Categories
ರಾಜ್ಯ

ರಾಜ್ಯದಲ್ಲಿ ಚುನಾವಣೆ ನಡೆಯಲ್ಲ.. ಅಧಿಕಾರಿಗಳ ದರ್ಬಾರ್!

ರಾಜ್ಯದಲ್ಲಿ ಚುನಾವಣೆ ನಡೆಯಲ್ಲ.. ಅಧಿಕಾರಿಗಳ ದರ್ಬಾರ್!
– ವರ್ಷಾಂತ್ಯಕ್ಕೆ ಗ್ರಾಪಂ ಅವಧಿ ಮುಕ್ತಾಯ: ಆಗುತ್ತಾ ಚುನಾವಣೆ?
– 4 ವರ್ಷದಿಂದ ಜಿಪಂ, ತಾಪಂನಲ್ಲಿ ಅಧಿಕಾರಿಗಳ ದರ್ಬಾ‌ರ್

NAMMUR EXPRESS NEWS
ರಾಜ್ಯದಲ್ಲಿ ಪಂಚಾಯತ್ ರಾಜ್‌ನ ಚುನಾಯಿತ ಆಡಳಿತ ಸಂಪೂರ್ಣ ಬಂದ್ ಆಗುತ್ತಿದ್ದು, ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಂಡಳಿ ಅಧಿಕಾರ ಮುಕ್ತಾಯವಾಗಲಿದೆ. ಈ ಮೂಲಕ ರಾಜ್ಯದ ಎಲ್ಲಾ ಸ್ಥಳೀಯಾಡಳಿತಗಳು ಜನಪ್ರತಿನಿಧಿಗಳಿಲ್ಲದೆ ಸೊರಗಲಿವೆ.
2026ರ ಜನವರಿ ಅಂತ್ಯದೊಳಗೆ ಎಲ್ಲಾ 5,958 ಗ್ರಾಪಂಗಳ ಚುನಾವಣೆ ನಡೆಯಬೇಕು. ಇಲ್ಲದಿದ್ದರೆ ಗ್ರಾಪಂಗಳಲ್ಲೂ ಜಿಪಂ, ತಾಪಂ ಹಾಗೂ ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಂತೆಯೇ ಅಧಿಕಾರಿಗಳದ್ದೇ ಕಾರುಬಾರು ಶುರುವಾಗಲಿದೆ.
ಎಲ್ಲಾ 3,903 ತಾಪಂ ಕ್ಷೇತ್ರಗಳು ಹಾಗೂ 1,083 ಜಿಪಂ ಕ್ಷೇತ್ರಗಳ ಚುನಾಯಿತ ಸದಸ್ಯರ ಅಧಿಕಾರ ಅವಧಿ 2021ರ ಮೇ 10ಕ್ಕೆ ಮುಗಿದಿದೆ. 4 ವರ್ಷಗಳಿಂದ ಈ ಎರಡೂ ಸ್ಥಳೀಯಾಡಳಿತಗಳು ಜನಪ್ರತಿನಿಧಿಗಳಿಲ್ಲದೆ ಅನಾಥವಾಗಿವೆ. ಬಿಬಿಎಂಪಿ ಚುನಾಯಿತ ಮಂಡಳಿ ಅವಧಿ ಮುಗಿದು 7 ವರ್ಷ ಆಗಿದೆ. ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ನಾನಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ 1-1.5 ವರ್ಷದಿಂದ ಚುನಾಯಿತ ಸದಸ್ಯರಿಲ್ಲ.
ಪಂಚಾಯತ್ ರಾಜ್ ಉದ್ದೇಶ ಆಡಳಿತದ ವಿಕೇಂದ್ರೀಕರಣದ ಜತೆಗೆ ಗ್ರಾಮಗಳಲ್ಲಿ ಸ್ವ-ಸರಕಾರ ರಚನೆ. ಆದರೆ ರಾಜ್ಯ ಸರಕಾರ ಈ ಬಗ್ಗೆ ಗಮನ ಕೊಡುತ್ತಲೇ ಇಲ್ಲ. ಹಿಂದಿನ ಬಿಜೆಪಿ ಸರಕಾರ ಕೂಡ ಜಿಪಂ, ತಾಪಂ ಚುನಾವಣೆ ನಡೆಸಿಲ್ಲ, ಆ ನಂತರ ಐತಿಹಾಸಿಕ ಗೆಲುವಿನೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರಕಾರಕ್ಕೂ ಸ್ಥಳೀಯ ಸಂಸ್ಥೆಗಳು ಬಲಗೊಳ್ಳುವುದು ಬೇಕಿಲ್ಲ. ಇದರೊಂದಿಗೆ ಪಂಚಾಯತ್ ರಾಜ್ ವ್ಯವಸ್ಥೆಯ ಸ್ವ-ಸರಕಾರ ಉದ್ದೇಶ ಸಾಕಾರ ‘ಮೇಲ್ಮಟ್ಟ’ದ ಸರಕಾರ, ಜನಪ್ರತಿನಿಧಿಗಳಿಗೆ ಬೇಕಿಲ್ಲವೆಂಬುದು ಸುಸ್ಪಷ್ಟ ಇದು ಇಡೀ ವ್ಯವಸ್ಥೆ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಹುಂಬತನ ಎನ್ನುವ ಆರೋಪ ಕೇಳಿಬರುತ್ತಿದೆ.
ರಾಜ್ಯದಲ್ಲಿ 31 ಜಿಲ್ಲಾ ಪಂಚಾಯಿತಿ, 226 ತಾಲೂಕು ಪಂಚಾಯಿತಿ, 5,958 – ಗ್ರಾಮ ಪಂಚಾಯಿತಿ ಇವೆ. ಜಿಪಂ 2016 ಫೆಬ್ರವರಿಯಲ್ಲಿ ಚುನಾವಣೆ ನಡೆದಿದ್ದು, 2021 ಮೇ 10ಯಲ್ಲಿ ಚುನಾವಣೆ ನಡೆಯಬೇಕಿತ್ತು. ತಾಪಂ 2016 ಫೆಬ್ರವರಿಯಲ್ಲಿ ಚುನಾವಣೆ ನಡೆದಿದ್ದು, 2021 ಮೇ 10ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದ್ರೆ 4 ವರ್ಷ ಅಧಿಕಾರಿಗಳದ್ದೆ ದರ್ಬಾರ್ ಆಗಿದೆ. ಗ್ರಾಪಂ 2020 ಡಿಸೆಂಬರ್ ಈ ವರ್ಷಾಂತ್ಯಕ್ಕೆ ಮುಗಿಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.