Categories
ಚಿಕ್ಕಮಗಳೂರು ರಾಜ್ಯ

ಸಿನಿಮಾ ಕಥೆಗಿಂತ ಚೈತ್ರಾ ಕುಂದಾಪುರ ವಂಚನೆ ಕಥೆ ಸೂಪರ್!

ಸಿನಿಮಾ ಕಥೆಗಿಂತ ಚೈತ್ರಾ ಕುಂದಾಪುರ ವಂಚನೆ ಕಥೆ ಸೂಪರ್!
– ಬಿಜೆಪಿ ಹೈಕಮಾಂಡ್, ಆರ್. ಎಸ್. ಎಸ್ ಪ್ರಮುಖರು ಎಲ್ಲರೂ ಇಲ್ಲಿ ಬಾಡಿಗೆ ಕಲಾವಿದರು!
-10 ತಿಂಗಳ ಹಿಂದೆಯೇ ಕೋಟಿ ದೋಚುವ ಪ್ಲಾನ್! ಸಲೂನ್ ಮಾಲೀಕನಿಂದ ಸ್ಫೋಟಕ ಮಾಹಿತಿ

NAMMUR EXPRESS NEWS
ಚಿಕ್ಕಮಗಳೂರು: ಯಾವುದೇ ತ್ರಿಲ್ಲರ್ ಸಿನಿಮಾ ಕಥೆಗಿಂತ ಚೈತ್ರಾ ಕುಂದಾಪುರ ವಂಚನೆ ಕಥೆ ಸೂಪರ್ ಆಗಿದೆ.
ಬಿಜೆಪಿ ಹೈಕಮಾಂಡ್, ಆರ್. ಎಸ್. ಎಸ್ ಪ್ರಮುಖರು, ಸ್ವಾಮೀಜಿ ಎಲ್ಲರೂ ಇಲ್ಲಿ ಬಾಡಿಗೆ ಕಲಾವಿದರು!.
10 ತಿಂಗಳ ಹಿಂದೆಯೇ ಕೋಟಿ ದೋಚುವ ಪ್ಲಾನ್ ಮಾಡಲಾಗಿತ್ತು ಎಂದು ಸಲೂನ್ ಮಾಲೀಕನಿಂದ ಸ್ಫೋಟಕ ಮಾಹಿತಿ ಲಭ್ಯ ಆಗಿದೆ. ಸಲೂನ್‌ನಲ್ಲಿ ಕೆಲಸ ಮಾಡುವವನು, ಕಬಾಬ್ ಅಂಗಡಿಯವನನ್ನು ತೋರಿಸಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಸುಮಾರು 5 ಕೋಟಿ ವಂಚನೆ ಮಾಡಿದ್ದಾರೆ. ಇದೀಗ ವಿಚಾರಣೆಯಲ್ಲಿದ್ದಾರೆ.

ಕಡೂರಲ್ಲೇ ಎಲ್ಲಾ ಪ್ಲಾನ್: ಕಟ್ಟಿಂಗ್ ಶಾಪಲ್ಲೆ ವೇಷ!

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಟ್ಟಣದ ಲಕ್ಷ್ಮೀ ಆಸ್ಪತ್ರೆ ಮುಂಭಾಗದ ಸಲೂನ್ ಶಾಪ್‌ನಲ್ಲಿ ವೇಷಭೂಷಣ ಸಿದ್ದಪಡಿಸಿ ನಕಲಿ ಆರ್. ಎಸ್. ಎಸ್ ಪ್ರಚಾರಕ ವಿಶ್ವನಾಥ್ ಎಂದು ರಮೇಶ್ ಅವರಿಗೆ ವೇಷ ಹಾಕಲಾಗಿದೆ. ಚನ್ನಾನಾಯ್ಕಗೆ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ವೇಷ ತೊಡಿಸಲಾಗಿದೆ. ಪ್ರಕರಣ ಕುರಿತಾಗಿ ಕಡೂರಿನ ಸಲೂನ್ ಮಾಲೀಕ ರಾಮು ಹೇಳಿಕೆ ನೀಡಿದ್ದು, ನಮ್ಮ ಸಲೂನ್‌ಗೆ ಧನರಾಜ್ ರೆಗ್ಯುಲರ್ ಕಸ್ಟಮರ್, 8.30ರ ಸುಮಾರಿಗೆ ನಮ್ಮ ಸಲೂನ್‌ಗೆ ಬಂದಿದ್ದರು. ಒಂದು ಫೋಟೋ ತೋರಿಸಿ ಇದೆ ತರಹ ಕಟಿಂಗ್, ಕಲರ್ ಮಾಡುವಂತೆ ಹೇಳಿದರು. ಫೋಟೋದಲ್ಲಿ ಇರುವಂತೆ ನಾನೇ ಕಟಿಂಗ್ ಮಾಡಿದ್ದು, ಬೆಳಗ್ಗೆ ಅರ್ಜೆಂಟ್ ಮೀಟಿಂಗ್ ಇದೆ ಎಂದು ಕಟ್ಟಿಂಗ್ ಮಾಡಿಸಿದ್ದರು. ಅವರು ಯಾರನ್ನೋ ಕರೆದುಕೊಂಡು ಬಂದು ಅವರಿಗೂ ಕಟಿಂಗ್ ಮಾಡಿಸಿದರು.

10 ತಿಂಗಳ ಹಿಂದೆಯೇ ಹಣ ದೋಚುವ ಪ್ಲಾನ್

10 ತಿಂಗಳ ಹಿಂದೆಯೇ ಕೋಟಿ ಕೋಟಿ ಹಣ ದೋಚಲು ಗ್ಯಾಂಗ್ ಸಂಚು ರೂಪಿಸಿದೆ. ಸಂಘ ಪರಿವಾರದ ಪ್ರಮುಖರ ಜೊತೆ ಸಂಪರ್ಕವಿದೆ ಎಂದು ಚೈತ್ರಾ ತೋರಿಸಿಕೊಂಡಿದ್ದಾರೆ. ಬೈಂದೂರು ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಚಿಕ್ಕಮಗಳೂರಿನ ಸರ್ಕಾರಿ ಅತಿಥಿಗೃಹದಲ್ಲಿ ಗಗನ್ ಕಡೂರು ಪರಿಚಯಿಸಿದ್ದರು. ಪ್ರಧಾನಿ, ಗೃಹ ಸಚಿವಾಲಯದ ಜೊತೆ ನಿಕಟ ಸಂಬಂಧವಿದೆ ಎಂದು ಹೇಳಿದ್ದರು. ಸಾಕಷ್ಟು ಪೂರ್ವಸಿದ್ಧತೆ ನಡೆಸಿಯೇ ಕಣಕ್ಕಿಳಿದಿದ್ದ ಚೈತ್ರಾ ಕುಂದಾಪುರ & ಗ್ಯಾಂಗ್, ಸಲೂನ್‌ನಲ್ಲಿ ಕೆಲಸ ಮಾಡುವವನು, ಕಬಾಬ್ ಅಂಗಡಿಯವನನ್ನು ತೋರಿಸಿ ವಂಚನೆ ಮಾಡಿದ್ದಾರೆ. ಸಂಘದ ವಿಶ್ವನಾಥ್ ಜೀ ಎನ್ನುವ ಹೆಸರನ್ನು ಪದೇಪದೆ ಹೇಳುತ್ತಿದ್ದ ಚೈತ್ರಾ ಕುಂದಾಪುರ, ಉದ್ಯಮಿ ಗೋವಿಂದಬಾಬು ಪೂಜಾರಿಯನ್ನು ಮರುಳು ಮಾಡಿದ್ದಾರೆ. ಉದ್ಯಮಿಯನ್ನು ಬಲೆಗೆ ಹಾಕಿಕೊಳ್ಳಲು ಸಹಾಯಕ ಪ್ರಸಾದ್ ಎನ್ನುವವರನ್ನು ಚೈತ್ರಾ ನೆರವು ಪಡೆದಿದ್ದಾರೆ. ಹಣ ಕೈಸೇರಿದ ನಂತರ ವಿಶ್ವನಾಥ್ ಜೀ ಮೃತಪಟ್ಟರು ಎಂದು ಕಥೆ ಕಟ್ಟಿ ನಂಬಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.