Categories
ರಾಜ್ಯ

ಹರಿಹರಪುರ ಮಠದಲ್ಲಿ ” ಸಂಸ್ಕಾರ ಸಮಾವೇಶ”!

  • ಡಾ.ವೀರೇಂದ್ರ ಹೆಗ್ಗಡೆ,ಅನೇಕ ಮಠಾಧೀಶರ ಆಗಮನ
  • ರಾಜೇಗೌಡ, ಜೀವರಾಜ್, ಸುಧಾಕರ್ ಶೆಟ್ಟಿ ಉಪಸ್ಥಿತಿ

NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕಿನ ಹರಿಹರಪುರ ಶ್ರೀಮಠದಲ್ಲಿ ಸನಾತನ ಹಿಂದೂ ಸಮಾಜ ಪರಿಷತ್ತು ವತಿಯಿಂದ ಶುಕ್ರವಾರ ಸಮಾನ ಸಂಸ್ಕಾರ ಸಮಾವೇಶ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗಡೆ ಉದ್ಘಾಟಿಸಿದ್ದು ಹರಿಹರಪುರದಲ್ಲಿ ಧಾರ್ಮಿಕ ಸಂಭ್ರಮ ಮನೆ ಮಾಡಿತ್ತು.
ಬೆಂಗಳೂರು ಬೇಲಿಮಠ ಮಹಾಸಂಸ್ಥಾನದ ಜಗದ್ಗುರು ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚೆನ್ನಯ್ಯ ಸಂಸ್ಥಾನದ ಜಗದ್ಗುರು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹರಿಹರಪುರ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು, ಪ್ರಮುಖರು ಆಗಮಿಸಿ ಆಶೀರ್ವಚನ ನೀಡಿದರು. ಹೆಗ್ಗಡೆ ಅವರು ಮಠವನ್ನು ವೀಕ್ಷಿಸಿದರು.
ಧರ್ಮಸ್ಥಳ ಸಂಘದ ಸದಸ್ಯರು ಹಾಜರ್!
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕೊಪ್ಪ, ನ.ರಾ.ಪುರ, ಶೃಂಗೇರಿ ವ್ಯಾಪ್ತಿಯ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಮೇಲ್ವಿಚಾರಕರು, ಸ್ವಸಹಾಯ ಸಂಘ ಒಕ್ಕೂಟದ ಪದಾಧಿಕಾರಿಗಳು, ಸ್ವಇಚ್ಛೆಯಿಂದ ಬರುವ ಸದಸ್ಯರು ಹರಿಹರಪುರ ಶ್ರೀ ಮಠದಲ್ಲಿ ನಡೆಯುವ ಸಂಸ್ಕಾರ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕೊಪ್ಪ ನ.ರಾ.ಪುರ ಯೋಜನಾಧಿಕಾರಿ ನಿರಂಜನ್‌, ಶೃಂಗೇರಿ ಯೋಜನಾಧಿಕಾರಿ ಶ್ರೀಜಿತ್ ಶೆಟ್ಟಿ ಎಲ್ಲಾ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಶೃಂಗೇರಿ ಶಾಸಕ ರಾಜೇಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಜೆಡಿಎಸ್ ನಾಯಕ ಸುಧಾಕರ್ ಶೆಟ್ಟಿ, ಬಿಜೆಪಿ ನಾಯಕ ಕಗ್ಗ ರಾಮಸ್ವಾಮಿ ಸೇರಿ ಅನೇಕರು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.