Categories
ರಾಜ್ಯ

ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ?

ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ?
– ದಿನಾಂಕ ಘೋಷಿಸಲು ಸಿದ್ಧತೆ: ಚುನಾವಣಾ ಆಯುಕ್ತ
– ಇಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಚುನಾವಣೆಗೆ ಆಯೋಗ ಸಿದ್ಧತೆ

NAMMUR EXPRESS NEWS
ಬೆಳಗಾವಿ: ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ದಿನಾಂಕ ಘೋಷಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದ್ದಾರೆ. ಕ್ಷೇತ್ರ ಪುನರ್‌ವಿಂಗಡಣೆ ಮಾಡಿದ ಹಿನ್ನೆಲೆಯಲ್ಲಿ ಜಿಪಂ, ತಾಪಂ ಚುನಾವಣೆ ವಿಳಂಬವಾಗಿದೆ. ಯಾರಿಗೂ ಅನ್ಯಾಯ ವಾಗದ ಹಾಗೆ ಮೀಸಲಾತಿಪ್ರಕಟವಾದ ಬಳಿಕ ಜಿಪಂ, ತಾಪಂ ಚುನಾವಣೆನಡೆಯಲಿದೆ. ಶೀಘ್ರದಲ್ಲೇ ಮೀಸಲಾತಿ ಪ್ರಕಟವಾ ಗಲಿದೆ. ಮೀಸಲಾತಿ ಪಟ್ಟಿ ಕೈ ಸೇರುತ್ತಿದ್ದಂತೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲಿದ್ದು, ಏಪ್ರಿಲ್, ಮೇತಿಂಗಳಲ್ಲಿ ಚುನಾವಣೆನಿಗದಿಮಾಡುತ್ತೇವೆ. ಈನಿಟ್ಟಿನಲ್ಲಿಮುಂಜಾಗ್ರತೆಯಾಗಿ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದರು. ಇವಿಎಂಮೇಲೆಮೇಲಿಂದಮೇಲೆ ಆರೋಪಕೇಳಿ ಬರುತ್ತಿರುವವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇವಿಎಂ ಮೇಲೆ ಗಂಭೀರ ಆರೋಪ ಇದೆ. ಇದು ಕೂಡ ತಿಳಿಯಾಗಬೇಕು. ಜಿಪಂ, ತಾಪಂ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ಬಳಸಲು ಪ್ರಯತ್ನ ಮಾಡುತ್ತೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಸಂಬಂಧಪಟ್ಟ ರಾಜಕೀಯ ಪಕ್ಷಗಳ ಜೊತೆಗೆ ಚರ್ಚೆ ಮಾಡುತ್ತೇನೆ. ಚರ್ಚೆ ಬಳಿಕ ಬ್ಯಾಲೆಟ್ ಪೇಪರ್‌ಬಳಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.