ಟಾಪ್ 5 ನ್ಯೂಸ್ ಕರ್ನಾಟಕ
ಬಳ್ಳಾರಿ: ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ ಇಬ್ಬರು ಸಾವು..!!
– ಬೀದಿ ನಾಯಿಗಳ ದಾಳಿಗೆ 20 ಮೇಕೆ, ಕುರಿಗಳು ಬಲಿ.!
– ದಾವಣಗೆರೆ : ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ..!!
– ಚಾಮರಾಜನಗರ: ರಿಕ್ಷಾದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ..!
– ಗದಗ : 22 ವರ್ಷದ ಯುವಕನನ್ನು ಹೋಟೆಲ್‌ನಲ್ಲಿ ಕೊಚ್ಚಿ ಕೊಲೆ..!!
NAMMUR EXPRESS NEWS
ಬಳ್ಳಾರಿ: ಇಲ್ಲಿ ಸಮೀಪದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮೃತರನ್ನು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಚೌಡಸಂದ್ರ ಗ್ರಾಮದ ನಿವಾಸಿ ಬಾಲಾನಾಯಕ್ (46) ಮತ್ತು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶ್ವೇತಾ (42) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಸ್ಕಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬೈರಾಪುರ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಬಳ್ಳಾರಿ ಟ್ರಾಮಾ ಕೇರ್ ಸೆಂಟರ್ ಮತ್ತು ಸಿರುಗುಪ್ಪ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
– ಬೀದಿ ನಾಯಿಗಳ ದಾಳಿಗೆ 20 ಮೇಕೆ, ಕುರಿಗಳು ಬಲಿ.!
ಹೂವಿನ ಹಡಗಲಿ: ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಕುರಿಹಟ್ಟಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ 20 ಕುರಿಗಳನ್ನು ಬಲಿ ಪಡೆದುಕೊಂಡಿವೆ. ಗ್ರಾಮದ ಜಿ.ದೊಡ್ಡಬಸಪ್ಪ ತಮ್ಮ ಹೊಲದಲ್ಲಿ ಹಾಕಿದ್ದ ಕುರಿ ಹಟ್ಟಿಗೆ ಕೆಳಭಾಗದಿಂದ ನುಸುಳಿ ದಾಳಿ ನಡೆಸಿರುವ ನಾಯಿಗಳು ಮೇಕೆ ಹಾಗೂ ಕುರಿ ಸೇರಿದಂತೆ ಇಪ್ಪತ್ತು ಕುರಿಗಳನ್ನು ತಿಂದು ಹಾಕಿವೆ.
– ದಾವಣಗೆರೆ : ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ..!!
ದಾವಣಗೆರೆ : ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದಿದ್ದ ಮಹಿಳೆ ಹಾಗೂ ಆಕೆಯ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಗೀತಾ (31), ಮಂಜುನಾಥ್ (32) ಬಂಧಿತ ಆರೋಪಿಗಳು. ಹರಿಹರ ತಾಲೂಕಿನ ಹಳೇ ಹರ್ಲಾಪುರ ಗ್ರಾಮದಲ್ಲಿ ಅರುಣ್ ಕುಮಾರ್ ಎಂಬಾತನ ಕೊಲೆಯಾಗಿತ್ತು. ಇತನ ತಂದೆ ಗುರುಪಾದಪ್ಪ ಇದು ಆತ್ಮಹತ್ಯೆಯಲ್ಲ ಕೊಲೆ. ತಮ್ಮ ಸೊಸೆ ಸಂಗೀತ ಮತ್ತು ಇತರರು ಸೇರಿ ತಮ್ಮ ಪುತ್ರನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
– ಚಾಮರಾಜನಗರ: ರಿಕ್ಷಾದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ..!
ಚಾಮರಾಜನಗರ : ತುಂಬು ಗರ್ಭಿಣಿಯೋರ್ವಳು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆತರುವಾಗ ಮಾರ್ಗದ ಮಧ್ಯದಲ್ಲಿ ಅವರು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಕಾಂಡನಕೊಲ್ಲಿ ಗ್ರಾಮದ ನಿವಾಸಿ ದಾಸ ಎಂಬವರ ಪತ್ನಿ ಲಕ್ಷ್ಮಿ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಬೆಳಗ್ಗೆ ಸಿ.ಸಿ.ಸುನಿಲ್ ಎಂಬುವರ ಆಟೋ ರಿಕ್ಷಾದಲ್ಲಿ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗುತಿತ್ತು. ಮಾರ್ಗ ಮಧ್ಯೆ ಹಟ್ಟಿಹೊಳೆ ಬಳಿ ಹೆರಿಗೆ ನೋವು ಕಾಣಿಸಿಕೊಂಡು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
– ಗದಗ : 22 ವರ್ಷದ ಯುವಕನನ್ನು ಹೋಟೆಲ್‌ನಲ್ಲಿ ಕೊಚ್ಚಿ ಕೊಲೆ..!!
ಗದಗ : ಈಗ ಶ್ರಾವಣ ಮಾಸ. ಮನೆಯಲ್ಲಿ ಮಾಂಸಹಾರ ಸೇವನೆ ಮಾಡಬಾರದು ಅಂತಾ ಆ ಯುವಕ ಆಚೆ ಹೋಟೆಲ್ಗೆ ಹೋಗಿದ್ದ. ಬಿರಿಯಾನಿ ಆರ್ಡರ್ ಮಾಡಿ ಊಟ ಮಾಡುತ್ತಿದ್ದ. ಅಷ್ಟರಲ್ಲಿ ಎಂಟ್ರಿಕೊಟ್ಟ ಹಂತಕರು ರಕ್ತ ಹರಿಸಿದ್ದಾರೆ. ರಕ್ತದಲ್ಲಿ ಮಡುವಿನಲ್ಲಿ ಬಿದ್ದು ವಿಲವಿಲ ಅಂತ ಒದ್ದಾಡುತ್ತಿದ್ದರೂ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಭೀಕರ ಘಟನೆಗೆ ಇಡೀ ನರಗುಂದ ಪಟ್ಟಣವೇ ಬೆಚ್ಚಿ ಬಿದ್ದಿದೆ. ಪಟ್ಟಣದ ತಾಜ್ ಬಿರಿಯಾನಿ ಹೋಟೆಲ್ಗೆ ನುಗ್ಗಿದ್ದ ಮೂವರು ಬಸವರಾಜ್ ಮಮ್ಮಟಗೇರಿ ಎಂಬ 22 ವರ್ಷದ ಯುವಕನನ್ನ ಕೊಚ್ಚಿ ಕೊಲೆ ಮಾಡಿದ್ದಾರೆ. ಬಿರಿಯಾನಿ ಹೋಟೆಲ್ಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು ಬಸವರಾಜ್ ಕಣ್ಣಿಗೆ ಖಾರದಕ ಪುಡಿ ಎರಚಿದ್ದಾರೆ. ಉರಿಯಿಂದ ಬಿದ್ದು ಒದ್ದಾಡ್ತಿದ್ದವನಿಗೆ ಸುತ್ತಿಗೆಯಿಂದ ಹೊಡೆದು, ಕೊಯ್ತಾದಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.