Categories
ಶಿವಮೊಗ್ಗ

ವಾಹನ ಡಿಕ್ಕಿ; ಚಿರತೆ ಸಾವು!

ವಾಹನ ಡಿಕ್ಕಿ; ಚಿರತೆ ಸಾವು!
– ಆಯನೂರು ಸಮೀಪ ಘಟನೆ
– ಅರಣ್ಯ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಎಚ್ಚರ!

NAMMUR EXPRESS NEWS
ಶಿವಮೊಗ್ಗ: ಚಿರತೆಯೊಂದು ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಆಯನೂರು ಸಮೀಪದ ಕಲ್ಲುಕುರ್ಚಿ ಬಳಿ ನಡೆದಿದೆ. ಸೋಮವಾರ ರಾತ್ರಿ ಘಟನೆ ನಡೆದಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.‌ ಆಯನೂರು – ಹಣಗೆರೆ ಕಟ್ಟೆ – ಬೆಜ್ಜವಳ್ಳಿ ಮಾರ್ಗದಲ್ಲಿ ಈ ಘಣನೆ ನಡೆದಿದೆ. ಒಂದೂವರೆ ವರ್ಷದ ಗಂಡು ಚಿರತೆ ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ ವಾಹನ ಅಪ್ಪಳಿಸಿದ್ದು ಚಿರತೆಯ ಮುಖ ಸಂಪೂರ್ಣ ನಜ್ಜುಗುಜ್ಜಾಗಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದೆ. ಸುದ್ದಿ ತಿಳಿದು ಹಣಗೆರೆಕಟ್ಟೆ ವಲಯ ಅರಣ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶೆಟ್ಟಿಹಳ್ಳಿ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು. ಅರಣ್ಯಪ್ರದೇಶಗಳಲ್ಲಿ ರಸ್ತೆ ದಾಟುವಾಗ ಜಿಂಕೆ, ಚಿರತೆ, ಕಾಡುಕೋಣಗಳ ಬಗ್ಗೆ ಎಚ್ಚರಿಕೆ ಹೊಂದುವುದು ಅಗತ್ಯವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.