Categories
ರಾಜ್ಯ ರಾಷ್ಟ್ರೀಯ ವಾರ್ತೆ

ರೀಲ್ಸ್‌ ಮಾಡಿದವರಿಗೆ ಮೋದಿ ಭೇಟಿ ಅವಕಾಶ!

ರೀಲ್ಸ್‌ ಮಾಡಿದವರಿಗೆ ಮೋದಿ ಭೇಟಿ ಅವಕಾಶ!
– ಬಿಜೆಪಿಯ ಹೊಸ ಕ್ಯಾಂಪೇನ್‌: ಯಾರು ಭಾಗಿಯಾಗಬಹುದು?
– ಕೇಂದ್ರದ ಯೋಜನೆ, ಅಭಿವೃದ್ಧಿ ಬಗ್ಗೆ ರೀಲ್ಸ್
– ಒಂದು ತಿಂಗಳ ಕಾಲ ನಡೆಯುವ ಸ್ಪರ್ಧೆ

NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ ದಿನಾಂಕ ಘೋಷಣೆಯಾಗಲಿದೆ. ಇದರ ನಡುವೆ ಎಲ್ಲಾ ರಾಜಕೀಯ ಪಕ್ಷಗಳೂ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿವೆ. ಬಿಜೆಪಿ ಈಗಾಗಲೇ ತಮ್ಮ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದ್ದು, 195 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ ಬಿಜೆಪಿ ವಿನೂತನ ಪ್ರಚಾರಕ್ಕೆ ಮುಂದಾಗಿದೆ. ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಂದಲೇ ಹೇಳಿಸಿ, ಆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಸೋಷಿಯಲ್‌ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆ ಏರ್ಪಡಿಸಿದೆ.

ರೀಲ್ಸ್ ಮಾಡಿ, ಮೋದಿ ಭೇಟಿಯಾಗಿ

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ತುಂಬಾ ಪ್ರಭಾವಿ ಮಾಧ್ಯಮವಾಗಿದೆ. ಸೋಷಿಯಲ್ ಮೀಡಿಯಾ ಮೂಲಕ ಬಹುಬೇಗ ಪ್ರಚಾರ ನಡೆಯಬಹುದಾಗಿದೆ. ಇದನ್ನು ಅರಿತ ಬಿಜೆಪಿ ರೀಲ್ಸ್ ಕಂಪೀಟಿಷನ್ ಶುರು ಮಾಡಿದೆ. ಹೊಸ ಮತದಾರರು ಹಾಗೂ ಯುವ ಸಮುದಾಯವನ್ನು ಬಿಜೆಪಿಯತ್ತ ಸೆಳೆಯೋದಕ್ಕೆ ಬಿಜೆಪಿ ಈ ಪ್ಲಾನ್ ಮಾಡಿದೆ. ನಮೋ ಯುವ ಭಾರತ ಫೆಲೋಶಿಫ್‌ ಕಾರ್ಯಕ್ರಮದಡಿ ಈ ರೀಲ್ಸ್ ಕಾಂಪಿಟಿಷನ್ ಏರ್ಪಡಿಸಲಾಗಿದ್ದು, ಹೆಚ್ಚು ಲೈಕ್ಸ್ ಪಡೆಯುವ 10 ರೀಲ್ಸ್ ಮಾಡಿದವರಿಗೆ ಮೋದಿ ಭೇಟಿ ಮಾಡಿಸುವ ಅವಕಾಶವನ್ನು ಒದಗಿಸಿಕೊಡಲಾಗುತ್ತಿದೆ.

ಕೇಂದ್ರದ ಯೋಜನೆ, ಅಭಿವೃದ್ಧಿ ಬಗ್ಗೆ ರೀಲ್ಸ್ ಮಾಡಬೇಕು

ಈ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು, ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ರೀಲ್ಸ್ ಮಾಡಬೇಕು. ಬಿಜೆಪಿಗೆ ಯಾಕೆ ಮತ ನೀಡಬೇಕು ಎಂಬುದರ ಕುರಿತು ಸರಿಯಾದ ಮಾಹಿತಿ ನೀಡಬೇಕು ಹಾಗೆ ಮಾಡಿದ ರೀಲ್ಸ್ ಅನ್ನು ಬಿಜೆಪಿ ಯುವ ಮೋರ್ಚಾ ತನ್ನ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಳ್ಳಲಿದೆ. ಅಷ್ಟೇ ಅಲ್ಲದೇ ಅತ್ಯುತ್ತಮವಾಗಿರುವ ಮೂರು ರೀಲ್‌ಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಇತರ ನಾಯಕರು ತಮ್ಮ ಸೋಷಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಳ್ಳಲಿದ್ದಾರೆ.

ಒಂದು ತಿಂಗಳ ಕಾಲ ನಡೆಯುವ ಸ್ಪರ್ಧೆ

ಒಂದು ತಿಂಗಳ ಕಾಲ ಈ ಸ್ಪರ್ಧೆ ನಡೆಯಲಿದೆ. 90 ಸೆಕೆಂಡ್‌ಗಳ ರೀಲ್ಸ್ ಮಾಡಬೇಕಾಗಿದ್ದು, ಮಹಿಳೆ, ಯುವಜನತೆ, ಅನ್ನದಾತ ಮತ್ತು ಬಡವ ಎಂಬ 4 ವಿಭಾಗಗಳಲ್ಲಿ ಕೇಂದ್ರ ಸರ್ಕಾರದ ಕೊಡುಗೆ ಬಗ್ಗೆ ರೀಲ್ಸ್ ಮಾಡಬಹುದು. ಬಿಜೆಪಿ ಯುವ ಮೋರ್ಚಾ ಈ ಕಾಂಪಿಟಿಷನ್ ಇಟ್ಟಿದ್ದು, ಮೋದಿ ಕರ್ನಾಟಕಕ್ಕೆ ಬಂದಾಗ ಅತ್ಯುತ್ತಮ ರೀಲ್ಸ್ ಮಾಡಿದ ಹತ್ತು ಮಂದಿಯನ್ನು ಮೋದಿ ಭೇಟಿ ಮಾಡಿಸುವುದಾಗಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.