Categories
ರಾಜ್ಯ

ಚಳಿ ಚಳಿ..ಹೆಚ್ಚಾಗಲಿದೆ ಎಚ್ಚರ…!

ಚಳಿ ಚಳಿ..ಹೆಚ್ಚಾಗಲಿದೆ ಎಚ್ಚರ…!
• ಮುಂದಿನ ಐದು ದಿನ ಮೈ ಕೊರೆಯುವ ಚಳಿ
• ವಿಪರೀತ ಥಂಡಿ, ಶೀತ ಗಾಳಿ: ಆರೋಗ್ಯ ಹುಷಾರು

NAMMUR EXPRESS NEWS
ರಾಜ್ಯದಲ್ಲಿ ದಿನಕಳೆದಂತೆ ಮೈ ಕೊರೆಯುವ ಚಳಿ ಹೆಚ್ಚಾಗುತ್ತಿದೆ. ಮೈನಡುಗಿಸುವ ಥಂಡಿಯ ಮಧ್ಯೆ, ಬೆಳಗ್ಗೆ ಸಂಜೆ ವೇಳೆ ಇಬ್ಬನಿ ಕವಿದ ವಾತಾವರಣ ಇದ್ದು, ಚಳಿಗೆ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ.ಇನ್ನೂ ಐದು ದಿನ ಭಾರೀ ಚಳಿ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿ ಚಳಿ ತೀವ್ರತೆ ಹೆಚ್ಚಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಟಾಂಶದ ಪ್ರಮಾಣ 15 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಚಳಿ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ಉತ್ತರ ಕನ್ನಡದಲ್ಲಿ ಕನಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ 4 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗಲಿದೆ, ಬೀದರ್, ಕಲ್ಗಬುರಗಿ ಮತ್ತು ಗದಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ಇರುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನ 2-4 ಡಿ ಸೆ ಗಿಂತ ಕಡಿಮೆ ಇರುವ ಸಾಧ್ಯತೆ ಇದೆ. ದಾವಣಗೆರೆಯಲ್ಲಿ 11.5 ಡಿಗ್ರಿ ಸೆ.ಅತ್ಯಂತ ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಕಳೆದ ಒಂದು ವಾರದಿಂದ ಚಳಿ ತೀವ್ರತೆಗೆ ಜನರು ಹೈರಾಣಾಗಿದ್ದಾರೆ. ಕನಿಷ್ಠ ಉಷ್ಣಾಂಶ ಪ್ರಮಾಣದಲ್ಲಿ ಭಾರೀ ಇಳಿಕೆಯಾಗುತ್ತಿದೆ, ಇನ್ನೂ ಐದು ದಿನ ಇದೇ ರೀತಿ ಚಳಿ ಅಬ್ಬರ ಇರಲಿದೆ. ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ದಿನದ ಕನಿಷ್ಟ ಉಷ್ಣಾಂಶ ಪ್ರಮಾಣ 15 ಡಿ ಸೆ ಗಿಂತ ಕಡಿಮೆಯಾಗಿದೆ. ರಾಯಚೂರು, ಗದಗದಲ್ಲಿ ಸಾಮಾನ್ಯಕ್ಕಿಂತ 3-5 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರಲಿದೆ. ವಿಜಯಪುರ, ಕೊಪ್ಪಳ ಭಾಗದಲ್ಲಿ ಚಳಿ ತೀವ್ರತೆ ಹೆಚ್ಚಾಗಿದೆ. ಇತ್ತ ಬೆಂಗಳೂರಲ್ಲೂ ಕೂಡ ವಿಪರೀತ ಥಂಡಿ ಬೀಳುತ್ತಿದೆ. ಬೆಳಗ್ಗೆ-ಸಂಜೆ ಹೆಚ್ಚು ಚಳಿ ಬೀಳುತ್ತಿದ್ದು ಜನರು ರೋಸಿ ಹೋಗಿದ್ದಾರೆ. ಬೆಳಗ್ಗೆ ಮತ್ತು ಸಂಜೆ ವೇಳೆ, ಚಳಿಯ ಜೊತೆಗೆ ಇಬ್ಬನಿಯೂ ಹೆಚ್ಚಾಗಿರುವುದು ಜನರಿಗೆ ಹೆಚ್ಚಿನ ತೊಂದರೆ ನೀಡುತ್ತಿದೆ. ಜನರು ಹೊರಗೆ ಹೋಗಲು, ಹಿಂಜರಿಯುತ್ತಿರುವುದು ಕಂಡುಬರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯ ಅಭಿವೃದ್ಧಿಗೂ ಈ ತೀವ್ರ ಚಳಿ ಅಡ್ಡಿಪಡಿಸುತ್ತಿದೆ. ಹವಾಮಾನ ವೈಪರಿತ್ಯದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಉಸಿರಾಟದ ಸಮಸ್ಯೆ, ನೆಗಡಿ, ಜ್ವರ, ಮತ್ತು ಕೆಮ್ಮು ಜನರಲ್ಲಿ ಸಾಮಾನ್ಯವಾಗಿ ಕಾಣುತ್ತಿದೆ ಅಲ್ಲದೇ ಕರ್ನಾಟಕದಲ್ಲಿ ಚೀನಾ ವೈರಸ್‌ ಬೇರೆ ಕಾಣಿಸಿಕೊಂಡಿದೆ, ಈಗಾಗಲೇ ಶಿವಮೊಗ್ಗ, ಬೆಂಗಳೂರಲ್ಲಿ ಎಚ್‌ಎಮ್‌ಎಪಿವಿ ವೈರಸ್‌ ಪತ್ತೆಯಾಗಿದೆ, ಹೀಗಾಗಿ ಚಳಿಗಾಲ ಮುಗಿಯುವರೆಗೂ ಅಲರ್ಟ್‌ ಆಗಿರಿ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.