ ಆಸ್ತಿಯನ್ನ ವಂಚಿಸಿದ ಪತಿ
– ಶಿವಮೊಗ್ಗ : ಬೀದಿ ನಾಯಿ ಕಡಿತದಿಂದಾಗಿ ಮಹಿಳೆ ಸಾವು
– ಚಿಕ್ಕಮಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು!
– ಭದ್ರಾವತಿ: ಗಾಂಜಾ ಸೇವಿಸುತ್ತಿದ ಇಬ್ಬರ ಬಂಧನ
– ಸೊರಬ : ಕೆರೆಗೆ ಉರುಳಿದ ಲಾರಿ, ಲಾರಿ ಚಾಲಕ ಅಪಾಯದಿಂದ ಪಾರು
– ತೀರ್ಥಹಳ್ಳಿ : ಜಲಜೀವನ್ ಮಿಷನ್ ಕಾಮಗಾರಿಯಿಂದಾಗಿ ಮಾಸ್ತಿಕಟ್ಟೆಯಲ್ಲಿ ಲಾರಿ ಡಿಕ್ಕಿ
NAMMUR EXPRESS NEWS
ಶಿವಮೊಗ್ಗ: ಗಂಡ ಹೆಂಡತಿಯಾಗಿ ಚೆನ್ನಾಗಿದ್ದಾಗ ಹೆಂಡತಿ ಹೆಸರಿನಲ್ಲಿ ಕಾರು ಖರೀದಿಸಿದ ಗಂಡ, ಸಂಸಾರದಲ್ಲಿ ಬಿರುಕು ಬಿಟ್ಟಾಗ ನಕಲಿ ಸಹಿ ಬಳಸಿ ಆ ಕಾರನ್ನು ತನ್ನ ಹೆಸರಿಗೆ ವರ್ಗಾಯಿಸಿ ಕೊಂಡಿರುವ ಘಟನೆ ತುಂಗಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ದೂರು ದಾಖಲಾಗಿದೆ. 2022 ರಲ್ಲಿ ಟಾಟಾ ನೆಕ್ಸಾನ್ ವಾಹನವನ್ನು ಚಿ್ರದರ್ಗ ಜಿಲ್ಲೆಯ ಮಹೇಶ್ ಎಂಬುವರು ಹೆಂಡತಿಯ ಹೆಸರಿನಲ್ಲಿ ಖರೀದಿಸಿದ್ದರು. ತದ ನಂತರದಲ್ಲಿ ಮಹೇಶ್ ಮತ್ತು ಪತ್ನಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಬೇರೆಯಾಗಿದ್ದಾರೆ. ಮಹೇಶನ ಪತ್ನಿ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದಾರೆ. 2023 ರಲ್ಲಿ ಮಹೇಶ್ ಆರ್ ಸಿ ಬುಕ್ ನಲ್ಲಿ ಪತ್ನಿಯ ನಕಲು ಸಹಿ, ದಾಖಲಾತಿ ಸೃಷ್ಟಿಸಿ, ಎರಡನೇ ಪಾರ್ಟಿಯನ್ನಾಗಿ ಮಾಡಿಕೊಂಡು ತಮ್ಮ ಹೆಸರಿಗೆ ಕಾರನ್ನು ವರ್ಗಾಯಿಸಿಕೊಂಡಿದ್ದಾರೆ. ಈ ರೀತಿ ನಕಲಿ ದಾಖಲಾತಿ ಸೃಷ್ಟಿಸಿ ಆಸ್ತಿಗಳನ್ನೂ ಹೀಗೆ ವಂಚಿಸಲು ಪತಿ ಮುಂದಾಗಬಹುದು. ಮತ್ತು ಕಾರನ್ನು ತಮ್ಮ ಗಮನಕ್ಕೆ ತಾರದೆ, ನಕಲು ಸಹಿ ಮಾಡಿ ಬದಲಿಸಿಕೊಂಡು ವಂಚಿಸಿರುವ ಬಗ್ಗೆ ಪತ್ನಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
– ಶಿವಮೊಗ್ಗ : ಬೀದಿ ನಾಯಿ ಕಡಿತದಿಂದಾಗಿ ಮಹಿಳೆ ಸಾವು
ಶಿವಮೊಗ್ಗ: ನಾಯಿ ಕಡಿತಕ್ಕೊಳಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಯೋರ್ವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ನಡೆದಿದೆ. ಹೊಸನಗರ ಪಟ್ಟಣದ ಎಂ ಗುಡ್ಡಕೊಪ್ಪದ ನಿವಾಸಿ ಸಂಗೀತಾ (38) ಮೃತಪಟ್ಟವರು. ಕೆಲವು ವರ್ಷಗಳ ಹಿಂದೆ ಇವರ ಪತಿ ಮೃತರಾಗಿದ್ದರು. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿಯಿದ್ದಾರೆ. 2 ತಿಂಗಳ ಹಿಂದೆ ಇವರು ತೋಟಕ್ಕೆ ಹೋಗಿ ಬರುವಾಗ, ಬೀದಿ ನಾಯಿಯೊಂದು ಕಚ್ಚಿದೆ ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ. ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿತ್ತು. ಹೊಸನಗರ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ನಾಯಿ ಕಡಿತದಿಂದ ರೇಬೀಸ್ ಉಲ್ಬಣಿಸಿರುವುದು ಪತ್ತೆಯಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.
– ಚಿಕ್ಕಮಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು!
ಚಿಕ್ಕಮಗಳೂರು: ಕಾಡಾನೆಯೊಂದು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಳಗಾಮೆಯ ಆ್ರಯ ಎಸ್ಟೇಟ್ ಬಳಿ ನಡೆದಿದೆ. ಇಲ್ಲಿನ ಭದ್ರಾ ಅಭಯಾರಣ್ಯದಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆ ಬೇಲಿ ದಾಟುವ ವೇಳೆ ಇಲ್ಲಿನ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
– ಭದ್ರಾವತಿ: ಗಾಂಜಾ ಸೇವಿಸುತ್ತಿದ ಇಬ್ಬರ ಬಂಧನ
ಭದ್ರಾವತಿ : ತಾಲೂಕಿನ ಅರಹಳ್ಳಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರಲ್ಲಿ ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ಗ್ರಾಮದಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರು ಯುವಕರಲ್ಲಿ ಇಬ್ಬರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅರಹಳ್ಳಿಯಲ್ಲಿ ಮೂವರು ಯುವಕರು ಗಾಂಜಾ ಸೇವಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು 112 ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಒಬ್ಬರನ್ನು ಹಿಡಿದ್ದಾರೆ. ಇಬ್ಬರು ತಪ್ಪಿಸಿಕೊಂಡಿದ್ದಾರೆ. ಇಬ್ಬರಲ್ಲಿ ಒಬ್ಬರನ್ನು ಗ್ರಾಮಸ್ಥರು ಹಿಡಿದು ಮತ್ತೆ ಪೊಲೀಸರಿಗೆ ನೀಡಿದ್ದಾರೆ. ಇದಲ್ಲಿ ಜಬೀ (19) ಎಂಬ ಯುವಕನಲ್ಲಿ ಗಾಂಜಾ ಪಾಸಿಟಿವ್ ಬಂದಿದೆ. ಅನ್ವರ್ ಕಾಲೋನಿಯ ಮೊಹಮದ್ ಜಬೀಗೆ ಗಾಂಜಾ ಪಾಸಿಟಿವ್ ಬಂದಿದೆ. – ಅಣ್ಣಾನಗರದ ಸಂಜಯ್ (19), ಮತ್ತೋರ್ವ ಓಡಿಹೋಗಿದ್ದಾನೆ.
– ಸೊರಬ : ಕೆರೆಗೆ ಉರುಳಿದ ಲಾರಿ,ಲಾರಿ ಚಾಲಕ ಅಪಾಯದಿಂದ ಪಾರು
ಸೊರಬ : ಸೊರಬ ತಾಲ್ಲೂಕು ಹಳೇ ಸೊರಬದ ಶಾಂತಿಕೆರೆ ಸಮೀಪ ಹಾನಗಲ್ ಕಡೆಯಿಂದ ಸೊರಬ ಪಟ್ಟಣಕ್ಕೆ ಬರುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ಎದುರಿಗೆ ಬಂದ ವಾಹನ ಮುಂದಕ್ಕೆ ಸಾಗಲು ಅನುವು ಮಾಡಿಕೊಡುವ ಸಂದರ್ಭದಲ್ಲಿ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ
ತೀರ್ಥಹಳ್ಳಿ : ಜಲಜೀವನ್ ಮಿಷನ್ ಕಾಮಗಾರಿಯಿಂದಾಗಿ ಮಾಸ್ತಿಕಟ್ಟೆಯಲ್ಲಿ ಲಾರಿ ಡಿಕ್ಕಿ
ತೀರ್ಥಹಳ್ಳಿ : ತಾಲ್ಲೂಕು ಮಾಸ್ತಿಕಟ್ಟೆ ಸಮೀಪ ಯಡೂರಿನಲ್ಲಿ ಸಿಲಿಂಡರ್ ಲಾರಿಯೊಂದರ ಚಕ್ರ ರಸ್ತೆಬದಿಯಲ್ಲಿ ಹೂತು, ಲಾರಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿದೆ. ಜಲಜೀವನ್ ಮಿಷನ್ ಕಾಮಗಾರಿಯಿಂದಾಗಿ ಮುಖ್ಯರಸ್ತೆಗಳ ಪಕ್ಕದಲ್ಲಿ ಮಣ್ಣು ತೆಗೆದು ಕಾಲುವೆ ಮಾಡಿ ಪೈಪ್ ಅಳವಡಿಸುತ್ತಿರುವುದರಿಂದ ರಸ್ತೆಗಳು ಕುಿಯುತ್ತಿದೆ. ದರಿಂದ ರಸ್ತೆ ಬಿಟ್ಟು ಕೆಳಗಿಳಿದ ವಾಹನಗಳ ಚಕ್ರಗಳು ಹೊಂಡದಲ್ಲಿ ಹೂತುಹೋಗುತ್ತಿದೆ. ಇಲ್ಲಿಯು ಅದೇ ರೀತಿಯಾಗಿದ್ದು, ಲಾರಿ ಚಕ್ರ ಹುಗಿದು ನಿಯಂತ್ರಣ ತಪ್ಪಿ ಲಾರಿಯು ಕರೆಂಟ್ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಲಾರಿ ಜಖಂಗೊಂಡಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಯಾರಿಗೂ ಅಪಾಯವಾಗಿಲ್ಲ.