Categories
ರಾಜ್ಯ

ಮಳೆ ನಡುವೆ ಕೆ.ಇ.ಬಿ ಸಿಬ್ಬಂದಿ ಸಾಹಸ…!

ಮಳೆ ನಡುವೆ ಕೆ.ಇ.ಬಿ ಸಿಬ್ಬಂದಿ ಸಾಹಸ…!
– ಮಳೆ, ಗಾಳಿ ಲೆಕ್ಕಿಸದೆ ಕೆಲಸದಲ್ಲಿ ನಿರತ
– ಜೀವದ ಹಂಗು ತೊರೆದು ಕೆಲಸ ಮಾಡುವ ಸಿಬ್ಬಂದಿಗೆ ನಮ್ಮ ಸಲಾಂ
– ಕೆ. ಇ. ಬಿ 24X7 ಗ್ರಾಹಕ ಸೇವಾ ಕೇಂದ್ರದ ಸೇವೆ..!

ವಿಶೇಷ ವರದಿ: ನಿಖಿತಾ ಮಂಗಳೂರು

NAMMUR EXPRESS NEWS
ಒಂದು ಕಡೆ ಮಳೆಯ ಆರ್ಭಟಕ್ಕೆ ಮನೆಯಿಂದ ಹೊರಬಾರದ ಸ್ಥಿತಿ ಮತ್ತೊಂದೆಡೆ ಮಳೆಯ ಆರ್ಭಟಕ್ಕೆ ಸಿಲುಕಿ ಜಲಾವೃತವಾಗುತ್ತಿರುವ ಮನೆ, ಅಂಗಡಿ, ದೇವಾಲಯಗಳು.
ಇನ್ನೊಂದೆಡೆ ವಾರದಿಂದ ವಿದ್ಯುತ್ ಇಲ್ಲದೆ, ಮರ, ಗುಡ್ಡ ಕುಸಿತದಿಂದ ಬಿದ್ದ ವಿದ್ಯುತ್ ಕಂಬಗಳು, ತಂತಿಗಳು. ಇಂತಹ ಸಂದರ್ಭದಲ್ಲಿ
ಗಾಳಿ ಮಳೆಗೆ ಸಿಲುಕಿ ನೆಲಕ್ಕುರುಳಿದ ವಿದ್ಯುತ್ ತಂತಿಗಳಿಂದ ಜನರಿಗೆ ಅಪಾಯವಾಗಬಾರದೆಂಬ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಜನರ ಸೇವೆ ಮಾಡುತ್ತಿರುವ ಸಿಬ್ಬಂದಿಗಳಿಗೆ ನಾವೆಲ್ಲರೂ ಧನ್ಯವಾದ ಹೇಳಲೇಬೇಕು.
ಅನೇಕ ಕಡೆ ಲೈನ್ ಮನ್ ಗಳು ನೀರಿನಲ್ಲಿಯೇ ನಡೆದುಕೊಂಡು ಹೋಗಿ ವಿದ್ಯುತ್ ತಂತಿಗಳನ್ನು ಸರಿಪಡಿಸುವುದು, ವಿದ್ಯುತ್ ನೀರಿಗೆ ಸ್ಪರ್ಶಿಸಿ ಅನಾಹುತವಾಗದಂತೆ ತಡೆಗಟ್ಟಲು ಜೀವವನ್ನು ಪಣಕ್ಕಿಟ್ಟು ಅವಿರತವಾಗಿ ಶ್ರಮಿಸುತ್ತಿದ್ದಾರೆ.‌‌‌ ಕಾಯಕವೇ ಕೈಲಾಸ ಎಂಬುದನ್ನು ಪಾಲಿಸುತ್ತಿರುವ ಇಂತಹ ವಿದ್ಯುತ್ ಕಾರ್ಮಿಕರಿಗೆ ಜನರಿಂದ ಪ್ರಶಂಸೆ ಮತ್ತು ಹೃದಯ ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲಾಗುತ್ತಿದೆ.
ವಿದ್ಯುತ್ ಇಲಾಖೆ ಕೆಲಸ ನೀರಿನ ಮೇಲಿನ ಗುಳ್ಳೆ ಹಾಕಿ ಪ್ರತಿ ವರ್ಷ ನೂರಾರು ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಈ ನಡುವೆಯೂ ತಮ್ಮ ನಿಸ್ವಾರ್ಥ ಸೇವೆ ಮಾಡುತ್ತಿರುವ ಎಲ್ಲಾ ಸಿಬ್ಬಂದಿಗೂ ನಮ್ಮೂರ್ ಎಕ್ಸ್ ಪ್ರೆಸ್ ಕೃತಜ್ಞತೆ ಅರ್ಪಿಸುತ್ತದೆ.

ರಾಜ್ಯದ ಮೆಸ್ಕಾಂ ವ್ಯಾಪ್ತಿಯಲ್ಲಿ ಅಲರ್ಟ್

ಸಾರ್ವಜನಿಕರ ಮಾಹಿತಿಗಾಗಿ ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುನ್ಸೂಚನೆ ಇದ್ದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಮಳೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಅನಾಹುತಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಮೆಸ್ಕಾಂ ಸನ್ನದ್ದವಾಗಿದೆ.
ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸಂಬಂಧಿತ ಗಂಭೀರ ಸಮಸ್ಯೆ ಹಾಗೂ ತುರ್ತು ಸಂದರ್ಭಗಳಲ್ಲಿ ಇಲಾಖೆಗೆ ತ್ವರಿತ ಮಾಹಿತಿ ಹಾಗೂ ದೂರು ನೀಡಲು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ. 8277883388, 0824-2950953.

24X7 ಗ್ರಾಹಕ ಸೇವಾ ಕೇಂದ್ರದ ಸೇವೆ..!

ಮಳೆಗಾಲದ ವೇಳೆ ವಿದ್ಯುತ್ ಅವಘಡದ ಬಗ್ಗೆ ಮುನ್ಸೂಚನೆ ಕಂಡು ಬಂದಲ್ಲಿ ತಕ್ಷಣ 24X7 ಗ್ರಾಹಕ ಸೇವಾ ಕೇಂದ್ರದ ಸಂಖ್ಯೆ “1912” ಗೆ ದೂರನ್ನು ದಾಖಲಿಸಬಹುದು ಅಥವಾ ಗ್ರಾಹಕ ಸೇವಾ ಕೇಂದ್ರದ ವಾಟ್ಸಾಪ್ ನಂಬರ್ 9483041912 ಗೆ ಸಂದೇಶವನ್ನು ಕಳುಹಿಸ ಬಹುದಾಗಿದೆ. ಅಥವಾ “ನನ್ನ ಮೆಸ್ಕಾಂ” ಅಪ್ ನ ಮುಖಾಂತರ ಮಾಹಿತಿ ನೀಡಬಹುದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.