Categories
ಶಿವಮೊಗ್ಗ

ದಸರಾಗೆ ಬಂದಿದ್ದ ಆನೆ ಹೆಣ್ಣು ಮರಿಗೆ ಜನ್ಮ ನೀಡಿತು!

ದಸರಾಗೆ ಬಂದಿದ್ದ ಆನೆ ಹೆಣ್ಣು ಮರಿಗೆ ಜನ್ಮ ನೀಡಿತು!
– ಶಿವಮೊಗ್ಗದಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ ನೇತ್ರಾವತಿ
– ಸಕ್ರೆಬೈಲು ಆನೆ ಬಿಡಾರದಿಂದ ಬಂದಿದ್ದ ಆನೆ
– ಶಿವಮೊಗ್ಗದಲ್ಲೂ ಸಂಭ್ರಮದ ದಸರಾ

NAMMUR EXPRESS NEWS
ಶಿವಮೊಗ್ಗ: ಜಂಬೂ ಸವಾರಿಯಲ್ಲಿ ಭಾಗವಹಿಸಲು ಬಂದಿದ್ದ ನೇತ್ರಾವತಿ ಆನೆ ಮರಿ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಕೋಟೆ ರಸ್ತೆಯ ವಾಸವಿ ಶಾಲೆ ಆವರಣದಲ್ಲಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. 28 ವರ್ಷದ ನೇತ್ರಾವತಿ ಜಂಬೂ ಸವಾರಿಯಲ್ಲಿ ಭಾಗವಹಿಸಲು ಬಂದಿತ್ತು. ಸಕ್ರೇಬೈಲು ಆನೆ ಬಿಡಾರದಿಂದ ಆಗಮಿಸಿತ್ತು. ಇಂದು ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿತ್ತು. ಇದೀಗ ನೇತ್ರಾವತಿ ಆನೆ 5ನೇ ಬಾರಿ ಮರಿ ಹಾಕುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದೆ.

ಇನ್ನು ನೇತ್ರಾವತಿ ಆನೆಯನ್ನು ವೈದ್ಯ ಡಾ. ವಿನಯ್ ಪರಿಶೀಲಿಸಿದ್ದರು. ಕಳೆದ 3 ತಿಂಗಳ ಹಿಂದೆ ಡಾ.ವಿನಯ್ ಅನಾರೋಗ್ಯಕ್ಕೀಡಾಗಿ ರಜೆಯಲ್ಲಿದ್ದರು. ಆದರೆ ಆನೆ ಗರ್ಭ ಧರಿಸಿದ್ದು, ಗೊತ್ತಾಗದೆ ನೇತ್ರಾವತಿಯನ್ನು ಕರೆ ತಂದಿದ್ದರು. ಸದ್ಯ ಬಾಣಂತಿ ಆನೆಯ ಆರೈಕೆಯಲ್ಲಿ ತೊಡಗಿರುವ ಮಾವುತರು, ಕಾವಾಡಿಗರು ತೊಡಗಿದ್ದಾರೆ. ಹಾಗಾಗಿ ಇಂದಿನ ಜಂಬೂ ಸವಾರಿಯಲ್ಲಿ ನೇತ್ರಾವತಿ ಭಾಗವಹಿಸುವುದು ಅನುಮಾನ. ಮತ್ತೊಂದೆಡೆ ಗರ್ಭಿಣಿ ಆನೆಯನ್ನು ಮೆರವಣಿಗೆಗೆ ಕರೆತಂದ ಬಿಡಾರದ ವೈದ್ಯರು-ಸಿಬ್ಬಂದಿ ಬಗ್ಗೆ ಸ್ಥಳೀಯರ ಅಸಮಾಧಾನ ಹೊರಹಾಕಿದ್ದಾರೆ. ಶಿವಮೊಗ್ಗದಲ್ಲೂ ಸಂಭ್ರಮದ ದಸರಾ ಆಚರಣೆ ಮಾಡಲಾಗುತ್ತಿದ್ದು, ಇಂದು ತೆರೆ ಕಾಣಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.