ಬಸ್ ಪಕ್ಕ ಕುಳಿತ ಮಹಿಳೆ ನಂಬಿ ಲಕ್ಷ ಕಳೆದುಕೊಂಡ!
– ಲಾಡ್ಜ್‌ನಲ್ಲಿ ಪುರುಷನನ್ನು ಬಿಟ್ಟು ಎಸ್ಕೇಪ್
– ಬಂಗಾರ, ಹಣ ದೋಚಿದ ಮಳ್ಳಿ: ಬಸ್ನಲ್ಲಿ ನಡೆದ ಕಳ್ಳಿಯ ಪ್ರೇಮ ಕಥೆ
NAMMUR EXPRESS NEWS
ಬಸ್ ಪಕ್ಕ ಕುಳಿತ ಮಹಿಳೆ ನಂಬಿ ಪುರುಷನೊಬ್ಬ ಲಕ್ಷ ಕಳೆದುಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಉತ್ತರ ಕನ್ನಡದಿಂದ ಶಿವಮೊಗ್ಗಕ್ಕೆ ಬರುವಾಗ ಕೆಎಸ್ ಆರ್‌ಟಿಸಿ ಬಸ್‌ನಲ್ಲಿ ಸಿಕ್ಕ ಮಹಿಳೆಯನ್ನ ನಂಬಿ ತನ್ನದ್ದೆಲ್ಲಾ ಕಳೆದುಕೊಂಡಿದ್ದಾನೆ. ಶಿವಮೊಗ್ಗಕ್ಕೆ ಬರುವಷ್ಟರಲ್ಲಿ ಮಹಿಳೆ ಪಕ್ಕದಲ್ಲಿದ್ದ ವ್ಯಕ್ತಿಯ ಜೊತೆ ಸಲುಗೆ ತೆಗೆದುಕೊಂಡಿದ್ದಳು. ಆತ ಸಹ ಮಹಿಳೆ ತೋರಿದ ಪ್ರೀತಿಗೆ ಮರುಳಾಗಿದ್ದ. ಗಂಡನಿಲ್ಲದ ಬದುಕಿದು, ಸ್ನೇಹದ ಸಾನಿಧ್ಯ ಬೇಕಿದೆ, ಒಪ್ಪಿತ ಸಂಬಂಧದ ಆಸೆ ತೋರಿದ್ದ ಮಹಿಳೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಳಿಯುತ್ತಲೇ ಪರಪುರಷನನ್ನ ಅಲ್ಲಿಯೇ ಸಮೀಪದ ಹೊಸ ಲಾಡ್ಜ್ ಒಂದಕ್ಕೆ ಕರೆದೊಯ್ದಿದ್ದಳು..
ತಿಂಡಿ ತರುವಷ್ಟರಲ್ಲಿ ಮಾಯ
ತಾನೇ ರೂಮ್ ಬುಕ್ ಮಾಡಿಕೊಂಡು ರೂಮಿಗೆ ಕರೆಸಿಕೊಂಡ ಮಹಿಳೆ ಪರಪುರಷನಿಗೆ ತನ್ನಲ್ಲಿರುವ ಚಿನ್ನ, ದುಡ್ಡು ಎಲ್ಲಾ ಬ್ಯಾಗ್ ಗೆ ಹಾಕಿಟ್ಟುಕೊಳ್ಳಲು ಹೇಳಿದ್ದಾಳೆ. ತನ್ನೊಂದಿಗೆ ಮಲಗಲು ಚಿನ್ನಾಭರಣ ತೆಗೆದಿಡಬೇಕು ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ ಎಂದು ಪರಪುರಷನನ್ನ ನಂಬಿಸಿದ್ದಾಳೆ. ಎಲ್ಲವನ್ನು ಆಕೆಯೇ ನೋಡಿಕೊಳ್ತಿದ್ದರಿಂದ ಆತನು ಆಕೆ ಹೇಳಿದಾಗೆ ಕೇಳಿದ್ದಾಳೆ. ಅಷ್ಟರಲ್ಲಿ ದುಡ್ಡುಕೊಟ್ಟು ಪರಪುರಷನ ಬಳಿ ನೀರು, ಊಟ ತರಲು ಹೇಳಿದ್ದಾಳೆ. ಆತ ಸರಿ ಎಂದು ಹೊರಕ್ಕೆ ಹೋಗಿ ತಿಂಡಿ ನೀರು ತರಲು ಖರೀದಿಸಿದ.
ಅಲ್ಲಿವರೆಗೂ ಎಲ್ಲವೂ ಸರಿಯಾಗಿತ್ತು. ಪರಪುರುಷ ವಾಪಸ್ ಲಾಡ್ಜ್ ಗೆ ಬರುವಾಗ, ಲಾಡ್ಜ್‌ನಲ್ಲಿದ್ದವರು ನಿಮ್ಮವರು ಹೋದರು ಎಂದಿದ್ದಾರೆ. ಈತನಿಗೆ ಭಯವಾಗಿ ರೂಮಿಗೆ ಹೋಗಿ ನೋಡಿದ್ದಾನೆ. ಅಲ್ಲಿ ದುಡ್ಡು. ಚಿನ್ನ ಇದ್ದ ಬ್ಯಾಗ್ ಸಹ ಮಾಯವಾಗಿತ್ತು. ತಾನು ಮೋಸ ಹೋಗಿದ್ದು ಅರಿವಾದರೂ ಮರ್ಯಾದೆಯ ಪ್ರಶ್ನೆಯಾಗಿತ್ತು. ಖುದ್ದು ಹುಡುಕಿ ಕೊನೆ ದೊಡ್ಡಪೇಟೆ ಪೊಲೀಸರ ಮೊರೆಹೋಗಿದ್ದಾರೆ. ಸದ್ಯ ದೊಡ್ಡಪೇಟೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
