ಶೃಂಗೇರಿಗೆ ರೈಲ್ವೆ ಸಂಪರ್ಕಕ್ಕೆ ಬೇಡಿಕೆ ಇಟ್ಟ ಹೆಚ್.ಡಿ.ಡಿ
* ಬಾಂಬೆ – ಚೆನ್ನೈ ರೈಲು ಶೃಂಗೇರಿ ಮಾರ್ಗವಾಗಿ ಸಂಚರಿಸಲಿ
* ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಪ್ರಧಾನಿ
NAMMUR EXPRESS NEWS
ದೆಹಲಿ: ಮಲೆನಾಡಿನ ಜಗತ್ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣ ಶೃಂಗೇರಿಗೆ ರೈಲ್ವೇ ಸಂಪರ್ಕ ಕಲ್ಪಿಸುವಂತೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಧ್ವನಿ ಎತ್ತಿದ್ದಾರೆ.
ರಾಜ್ಯಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಪ್ರಧಾನಿ ” ಬಾಂಬೆ ಟು ಚೆನ್ನೈ ರೈಲ್ವೇ ಸಂಪರ್ಕವನ್ನು ಶೃಂಗೇರಿ ಮೂಲಕ ಸಂಪರ್ಕಿಸುವಂತೆ ಮಾಡುವುದು. ಈಗಾಗಲೇ ಬೆಂಗಳೂರಿನಿಂದ ಚಿಕ್ಕಮಗಳೂರಿನವರೆಗೆ ರೈಲ್ವೇ ಸಂಪರ್ಕವಿದ್ದು ಅಲ್ಲಿಂದ ಶಿವಮೊಗ್ಗ – ದಾವಣಗೆರೆಗೆ ಸಂಪರ್ಕ ಕಲ್ಪಿಸಿದರೆ ದಾವಣಗೆರೆಯಿಂದ ಮುಂಬೈಗೆ ಸಂಪರ್ಕವಿದೆ, ಈ ಮಾರ್ಗವನ್ನು ನಿರ್ಮಿಸಿದ್ದೇ ಆದರೆ ಶೃಂಗೇರಿಗೆ ರೈಲ್ವೇ ಸಂಪರ್ಕ ನೀಡಿದಂತಾಗುತ್ತದೆ ಇದರಿಂದ ದೇಶದ ಎಲ್ಲಾ ರಾಜ್ಯಗಳಿಂದ ಪವಿತ್ರ ಕ್ಷೇತ್ರ ಶೃಂಗೇರಿಗೆ ಆಗಮಿಸುವ ಯಾತ್ರಿಗಳು,ಪ್ರವಾಸಿಗರಿಗೆ ಅನುಕೂಲವಾಗಲಿದೆ.ಆದ್ದರಿಂದ ಇಲಾಖೆಯ ಅಧಿಕಾರಿಗಳಿಂದ ಈ ಮಾರ್ಗದ ಸರ್ವೇ ನಡೆಸಿ ರೈಲ್ವೇ ಸಂಪರ್ಕ ಕಲ್ಪಿಸುವ ಬಗ್ಗೆ ಗಮನಹರಿಸಿ” ಎಂದು ತಮ್ಮ ಬೇಡಿಕೆ ಇಟ್ಟಿದ್ದಾರೆ.
ಈ ಮೂಲಕ ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣ ಶೃಂಗೇರಿಗೆ ರೈಲ್ವೇ ಸಂಪರ್ಕ ಸಿಗುವ ಆಸೆ ಚಿಗುರೊಡೆದಿದೆ.
