Categories
ರಾಜ್ಯ

ಮತ್ತೆ ಭಾರೀ ಮಳೆ ಅಲರ್ಟ್!

ಮತ್ತೆ ಭಾರೀ ಮಳೆ ಅಲರ್ಟ್!
– ಮುಂದಿನ 7 ದಿನ ಈ ಭಾಗದಲ್ಲಿ ಮಳೆಯ ಮುನ್ಸೂಚನೆ
– ಭಾರೀ ಮಳೆ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ

NAMMUR EXPRESS NEWS 
ಮುಂಗಾರು ಮಳೆ ಆರ್ಭಟ ಇನ್ನೂ ಮುಂದುವರಿದಿದ್ದು, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾರೀ ಮಳೆ ಸುರಿಸುತ್ತಿದೆ. ಒಂದು ತಿಂಗಳು ಕಳೆದರೂ ಸಹಿತ ನಿಲ್ಲದ ಮಳೆಗೆ ಈ ಭಾಗದ ಜನರು ನಲುಗಿದ್ದಾರೆ. ವಿವಿಧ ಕಡೆಗಳಲ್ಲಿ ಚಂಡಮಾರುತ ಪ್ರಸರಣ, ವಾಯುಭಾರ ಕುಸಿತಗಳು ಸಂಭವಿಸಿವೆ. ಅವುಗಳು ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಮುಂದಿನ 7 ದಿನಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆ ಆಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳ ಉಪಸಾಗರದಲ್ಲಿ ಮುಂಗಾರು ಸ್ಟ್ರಫ್ ಉಂಟಾಗಿದೆ. ಮಧ್ಯ ಪ್ರದೇಶ ಹಾಗೂ ಅದರ ಸುತ್ತಮುತ್ತಲಿನ ಭಾಗಗಳಲ್ಲಿ ಭಾರೀ ಎತ್ತರದಲ್ಲಿ ಬಿರುಗಾಳಿ ಕೇಂದ್ರೀಕೃತವಾಗಿದೆ. ಚಂಡಮಾರುತ ಪರಿಚಲನೆ ಇದಾಗಿದ್ದು, ಸಮುದ್ರಮಟ್ಟದಿಂದ 7.2 ಕಿಲೋ ಮೀಟರ್ ಎತ್ತರದಲ್ಲಿ ಬೀಸುತ್ತಿದೆ. ಇದರಿಂದ ಮುಂಗಾರು ಸುರಿಸುವ ಮೋಡಗಳು ಒಂದೆಡೆ ಜಮಾಯಿತ್ತಿವೆ. ಮತ್ತೊಂದು ಚಂಡಮಾರುತ ಪರಿಚಲನೆಯು ಪಶ್ಚಿಮ ಬಂಗಾಳ, ಒಡಿಶಾ ಕರಾವಳಿ ಭಾಗ ಅಂದರೆ ಪಶ್ಚಿಮ ಬಂಗಾಳ ವ್ಯಾಪ್ತಿಯಲ್ಲಿವೆ. ಇದು 1.5 ಕಿಲೋ ಮೀಟರ್‌ನಿಂದ 5.8 ಕಿಲೋ ಮೀಟರ್ ಎತ್ತದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ ಒಡಿಶಾ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಕರ್ನಾಟಕ ಕರಾವಳಿ ಭಾಗಗಳಲ್ಲಿ ಸಹ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಉಳಿದಂತೆ ಕೆಲವು ರಾಜ್ಯಗಳಲ್ಲಿ ಮಬ್ಬು ವಾತಾವರಣ ಕಂಡು ಬರಲಿದ್ದು, ಮಳೆಯ ಪ್ರಮಾಣ ಕಡಿಮೆ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.