ರಾಜ್ಯದಲ್ಲಿ ಡಿಸೆಂಬರ್ ವರೆಗೆ ಹಿಂಗಾರು ಮಳೆ ಅಬ್ಬರ!
– ಇನ್ನು 2 ತಿಂಗಳು ಮಳೆ ಬಂದರೆ ದೇವರೇ ಗತಿ
– ರೈತರ ಬದುಕು ಮುರಾಬಟ್ಟೆ: ಏನಿದು ವರದಿ?
NAMMUR EXPRESS NEWS
ಬೆಂಗಳೂರು: ಈವರ್ಷ ಮುಂಗಾರು ಮಳೆ ಅಬ್ಬರ ಜೋರಾಗಿ ಈಗ ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಕ್ತಾಯದ ಹಂತದಲ್ಲಿದೆ ಎನ್ನುವ ಸೂಚನೆ ಸಿಕ್ಕಿದೆ. ಮುಂಗಾರು ಮಳೆ ಕೊನೆಯಾಗುತ್ತಿದ್ದಂತೆ ಹಿಂಗಾರು ಮಳೆ ಅಬ್ಬರ ಜೋರಾಗುವ ಸಾಧ್ಯತೆ ಇದೆ. ಇದೇ ರೀತಿ ಮಳೆ ಮುಂದುವರೆದರೆ ರೈತರಿಗೆ ಬಹಳಷ್ಟು ಸಂಕಷ್ಟ ಎದುರಾಗಲಿದೆ. ಮುಂದಿನ ಎರಡು ತಿಂಗಳು ಡಿಸೆಂಬರ್ ವರೆಗೂ ಕೂಡ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಭಾರಿ ಮಳೆ ಉಂಟಾಗಲಿದೆ ಎನ್ನುವ ಸೂಚನೆ ಸಿಕ್ಕಿದೆ. ವಾಡಿಕೆಗಿಂತ ಮುಂಚೆ ಮುಂಗಾರು ಮಳೆ ಆರಂಭಗೊಂಡಿತು. ಮುಂಗಾರು ಮಳೆಯ ಆರ್ಭಟ ತುಂಬಾ ಜೋರಾಗಿತ್ತು.
ಹಿಂಗಾರು ಮಳೆಯಲ್ಲಿ ಸೈಕ್ಲೋನ್ ನ ಅಬ್ಬರ ಜೋರಾಗಿರುತ್ತದೆ ಅದೇ ರೀತಿ ಡಿಸೆಂಬರ್ ವರೆಗೂ ಕೂಡ ಭಾರೀ ಮಳೆಯಾಗುವ ಸಾಧ್ಯತೆ. ದಕ್ಷಿಣ ಕರ್ನಾಟಕದ ಒಳನಾಡು, ಕರಾವಳಿ, ಬೇರೆ ಬೇರೆ ಭಾಗಗಳಲ್ಲಿ ಈಗಾಗಲೇ ಹಿಂಗಾರು ಮಳೆಯ ಅಬ್ಬರ ಜೋರಾಗಿದೆ. ಅರಬ್ಬೀ ಸಮುದ್ರ ಅಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಈ ರೀತಿಯ ಎಫೆಕ್ಟ್ ಸಾಕಷ್ಟು ರೀತಿಯ ಪರಿಣಾಮವನ್ನು ಉಂಟು ಮಾಡುತ್ತದೆ. ಬಂಗಾಳಕೊಲ್ಲಿಯಲ್ಲೂ ಕೂಡ ಮುಂದಿನ ದಿನಗಳಲ್ಲಿ ವಾಯುಭಾರ ಡಿಸೆಂಬರ್ ನವರೆಗೂ ಕೂಡ ಮಳೆ ಆಗುವ ಸಾಧ್ಯತೆ ಇದೆ.
ಮುಂಗಾರು ಮಳೆಯಿಂದ ಅನ್ನದಾತರಿಗೆ ವರವಾಗುವ ಬದಲು ಶಾಪ ವಾಗುವ ಸಾಧ್ಯತೆ ಹೆಚ್ಚಾಗಿದೆ. ಅಕ್ಟೋಬರ್ ನಿಂದ ಡಿಸೆಂಬರ್ ನವರೆಗೆ ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳ ಹೆಚ್ಚಾಗುವ ಸಾಧ್ಯತೆ ಇದೆ. ಈ ತಿಂಗಳಲ್ಲಿ ಹೆಚ್ಚಾಗಿ ಸೈಕ್ಲೋನ್ ಗಳ ಅಬ್ಬರ ಜೋರಾಗಿರುತ್ತದೆ. ಕಾಫಿ, ಭತ್ತ, ಅಡಿಕೆ ಹೀಗೆ ಅನೇಕ ಬೆಳೆಗಳು ಕೂಡ ಡಿಸೆಂಬರ್ ತಿಂಗಳಲ್ಲಿ ಕಟಾವು ಮಾಡಲು ಬರುತ್ತದೆ ಆದರೆ ಮಳೆಯ ಅಬ್ಬರದಿಂದ ರೈತರಿಗೆ ಸಾಕಷ್ಟು ತೊಂದರೆ ಆಗುವ ಸಾಧ್ಯತೆ ಇದೆ.