Categories
ಶಿವಮೊಗ್ಗ

ಸುದರ್ಶನ್ ತಾಯಿಮನೆ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ!

ಸುದರ್ಶನ್ ತಾಯಿಮನೆ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ!
– ಜೆಸಿಐ ಭಾರತದ ಪ್ರತಿಷ್ಠಿತ ವಲಯದ “ಕಮಲ ಪತ್ರ ಪ್ರಶಸ್ತಿ
– ಮಕ್ಕಳ ಸೇವಕನಿಗೆ ಒಲಿದ ಗೌರವ: ಅಭಿನಂದನೆಗಳು

NAMMUR EXPRESS NEWS
ಶಿವಮೊಗ್ಗ: ಜೆಸಿಐ ಭಾರತದ ಪ್ರತಿಷ್ಠಿತ ವಲಯ24ರ ಅನುಬಂಧ ವಲಯ ಸಮ್ಮೇಳದಲ್ಲಿ ತಾಯಿಮನೆ ಸುದರ್ಶನ್ ಅವರ ಸೇವೆಯನ್ನು ಗುರುತಿಸಿ, ವೀರಶೈವ ಸಾಂಸ್ಕೃತಿಕ ಭವನದಲ್ಲಿ ವಲಯದ ಪ್ರತಿಷ್ಠಿತ ಪ್ರಶಸ್ತಿಯಾದ “ಕಮಲ ಪತ್ರ-2023” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಕ್ಷರ ಸಂತರು ಹರೇಕಳ ಹಾಜಬ್ಬ, ಸಂಸದರಾದ ಬಿ .ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್ ಅರುಣ್ ಮತ್ತು ಸರ್ಜಿ ಫೌಂಡೇಶನ್ ಅಧ್ಯಕ್ಷರಾದ ಡಾ. ಧನಂಜಯ್ ಸರ್ಜಿ ಹಾಗೂ ವಲಯ24ರ ಅಧ್ಯಕ್ಷರಾದ ಜೆ ಸಿ ಅನುಷ್ ಗೌಡ, ಜೆ ಸಿ ಶ್ರೀಧರ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ತಾಯಿಮನೆ ಮೂಲಕ ಸೇವೆ

ಶಿವಮೊಗ್ಗದ ಅಳ್ಕೊಳದಲ್ಲಿ ತಮ್ಮ ತಾಯಿಮನೆ ಮಕ್ಕಳ ಆಶ್ರಮದ ಮೂಲಕ ಈವರೆಗೆ ನೂರಾರು ಮಕ್ಕಳ ಬದುಕಿಗೆ ಬೆಳಕಾಗಿರುವ ಸುದರ್ಶನ್ ರಾಜ್ಯದ ಸೇವಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅನಾಥ ಹಾಗೂ ವಿದ್ಯೆಯಿಂದ ವಂಚಿತರಾಗುವ ಮಕ್ಕಳಿಗೆ ಸೂರು, ಅನ್ನ, ಶಿಕ್ಷಣದ ಮೂಲಕ ಸೇವೆ ಮಾಡುತ್ತಿದ್ದಾರೆ. ಈವರೆಗೆ ನೂರಾರು ಗೌರವ ಪಡೆದಿದ್ದಾರೆ.

ತಾಯಿಮನೆ ಸುದರ್ಶನ್ ಅವರಿಗೆ ಅಭಿನಂದನೆಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.