ಟಾಪ್ 3 ನ್ಯೂಸ್ ಶಿವಮೊಗ್ಗ
ಶಿವಮೊಗ್ಗ : ಸ್ಯಾಂಟ್ರೋ ಕಾರ್ ನಲ್ಲಿ ದನಗಳ್ಳತನಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್
– ಭದ್ರಾವತಿ: ಕತ್ತು ಸೀಳಿದ ಸ್ಥಿತಿಯಲ್ಲಿ ಯುವಕ ಶವ ಪತ್ತೆ..!!
– ಶಿವಮೊಗ್ಗ : ಬೈಕ್ ಸವಾರನ ನಿಯಂತ್ರಣ ತಪ್ಪಿದ ಬೈಕ್ ಗುಂಡಿಗೆ ಬಿದ್ದು ವ್ಯಕ್ತಿ ಸಾವು..!!
NAMMUR EXPRESS NEWS
ಶಿವಮೊಗ್ಗ : ನಡುರಾತ್ರಿ ದನಗಳ್ಳತನಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್ ಒಂದು ಸ್ಥಳೀಯರು ಬರುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದೆ. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗದ ತಾಲೂಕು ಗಾಜನೂರಿನ ಬಸವೇಶ್ವರ ಬೀದಿಯಲ್ಲಿ ನಡೆದಿದೆ. ಮಾ.20ರಂದು ರಾತ್ರಿ 3 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಬಸವೇಶ್ವರ ಬೀದಿಯಲ್ಲಿ ನಡುರಾತ್ರಿ ಶಬ್ದವಾಗುತ್ತಿತ್ತು. ನಾಯಿಗಳು ಜೋರಾಗಿ ಬೊಗಳುತ್ತಿದ್ದವು. ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ಹೊರ ಬಂದಾಗ ರಸ್ತೆ ಬದಿ ನಿಂತಿದ್ದ ಹಸುವೊಂದನ್ನು ಸ್ಯಾಂಟ್ರೋ ಕಾರಿಗೆ ತುಂಬಿಕೊಳ್ಳುವ ಪ್ರಯತ್ನ ನಡೆಯುತ್ತಿತ್ತು ಎಂದು ಆರೋಪಿಸಲಾಗಿದೆ. ಕಾರಿನಲ್ಲಿ ಮೂರ್ನಾಲ್ಕು ಜನರಿದ್ದರು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
– ಭದ್ರಾವತಿ: ಕತ್ತು ಸೀಳಿದ ಸ್ಥಿತಿಯಲ್ಲಿ ಯುವಕ ಶವ ಪತ್ತೆ..!!
ಭದ್ರಾವತಿ: ವ್ಯಕ್ತಿಯೋರ್ವನ ಶವ ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಿಹಾಳು ಸಮೀಪದ ಬೋಮ್ಮನಕಟ್ಟೆ ಗ್ರಾಮದಲ್ಲಿ ಶ್ರೀನಿವಾಸ (28) ಎಂಬ ಯುವಕನ ಶವಪತ್ತೆಯಾಗಿದ್ದು, ಆತನ ಕುತ್ತಿಗೆ ಸೀಳಲಾಗಿದೆ. ಕುಡಿತಕ್ಕೆ ದಾಸನಾಗಿದ್ದ ಶ್ರೀನಿವಾಸ್ ತಮ್ಮ ಮನೆಯ ಮೇಲೆ ಆತನ ಶವಪತ್ತೆಯಾಗಿದೆ. 7 ವರ್ಷಗಳ ಹಿಂದೆ ಶ್ರೀನಿವಾಸ್ ಮದುವೆಯಾಗಿದ್ದ. ಎರಡು ಗಂಡು ಮಕ್ಕಳಿದ್ದರು. ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಿನ್ನೆ ರಾತ್ರಿ ಆತನ ಶವ ಪತ್ತೆಯಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು – ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ ಶ್ರೀನಿವಾಸ್ ಅಧಿಕ ಕುಡಿತದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
– ಶಿವಮೊಗ್ಗ : ಬೈಕ್ ಸವಾರನ ನಿಯಂತ್ರಣ ತಪ್ಪಿದ ಬೈಕ್ ಗುಂಡಿಗೆ ಬಿದ್ದು ವ್ಯಕ್ತಿ ಸಾವು..!!
ಶಿವಮೊಗ್ಗ : ಬೈಕ್‌ನ ಮುಂಭಾಗದಲ್ಲಿ ಅಕ್ಕಿಮೂಟೆ ಇಟ್ಟುಕೊಂಡು ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿವಮೊಗ್ಗದ ಪಿಇಎಸ್ ಕಾಲೇಜು ಹಿಂಭಾಗ ಕಿಮ್ಮನೆ ಗಾಲ್ಫ್ ಕ್ಲಬ್‌ಗೆ ತೆರಳುವ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ಕೇರಳ ಮೂಲದ ಎರ್ನಾಕುಲಂನ ಜೋಬಿ ಪೌಲ್ (45) ಮೃತ ಬೈಕ್ ಸವಾರ. ಇಲ್ಲಿನ ಫಾರಂ ಒಂದರಲ್ಲಿ ಜೋಬಿ ಪೌಲ್ ಕೆಲಸ ಮಾಡುತ್ತಿದ್ದರು. ಸಾಗರ ರಸ್ತೆಯ ಅಂಗಡಿಯೊಂದರಲ್ಲಿ ಅಕ್ಕಿ ಮೂಟೆ ಖರೀದಿಸಿ, ಅದನ್ನು ಬೈಕಿನ ಮುಂಭಾಗದಲ್ಲಿ ಇರಿಸಿಕೊಂಡು ಫಾರಂಗೆ ಹಿಂತಿರುಗುತ್ತಿದ್ದರು. ಈ ಸಂದರ್ಭ ನಿಯಂತ್ರಣ ತಪ್ಪಿದ ಬೈಕ್ ಗುಂಡಿಗೆ ಬಿದ್ದಿದೆ ಎಂದು ಆರೋಪಿಸಲಾಗಿದೆ. ಗುಂಡಿಗೆ ಬಿದ್ದ ಜೋಬಿ ಪೌಲ್ ತಲೆ ಸಿಮೆಂಟ್ ಕಂಬಕ್ಕೆ ಹೊಡೆದುಕೊಂಡಿದೆ. ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.