Categories
ರಾಜ್ಯ

ಮುಂದಿನ ಯುಗಾದಿಗೆ ಮತ್ತೊಂದು ದುರ್ಘಟನೆ?!

ಮುಂದಿನ ಯುಗಾದಿಗೆ ಮತ್ತೊಂದು ದುರ್ಘಟನೆ?!
– ದೇಶದ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕ : ಕೋಡಿಮಠ ಶ್ರೀ
– ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ

NAMMUR EXPRESS NEWS
ಮುಂದಿನ ವರ್ಷದ ಯುಗಾದಿ ವೇಳೆಗೆ ದೇಶದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸುತ್ತದೆ ಎಂದು ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಭವಿಷ್ಯ ನುಡಿದಿದ್ದಾರೆ. ರಾಷ್ಟ್ರದ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕವಿದ್ದು, ಆಳುವವರು ಎಚ್ಚರ ವಹಿಸಿದರೆ ಅದನ್ನು ತಪ್ಪಿಸಬಹುದು ಎಂದು ಸ್ವಾಮೀಜಿ ಹೇಳಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿಮಠದಲ್ಲಿ ಮಾತನಾಡಿ, “ದೇಶದಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತದೆ, ಜಗತ್ತಿನ ಸಾಮ್ರಾಟರೆಲ್ಲಾ ತಲ್ಲಣವಾಗುವ ಕಾಲ ಬರುತ್ತದೆ. ದೊಡ್ಡ ಪಟ್ಟಣಗಳಿಗೆ ಅಪಾಯದ ಸೂಚನೆಯಿದ್ದು, ದೊಡ್ಡ ದೊಡ್ಡ ಕಟ್ಟಡಗಳು ಕುಸಿಯುವ ಸಾಧ್ಯತೆಯಿದೆ. ಅಲ್ಲದೇ, 2024ರ ಯುಗಾದಿಯೊಳಗೆ ಮೂರು ಮಂದಿ ಮಹಾನ್ ವ್ಯಕ್ತಿಗಳಿಗೆ ಅಪಾಯವಿದೆ. ನಮ್ಮನ್ನು ಆಳುವವರು ಎಚ್ಚರ ವಹಿಸಿದರೆ ಈ ದುರ್ಘಟನೆ ತಪ್ಪಿಸಬಹುದು. ಕಾಲ ಬಂದಾಗ ನಾನೇ ಎಲ್ಲವನ್ನು ವಿವರಿಸುತ್ತೇನೆ. ಜೀವನ ಆಡಂಬರ ರಹಿತವಾಗಿರಬೇಕು. ಆಧ್ಯಾತ್ಮಿಕವಾದ ಚಿಂತನೆ ನಮ್ಮಲ್ಲಿರಬೇಕು” ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಇನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಆದ್ರೆ, ಕೆಲವರು ಬಹುಬೇಗ ಹಣ ಮಾಡುವ ಆಸೆ ಹೊಂದಿದ್ದಾರೆ. ಅದೇ ಅವರಿಗೆ ಆಪತ್ತು ತಂದುಕೊಡುತ್ತದೆ. ಆಘಾತಗಳು ಸಂಭವಿಸಲಿದೆ, ಆದ್ರೆ ಯಾವುದೇ ತೊಂದರೆಯಿಲ್ಲ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುವ ಸಂಭವವಿದೆ. ಹೀಗಾಗಿ, ಸರ್ಕಾರ ಜನರ ಹಿತಕ್ಕಾಗಿ ಬದಲಾಗಬೇಕಿದೆ’ ಎಂದವರು ಹೇಳಿದರು. ಮುಂದಿನ ಪ್ರಧಾನಿ ಯಾರಾಗಬೇಕೆಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ಇಂತಹ ಪ್ರಶ್ನೆಗೆ ಉತ್ತರ ನೀಡುವುದು ಸಾಮಾನ್ಯವಾದ ಸಂಗತಿಯಲ್ಲ, ಅದನ್ನು ಸುಮ್ಮನೆ ಹೇಳುವುದಕ್ಕಾಗುವುದಿಲ್ಲ. ಅದರ ಬಗ್ಗೆ ಜಪ- ತಪಗಳನ್ನು ಮಾಡಬೇಕು. ಆಧ್ಯಾತ್ಮಚಿಂತನೆ ಮಾಡಬೇಕಿದೆ. ಪಂಚಾಗ್ನಿ, ಜಲಾಗ್ನಿ, ವಾಯಾಗ್ನಿ ಸೇರಿದಂತೆ 4 ಕಡೆ ಬೆಂಕಿಯನ್ನಿಟ್ಟು, ತಲೆಯ ಮೇಲೆ ಬೆಂಕಿಕುಂಡವಿಟ್ಟು ಧ್ಯಾನ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.