Categories
ರಾಜ್ಯ

ವಿಶ್ವ ದಾಖಲೆ ಬರೆದ ಚಿಕ್ಕಮಗಳೂರಿನ 1 ವರ್ಷದ ಮಗು!

ವಿಶ್ವ ದಾಖಲೆ ಬರೆದ ಚಿಕ್ಕಮಗಳೂರಿನ 1 ವರ್ಷದ ಮಗು!

– 1115 ವಸ್ತುಗಳನ್ನು ಗುರುತಿಸಿ ವಿಶ್ವ ದಾಖಲೆ ಬರೆದ ಮನಸ್ಮಿತ
– ಅತೀ ಹೆಚ್ಚು ವಸ್ತು ಗುರುತಿಸಿದ ವಿಶ್ವದ ಮೊದಲ ಮಗು

NAMMUR EXPRESS NEWS

ಚಿಕ್ಕಮಗಳೂರು: ಕೇವಲ 15 ತಿಂಗಳಿಗೆ 1115 ವಸ್ತುಗಳನ್ನು ಗುರುತಿಸಿ ನೊಬೆಲ್ ವಿಶ್ವ ದಾಖಲೆಯ ಎಲ್ಲಾ ದಾಖಲೆಗಳನ್ನು ಮುರಿದು 1115 ವಸ್ತುಗಳನ್ನು ಗುರುತಿಸಿದ ವಿಶ್ವದ ಮೊದಲ ಮಗು ಎಂಬ ಖ್ಯಾತಿಗೆ ಚಿಕ್ಕಮಗಳೂರಿನ ಮಗು ಮನಸ್ಮಿತ ಪಾತ್ರರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಂಬಿಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನ ಆರ್. ಟಿ ನಗರದಲ್ಲಿರುವ ಡಿ.ಎಮ್. ಧನಲಕ್ಷ್ಮಿಕುಮಾರಿ ಮತ್ತು ಹುಲಿಯಪ್ಪಗೌಡ ಕೆ ಅವರ ಮಗು ಮನಸ್ಮಿತ ಈ ಸಾಧನೆ ಮಾಡಿದ್ದಾಳೆ. ಮಗುವಿನ ತಾಯಿ ಡಿ. ಎಮ್. ಧನಲಕ್ಷ್ಮಿಕುಮಾರಿ ಅವರು ಗೃಹಿಣಿಯಾಗಿದ್ದು, ತಂದೆ ಹುಲಿಯಪ್ಪಗೌಡ ಕೆ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದಾರೆ.ಮನಸ್ಮಿತ ಅವರ ಸಾಧನೆಗೆ ಪೋಷಕರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

ಗುರುತಿಸಿದ್ದು ಏನೇನು…?

ಮನಸ್ಮಿತ ಅವರು 1115 ಚಿತ್ರಗಳನ್ನು ಗುರುತಿಸಿದ್ದಾರೆ, ಕನ್ನಡ ಮತ್ತು ಇಂಗ್ಲಿಷ್ ವರ್ಣಮಾಲೆಗಳು, ಕರ್ನಾಟಕದಲ್ಲಿ 8 ಜ್ಞಾನಪೀಠ ಪ್ರಶಸ್ತಿ ವಿಜೇತರು, 27 ಹಣ್ಣುಗಳು, 12 ಆಕಾರಗಳು, 32 ಕಾಡು ಪ್ರಾಣಿಗಳು, 20 ಸಾಕುಪ್ರಾಣಿಗಳು, 27 ಪಕ್ಷಿಗಳು, 27 ತರಕಾರಿಗಳು, 21 ಹೂವುಗಳು, 29 ಕಾಸ್ಕೆಟಿಕ್ಸ್, 135 ಹೌಸ್ ಹೋಲ್ಡ್ ವಸ್ತುಗಳು, 11 ಭಾರತೀಯ ಕರೆನ್ಸಿ, 23 ಆಟಿಕೆಗಳ ಹೆಸರುಗಳು, 20 ಸಮುದ್ರದಲ್ಲಿ ಸಿಗುವ ವಸ್ತುಗಳು, 11 ಹಿಂದೂ ದೇವರು, 14 ಸಸ್ಯಗಳು, 25 ಎಲೆಗಳು, 24 ಆಹಾರ ವಸ್ತುಗಳು, 22 ಸ್ಟೇಷನರಿ ವಸ್ತುಗಳು, 16 ಎಲೆಕ್ಟ್ರಾನಿಕ್ ವಸ್ತುಗಳು, 12 ಬಣ್ಣಗಳು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಂಖ್ಯೆಗಳು, 11 ಕ್ರಿಯೆಗಳು, 22 ಆಭರಣಗಳು, 19 ದೇಹದ ಭಾಗಗಳು, 30 ಸ್ವಾತಂತ್ರ್ಯ ಹೋರಾಟಗಾರರು, 24 ಭಾರತದಲ್ಲಿನ ಐತಿಹಾಸಿಕ ಸ್ಥಳಗಳು, 27 ಕರ್ನಾಟಕದಲ್ಲಿನ ಐತಿಹಾಸಿಕ ಸ್ಥಳಗಳು, 34 ಪ್ರಸಿದ್ಧ ಭಾರತೀಯ ವ್ಯಕ್ತಿಗಳು, 14 ವೃತ್ತಿಗಳು, 15 ವಾಹನಗಳು, 15 ವಿಜ್ಞಾನಿಗಳು, 4 ಋತುಗಳು, 27 ದೇಶದ ಧ್ವಜಗಳು, 11 ಉತ್ತಮ ಅಭ್ಯಾಸ, 12 ಸಸ್ಯದ ಭಾಗಗಳು, 16 ಪ್ರಯಾಣಕ್ಕೆ ಅಗತ್ಯ ವಸ್ತುಗಳು, 25 ಚಾಕೊಲೇಟ್ ಬ್ರಾಂಡ್‌ಗಳು, 25 ಮಗುವಿನ ಅಗತ್ಯ ವಸ್ತುಗಳು, 17 ಕೀಟಗಳು, 14 ಸರೀಸೃಪಗಳು, 13 ಉಭಯಚರಗಳು, 24 ಲಿವಿಂಗ್ ರೂಮ್ ವಸ್ತುಗಳು, 21 ಸಮುದ್ರ ಜೀವಿಗಳು ಒಟ್ಟಾರೆ 1115 ವಸ್ತುಗಳನ್ನು ಗುರುತಿಸಿದ್ದಾರೆ.

ಅಸಾಧಾರಣ ಗ್ರಹಣಶಕ್ತಿ ಮೇಧಾವಿ ಗೌರವ

ಮನಸ್ಮಿತ ಅವರು ಈ ಹಿಂದೆ 336 ವಿವಿಧ ವಸ್ತುಗಳು, 500 ಪದಗಳನ್ನು ಗುರುತಿಸಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಇವರನ್ನು ಅಸಾಧಾರಣ ಗ್ರಹಣಶಕ್ತಿ ಮೇಧಾವಿ ಎಂದು ತಮ್ಮ ಪುಸ್ತಕದಲ್ಲಿ ನೊಂದಾಯಿಸಿ ವಿಶ್ವ ದಾಖಲೆ ಗೌರವ ಸಮಾರಂಭದಲ್ಲಿ ಪ್ರಶಸ್ತಿ ಗೌರವಿಸಲಾಗಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.