Categories
ಶಿವಮೊಗ್ಗ

ಸುದರ್ಶನ್ ತಾಯಿಮನೆ ಜೆಸಿಐ ಶಿವಮೊಗ್ಗ ರಾಯಲ್ಸ್ ಸಾರಥಿ!

ಸುದರ್ಶನ್ ತಾಯಿಮನೆ ಜೆಸಿಐ ಶಿವಮೊಗ್ಗ ರಾಯಲ್ಸ್ ಸಾರಥಿ!
– ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಜೆ ಎಫ್ ಸಿ ರೆಕೇಶ್ ಶರ್ಮ ಮುಖ್ಯ ಅತಿಥಿ
– ಜ.8ರಂದು ಸಂಜೆ ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ಶಿವಮೊಗ್ಗ: ಜೆಸಿಐ ಭಾರತ ವಲಯ 24ರ ಘಟಕವಾದ ಜೆಸಿಐ ಶಿವಮೊಗ್ಗ ರಾಯಲ್ಸ್ ನ 2024ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭವು ಜ.8ರಂದು ಸೋಮವಾರದಂದು ನಡೆಯಲಿದೆ. ಸಮಯ ಸಂಜೆ 6.30ಕ್ಕೆ ಸರ್ಕಾರಿ ನೌಕರರ ವಿಕಾಸ ಕೇಂದ್ರ, ಆಫೀಸರ್ಸ್ ಕ್ವಾಟ್ರಸ್, ಬಸವನಗುಡಿ, ಶಿವಮೊಗ್ಗದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಜೆ ಎಫ್ ಸಿ ರೆಕೇಶ್ ಶರ್ಮ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಜೆಸಿಐ ಶಿವಮೊಗ್ಗ ರಾಯಲ್ಸ್ ಇದರ ಅಧ್ಯಕ್ಷರಾಗಿ ತಾಯಿಮನೆ ಆಶ್ರಮದ ಸಂಸ್ಥಾಪಕ, ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸುದರ್ಶನ್ ತಾಯಿಮನೆ ನೂತನ ಅಧ್ಯಕ್ಷರಾಗಿ ನಿಯೋಜನೆಗೊಳ್ಳಲಿದ್ದಾರೆ. ವಲಯ 24ರ ಎಲ್ಲಾ ಜೆಸಿಐ ಸದಸ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.