ಕುದುರೆಮುಖ ಚಾರಣ:
ಕುದುರೆಮುಖ — ಹೆಸರೇ ಕವಿತೆಯಂತೆ. ಮೋಡದ ಮೇಲ್ಗಡೆಯಿಂದ ತಂದು ಇಳಿಸಿದ ನಿತ್ಯ ಸೌಂದರ್ಯದ ಹಿಮಪುಟ. ನಾವು ಅಲ್ಲಿ ನಡೆದು ಬಂದದ್ದು ಕೇವಲ ಕಿಲೋಮೀಟರ್‌ಗಳ ಹಾದಿ ಅಲ್ಲ, ಅದು ಆತ್ಮದ ತಳಮಳಗಳಿಗೆ ಸ್ಪಂದಿಸಿದ ನಿಜವಾದ ಅನುಭವದ ಹಾದಿ.
ಚಾರಣದ ಪ್ರಾರಂಭವೇ ವಿಶೇಷ. ಮೋಡಗಳ ಮಧ್ಯೆ ತೇಲುತ್ತಿರುವಂತೆ ಕಂಡುಬಂದ ಹಾದಿಗಳು, ಕಪ್ಪು ಕೇಶರಾಶಿಯಂತೆ ಮಡಚಿಕೊಂಡು ಸಾಗುವ ಪಾತೆಗಳು — ಪ್ರತಿ ಹೆಜ್ಜೆಯೂ ನವಿನ ಅನುಭವಕ್ಕೆ ಕಿವಿಗೊಟ್ಟಿತು.
ಮಂಜು ಮುಸುಕಿದ ಬೆಟ್ಟಗಳು ಆಕರ್ಷಕ ರಹಸ್ಯಗಳಂತಿದ್ದವು. ಇಂತಹ ಮಂಜಿನಲ್ಲಿ ಬೆಟ್ಟಗಳನ್ನು ನೋಡಿ ಹೃದಯ ನಗಿತು. ದೂರದಲ್ಲಿ ಕಾಣುತ್ತಿದ್ದ ಕಂದಕಗಳು ಮತ್ತು ಕಮರಿಗಳು ನಮ್ಮೊಳಗಿನ ಶಾಂತತೆಯ ಪ್ರತಿಬಿಂಬವಾಗಿ ಕಾಣಿಸಿಕೊಂಡವು. ಒಂದು ಕ್ಷಣದಲ್ಲಿ ನಾವು ಭೂಮಿಯ ಮೇಲಿಲ್ಲ, ಮೋಡದೊಳಗಿದ್ದೆವು ಎನಿಸಿತು.
ತಂಗಾಳಿ ತಂಪಾಗಿ ಮೈ ಸೋಕಿದಾಗ, ಪ್ರಕೃತಿಯ ಸೌಂದರ್ಯ ಮನಸ್ಸನ್ನು ಲವಲವಿಕೆಯಿಂದ ತುಂಬಿತು. ಆ ಗಾಳಿ ಮಾತಾಡಿದಂತಿತ್ತು — “ಇಲ್ಲಿ ನಿಲ್ಲು, ಉಸಿರೆಳೆದೂ ಸಾಕು, ನಿನ್ನೊಳಗಿನ ಭಾರವನ್ನೇ ಬಿಸುಡು.”
ಕುದುರೆಮುಖದ ಹಸಿರು ಹೊದಿಕೆಯ ಹಾದಿಯಲ್ಲಿ ನಡೆದಾಗ ಪ್ರತಿ ಹೆಜ್ಜೆಯೂ ಭಾವನೆಗಳಿಗೆ ಹೊಸ ಆವೃತ್ತಿ ನೀಡಿತು. ಓಡಿದ ನದಿ, ಮಳೆಗಾಲದ ಚಿತ್ತಾರಗಳು, ಹಕ್ಕಿಗಳ ಕಿರುಚಾಟ, ಎಲ್ಲಿ ನೋಡಿದರೂ ಜೀವಂತ ಪ್ರಕೃತಿಯ ಹಬ್ಬ.
ಬೇರೊಂದು ಜಗತ್ತು ಕಾಣಿಸಿದಂತಿತ್ತು — ಇಲ್ಲಿನ ಮಂಜು ಕವಿತೆಯ ಹೊದಿಕೆ, ಬೆಟ್ಟಗಳು ಮೌನ ಸಂಭಾಷಣೆ, ಹಾದಿಗಳು ಮನಸ್ಸಿನೊಳಗಿನ ಯಾತ್ರೆ. ಜೀವನದ ತುಂತುರು ಹಿಮಧಾರೆ ಇಲ್ಲಿ ತಲೆದೋರುತ್ತದೆ.
ಇದು ಕೇವಲ ಚಾರಣವಲ್ಲ, ಇದು ಮನಸ್ಸಿನ ಮೌಲ್ಯಯಾತ್ರೆ. ನಾವು ತಿರುಗಿ ಬಂದದ್ದು ಹೊಳೆಯುವ ನೆನಪುಗಳೊಂದಿಗೆ, ಮನಸ್ಸನ್ನು ಬದಲಿಸಿದ ಯಾನವೊಂದರೊಂದಿಗೆ.
ರಾಂ ಅಜೆಕಾರು ಕಾರ್ಕಳ
