Categories
ಶೃಂಗೇರಿ

ಶೃಂಗೇರಿಯಲ್ಲಿ ಯಶಸ್ವಿ ಉದ್ಯೋಗ ಮೇಳ..!

ಶೃಂಗೇರಿಯಲ್ಲಿ ಯಶಸ್ವಿ ಉದ್ಯೋಗ ಮೇಳ..! 
* 30 ಕಂಪನಿಗಳು ಭಾಗಿ: ನೂರಾರು ಜನರಿಗೆ ಉದ್ಯೋಗ
* ನೂರಾರು ನಿರುದ್ಯೋಗಿ ಯುವ ಜನತೆಗೆ ನೆರವಾದ ಸುಧಾಕರ್ ಶೆಟ್ಟಿ 

NAMMMUR EXPRESS NEWS
ಶೃಂಗೇರಿ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಅವರ ಅಮ್ಮ ಫೌಂಡೇಶನ್ ವತಿಯಿಂದ ಶೃಂಗೇರಿ ಶ್ರೀಜೆಸಿಬಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯದ 5ನೇ ಹಾಗೂ ಶೃಂಗೇರಿ ಕ್ಷೇತ್ರದ 2 ನೇ ಉದ್ಯೋಗ ಮೇಳವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಉದ್ಯೋಗ ಮೇಳದಲ್ಲಿ 30 ಕಂಪನಿಗಳು ಭಾಗವಹಿಸಿದ್ದು, ಸಾವಿರಾರು ಜನ ನಿರುದ್ಯೋಗಿ ಯುವಕ ಯುವತಿಯರು ಪಾಲ್ಗೊಂಡಿದ್ದರು. ನೂರಾರು ಜನರಿಗೆ ಉದ್ಯೋಗ ದೊರಕಿದೆ. ಜತೆಗೆ ಉದ್ಯೋಗ ಪಡೆಯೋದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳ ಸಂದರ್ಶನದಲ್ಲಿ ಪಾಲ್ಗೊಂಡು ಅನುಭವಪಟ್ಟರು.
ಶೃಂಗೇರಿ ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಗಿಣಕಲ್ ನೇತೃತ್ವದಲ್ಲಿ ನಡೆದ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅಮ್ಮ ಫೌಂಡೇಷನ್ ಸುಧಾಕರ್ ಎಸ್ ಶೆಟ್ಟಿ ಸೇರಿದಂತೆ,ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ಜೆಡಿಎಸ್ ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್, ಕರ್ನಾಟಕ ಸಣ್ಣ ಕೈಗಾರಿಕೆ ಮಾಜಿ ಅಧ್ಯಕ್ಷರಾದ ಕೆ ಎಂ ನರಸಿಂಹ ಮೂರ್ತಿ,ಜೆಡಿಎಸ್ ಕಾರ್ಯಕಾರಿಣಿ ಸದಸ್ಯ ಮಂಜುನಾಥ್ ಗಂಡಘಟ್ಟ,ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ ಸಿ ಶಂಕರಪ್ಪ,ಜೆಸಿಬಿಎಂ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿ ಸೇರಿದಂತೆ ತಾಲೂಕಿನ ಎಲ್ಲಾ ಜೆಡಿಎಸ್ ಪ್ರಮುಖರು ಉಪಸ್ಥಿತರಿದ್ದರು.

ಅಮ್ಮ ಫೌಂಡೇಷನ್ ಸೇವೆಗೆ ಎಲ್ಲರ ಮೆಚ್ಚುಗೆ

ಉದ್ಯೋಗ ಮೇಳ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ಅಮ್ಮ ಫೌಂಡೇಷನ್ ಮೂಲಕ ಸುಧಾಕರ್ ಶೆಟ್ಟಿಯವರು ಮಾಡುತ್ತಿರುವ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಮಾಜಮುಖಿ ಕಾರ್ಯದಲ್ಲಿ ತನ್ನೊಂದಿಗೆ ಸಹಕರಿಸಿದ ಪಕ್ಷದ ಎಲ್ಲಾ ಪ್ರಮುಖರಿಗೂ ಭಾಗವಹಿಸಿದ ಕಂಪನಿಯವರಿಗೂ ಧನ್ಯವಾದ ತಿಳಿಸಿದ ಸುಧಾಕರ್ ಶೆಟ್ಟಿ, ಯುವಜನತೆ ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಜತೆಗೆ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆ, ಉದ್ಯೋಗ ಕೊಡಿಸುವುದು ನನ್ನ ಕನಸು ಎಂದು ಹೇಳಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.