Categories
ರಾಜ್ಯ

ಎಸ್.ಸುಧಾಕರ್ ಶೆಟ್ಟಿ ಒಡೆತನದ ಜ್ಞಾನಸರೋವರ ಶಾಲೆಗೆ ಬಾಂಬ್ ಬೆದರಿಕೆ ಕರೆ

ಎಸ್.ಸುಧಾಕರ್ ಶೆಟ್ಟಿ ಒಡೆತನದ ಜ್ಞಾನಸರೋವರ ಶಾಲೆಗೆ ಬಾಂಬ್ ಬೆದರಿಕೆ ಕರೆ

* ಅತ್ಯಾಚಾರ ಪ್ರಕರಣ ಸಂಬಂಧ ಬಾಂಬ್ ಬೆದರಿಕೆ ಕರೆ
* ಎಸ್‌ಪಿಗೆ ದೂರು,ತಪಾಸಣೆ,ಯಾವುದೇ ಸ್ಪೋಟಕ ಸಿಕ್ಕಿಲ್ಲ

NAMMMUR EXPRESS NEWS
ಮೈಸೂರು: 2023ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಭುಗತಗಳ್ಳಿಯಲ್ಲಿರುವ ಎಸ್.ಸುಧಾಕರ್ ಶೆಟ್ಟಿ ಒಡೆತನದ ಜ್ಞಾನಸರೋವರ ಇಂಟರ್​​ನ್ಯಾಷನಲ್ ವಸತಿ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ. ಅತ್ಯಾಚಾರ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ. ಬಾಂಬ್ ಇಟ್ಟು ಶಾಲೆ ಸ್ಫೋಟಿಸುತ್ತೇವೆ. ಮಕ್ಕಳಿಗೆ ಹಾನಿ ಮಾಡುವ ಉದ್ದೇಶದಿಂದ ವಸತಿ ಶಾಲೆ ಸ್ಫೋಟಿಸುತ್ತೇವೆ ಎಂದು ಹೆಸರು, ಫೋನ್ ನಂಬರ್ ಉಲ್ಲೇಖಿಸಿ ಇ-ಮೇಲ್ ಮೂಲಕ ಬಾಂಬ್​ ಬೆದರಿಕೆ ಹಾಕಲಾಗಿದೆ. ಇದರಿಂದ ಆತಂಕಗೊಂಡ ಶಾಲೆ ಆಡಳಿತ ಮಂಡಳಿ ಮೂಡಲೇ ಮೈಸೂರು ಎಸ್​​ಪಿಗೆ ಲಿಖಿತ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಭುಗತಗಳ್ಳಿಯಲ್ಲಿರುವ ಜ್ಞಾನಸರೋವರ ಇಂಟರ್​​ನ್ಯಾಷನಲ್ ವಸತಿ ಶಾಲೆಗೆ ಮೈಸೂರು ಗ್ರಾಮಾಂತರ ಪೊಲೀಸರು, ಸ್ಪೋಟಕ ಪತ್ತೆ ದಳ ಶ್ವಾನ ದಳ‌ ಸೇರಿ ವಿವಿಧ ತಜ್ಞರಿಂದ ಪರಿಶೀಲನೆ ಮಾಡುತ್ತಿದ್ದಾರೆ. ಎಸ್ ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ನಡೆದಿದೆ.
ಕರ್ನಾಟಕದಲ್ಲಿ ಇತ್ತೀಚೆಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣಗಳು ಹೆಚ್ಚಾಗತೊಡಗಿವೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದವು. ಮೊನ್ನೇ ಅಷ್ಟೇ ಹಾಸನದ ಖಾಸಗಿ ಶಾಲೆಗಳಿಗೆ ಹಾಗೂ ಮೈಸೂರು, ಉಡುಪಿಯ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಈ ಬೆದರಿಕೆಗಳಲ್ಲಿ ಯಾವುದೇ ಕಾರಣ ತಿಳಿಸಿಲ್ಲ. ಆದ್ರೆ, ಮೈಸೂರಿನ ಜ್ಞಾನಸರೋವರ ಇಂಟರ್​​ನ್ಯಾಷನಲ್ ವಸತಿ ಶಾಲೆಗೆ ಹಾಕಿರುವ ಬಾಂಬ್ ಬೆದರಿಕೆಗೆ ಅತ್ಯಾಚಾರ ಪ್ರಕರಣ ಕಾರಣ ನೀಡಲಾಗಿದೆ. ಅದು 2023ರಲ್ಲಿ ಹೈದರಾಬಾದ್​ ನಲ್ಲಿ ಅತ್ಯಾಚಾರ ಕೇಸ್ ಬಗ್ಗೆ ಕ್ರಮ ಕೈಗೊಳ್ಳುವಂತೆ ಇ ಮೇಲ್​ ನಲ್ಲಿ ಉಲ್ಲೇಖಿಸಲಾಗಿದೆ.
ಮೈಸೂರಿನ ಜ್ಞಾನಸರೋವರ ಇಂಟರ್​​ನ್ಯಾಷನಲ್ ವಸತಿ ಶಾಲೆಗೆ ಹಾಕಿರುವ ಬಾಂಬ್ ಬೆದರಿಕೆ ವಿಚಿತ್ರವಾಗಿದೆ. ಇಮೇಲ್​ ನಲ್ಲಿ 2023ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ್ದು,ಅಚ್ಚರಿಕೆ ಕಾರಣವಾಗಿದೆ. ಹೈದರಾಬಾದ್ ಅತ್ಯಾಚಾರ ಕೇಸಿಗೂ ಈ ಶಾಲೆಗೂ ಏನು ಸಂಬಂಧ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದು, ಈ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

* ಯಾವುದೇ ಸ್ಪೋಟಕ ಪತ್ತೆಯಾಗಿಲ್ಲ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ್ ಶೆಟ್ಟಿ, ಪರಿಶೀಲನೆ ನಂತರ ಯಾವುದೇ ಸ್ಪೋಟಕ ಪತ್ತೆಯಾಗಿಲ್ಲ. ಇದು ಒಂದು ಹುಸಿ ಬಾಂಬ್ ಕರೆ. ಇ- ಮೇಲ್ ಕಳುಹಿಸಿದವನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಪೋಷಕರು ಆತಂಕಪಡದಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.