Categories
ಶೃಂಗೇರಿ

ಕಾಫಿನಾಡು ಬಂದ್‌ಗೆ ನಿರೀಕ್ಷೆಗೂ ಮೀರಿದ ಬೆಂಬಲ

ಕಾಫಿನಾಡು ಬಂದ್‌ಗೆ ನಿರೀಕ್ಷೆಗೂ ಮೀರಿದ ಬೆಂಬಲ
* ಬೆಂಬಲಿಸಿದ್ದಕ್ಕೆ ಧನ್ಯವಾದ ತಿಳಿಸಿ ವಿಹಿಂಪ – ಬಜರಂಗದಳ
* ಬಂದ್‌ಗೆ ಇರಲಿಲ್ಲ ಜಿಲ್ಲಾಡಳಿತದ ಅನುಮತಿ

NAMMMUR EXPRESS NEWS
ಶೃಂಗೇರಿ: ಪಹಲ್ಗಾಮ್ ಉಗ್ರ ದಾಳಿ ಹಾಗೂ ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷದ್ – ಬಜರಂಗದಳ ಕರೆಕೊಟ್ಟಿದ್ದ ಚಿಕ್ಕಮಗಳೂರು ಜಿಲ್ಲಾ ಬಂದ್‌ಗೆ ಜನರ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.ಬೆಳಿಗ್ಗೆ 6 ರಿಂದಲೇ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವರ್ತಕರು,ಆಟೋ, ಟ್ಯಾಕ್ಸಿ,ಖಾಸಗಿ ಬಸ್‌ಗಳು ರೋಡಿಗಿಳಿಯದೇ ಬಂದ್‌ಗೆ ತಮ್ಮ ಬೆಂಬಲ ಸೂಚಿಸಿದ್ದರು.
ಜಿಹಾದಿ ಮನಸ್ಥಿತಿಗಳಿಂದ ಹಿಂದೂ ಸಮಾಜದ ಮೇಲಾಗುತ್ತಿರುವ ನಿರಂತರ ದಾಳಿ,ಹತ್ಯೆಯನ್ನು ಖಂಡಿಸಿ,ಹಿಂದೂ ಸಮಾಜದ ಜೊತೆ ಹಿಂದೂಗಳೇ ನಿಲ್ಲಬೇಕು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲು ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಕೇವಲ ಸಾಮಾಜಿಕ ಜಾಲತಾಣಗಳು ಹಾಗೂ ಪತ್ರಿಕಾ ಗೋಷ್ಠಿ ನಡೆಸುವ ಮೂಲಕ ಚಿಕ್ಕಮಗಳೂರು ಜಿಲ್ಲಾ ಬಂದ್‌ಗೆ ಕರೆ ಕೊಟ್ಟಿತ್ತು ಆದರೆ ಸಾರ್ವಜನಿಕರಿಗೆ ಈ ದಿಢೀರ್ ಬಂದ್‌ನಿಂದ ತೊಂದರೆಯಾಗುತ್ತದೆ,ಜಿಲ್ಲೆಯಲ್ಲಿ 8 ಕಡೆಗಳಲ್ಲಿ ವಾರದ ಸಂತೆ ಇದೆ,ಪಿಯುಸಿ ಪೂರಕ ಪರೀಕ್ಷೆಗಳು ನಡೆಯುತ್ತಿದ್ದು ಇದಕ್ಕೆಲ್ಲ ತೊಂದರೆಯಾಗುವ ಕಾರಣ ನೀಡಿ ಜಿಲ್ಲಾಡಳಿತ ಬಂದ್‌ಗೆ ಅನುಮತಿ ನೀಡಿರಲಿಲ್ಲ,ಎಂದಿನಂತೆ ತಮ್ಮ ವ್ಯಾಪಾರ ವ್ಯವಹಾರ ನಡೆಸಲು ಸೂಚಿಸಿತ್ತು ಆದರೆ ಇದನ್ನೆಲ್ಲ ಮೀರಿ ಹಿಂದೂ ಸಂಘಟನೆಗಳ ಬಂದ್ ಕರೆಗೆ ನಿರೀಕ್ಷೆಗೂ ಮೀರಿ ಜನರು ಬೆಂಬಲ ವ್ಯಕ್ತಪಡಿಸಿದ್ದು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಅದರಲ್ಲೂ ಶೃಂಗೇರಿ ವಾರದ ಸಂತೆ ಮಾಡದೇ,ಕೊಪ್ಪ,ಎನ್.ಆರ್ ಪುರ,ಕಳಸ ತಾಲೂಕುಗಳಲ್ಲಿ ತಮ್ಮ ನಿರೀಕ್ಷೆಗೂ ಮೀರಿ ಬಂದ್‌ಗೆ ಬೆಂಬಲಿಸಿದ್ದಕ್ಕಾಗಿ ವಿಶ್ವಹಿಂದೂ ಪರಿಷದ್, ಬಜರಂಗಳ ಶೃಂಗೇರಿ ಜಿಲ್ಲೆ ಜನತೆಗೆ ಕೃತಜ್ಞತೆಗಳನ್ನು ತಿಳಿಸಿದೆ. ಈ ಸಂದರ್ಭ ವಿಶ್ವ ಹಿಂದೂ ಪರಿಷದ್ ಬಜರಂಗದಳ ಶೃಂಗೇರಿ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್ ಕೆ.ಪಿ,ಜಿಲ್ಲಾ ಕಾರ್ಯದರ್ಶಿ ದಿವೀರ್ ಮಲ್ನಾಡ್,ಶೃಂಗೇರಿ ಪ್ರಖಂಡದ ಸಹ ಸಂಯೋಜಕ್ ಸಂತೋಷ್ ಕೆರೆಮನೆ,ಶೃಂಗೇರಿ ಗೋ ರಕ್ಷಾ ಪ್ರಮುಖ್ ಸುನಿಲ್ ಕಿಗ್ಗಾ,ಜಿಲ್ಲಾ ಗೋ ರಕ್ಷಾ ಪ್ರಮುಖ್ ರವಿ ಸಂಜಯ್ ಪೂಜಾರಿ,ಎನ್.ಆರ್ ಪುರ ಸಂಚಾಲಕ್ ಮದನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.