Categories
ರಾಜ್ಯ

ಶಿಗ್ಗಾಂವಿ: ಮದುವೆ ವೇಳೆ ಸಾಂಬಾ‌ರ್ ಪಾತ್ರೆ ಬಿದ್ದು ಮಗು ಸಾವು…!

ಟಾಪ್ 4 ನ್ಯೂಸ್ ಕರ್ನಾಟಕ

ಶಿಗ್ಗಾಂವಿ: ಮದುವೆ ವೇಳೆ ಸಾಂಬಾ‌ರ್ ಪಾತ್ರೆ ಬಿದ್ದು ಮಗು ಸಾವು…! 
– ಬೆಂಗಳೂರು : ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕ ಸಾವು..!!
– ಯಾದಗಿರಿ: ಕೌಟುಂಬಿಕ ಕಲಹಕ್ಕೆ ಯುವತಿ ಆತ್ಮಹತ್ಯೆ..!!
– ಉಡುಪಿ: ಹೆಚ್ಚಾಗಿ ಮೊಬೈಲ್ ಬಳಕೆಯಿಂದ ಪತ್ನಿಯನ್ನೇ ಕೊಂದ ಪತಿ..!!

NAMMUR EXPRESS NEWS
ಶಿಗ್ಗಾಂವಿ : ಮದುವೆ ಸಮಾರಂಭದಲ್ಲಿ ಕುದಿಯುವ ಸಾಂಬಾರು ಪಾತ್ರೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ಮತ್ತುಮ್ ಸಾಬ್ ಸನದಿ ಅವರ ಪುತ್ರಿ ರುಕಾನಾ ಬಾನು ಸನದಿ(2.3 ವರ್ಷ) ಮೃತ ಬಾಲಕಿ. ಜೂ.14ರಂದು ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಶರೀಫ್‌ಸಾಬ್ ಯರಗುಪ್ಪಿ ಅವರ ಮನೆಯಲ್ಲಿ ಮದುವೆಗೆ ಬಂದಿದ್ದಳು.

– ಬೆಂಗಳೂರು : ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕ ಸಾವು..!!

ಬೆಂಗಳೂರು: ಇತ್ತೀಚಿಗೆ ಹೈ ಟೆನ್ನನ್ ತಂತಿ ತಾಕಿ ಗಾಯಗೊಂಡಿದ್ದ ನೇಪಾಳ ಮೂಲದ ಅನಂತ್ (10) ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕೆ.ಆ‌ರ್.ಪುರ ಸಮೀಪ ತನ್ನ ಕುಟುಂಬದ ಜತೆ ಅನಂತ್ ನೆಲೆಸಿದ್ದ. ಮನೆ ಮುಂದೆ ವಿದ್ಯುತ್‌ ಹೈಟೆನ್ನನ್‌ ತಂತಿ ತಾಕಿ ಆತ ಗಾಯಗೊಂಡಿದ್ದ. ಬಳಿಕ ಆಸ್ಪತ್ರೆಯಲ್ಲಿ ಆತನನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅನಂತ್ ಮೃತಪಟ್ಟಿದ್ದಾನೆ. ಈ ಸಂಬಂಧಕೆ. ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಯಾದಗಿರಿ: ಕೌಟುಂಬಿಕ ಕಲಹಕ್ಕೆ ಯುವತಿ ಆತ್ಮಹತ್ಯೆ..!!

ಯಾದಗಿರಿ : ಕೌಟುಂಬಿಕ ಕಲಹ ಹಿನ್ನೆಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಹೆಸರಲ್ಲಿ ರೈತ ಮಹಿಳೆ ಆತ್ಮಹತ್ಯೆ ಎಂದು ಕುಟುಂಬಸ್ಥರೇ ಐದು ಲಕ್ಷ ರೂ ಪರಿಹಾರ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವಂತಹ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ದಂಡ ಸೊಲಾಪುರ ತಾಂಡಾದಲ್ಲಿ ನಡೆದಿದೆ. 2023 ಅಕ್ಟೋಬರ್‌ 7 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ಸಹಜ ಸಾವಲ್ಲ, ಹಿಂಸೆ ನೀಡಿ ಪ್ರಚೋದನೆಯಿಂದ ಸಾವಾಗಿದೆ ಎಂದು ಬಂಜಾರ ಮುಖಂಡರು ಆರೋಪಿಸಿದ್ದು, ತನಿಖೆ ಮಾಡಿ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮೋನಾಬಾಯಿ ಪುನಿಮ್ ಚಂದ್ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಮೋನಾಬಾಯಿಗೆ ಸಂತೋಷ್, ಠಾಕೂರ್ ಮತ್ತು ಗೇನುಸಿಂಗ್ ಎಂಬ ಮೂವರು ಅಣ್ಣಂದಿರಿದ್ದಾರೆ. ಶೀಲಾಭಾಯಿ, ಪದ್ಮಾವತಿ‌ ಮತ್ತು ಸರಸ್ವತಿ ಎಂಬ ಮೂವರು ಅತ್ತಿಗೆಯರಿದ್ದಾರೆ. ಇವರೇ ಆಕೆಗೆ ದೈಹಿಕ, ಮಾನಸಿಕ ಹಿಂಸೆ ನೀಡಿಲ್ಲದೇ ಹೊಡೆದಿರುವ ಶಂಕೆ ವ್ಯಕ್ತವಾಗಿದ್ದು, ನಿರಂತರ ಕಿರಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅನುಮಾನಿಸಲಾಗಿದೆ. ಸದ್ಯ ಯುವತಿ ಸಾವಿನ ಸುತ್ತ ಸಾಕಷ್ಟು ಅನುಮಾನದ ಹುತ್ತಗಳು ಹುಟ್ಟಿಕೊಂಡಿವೆ.

– ಉಡುಪಿ: ಹೆಚ್ಚಾಗಿ ಮೊಬೈಲ್ ಬಳಕೆಯಿಂದ ಪತ್ನಿಯನ್ನೇ ಕೊಂದ ಪತಿ..!! 

ಉಡುಪಿ : ಹೆಚ್ಚು ಮೊಬೈಲ್ ಬಳಸುತ್ತಾಳೆಂದು ಕೋಪಗೊಂಡ ವ್ಯಕ್ತಿ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಪತ್ನಿ ಹೆಚ್ಚು ಸಮಯ ಮೊಬೈಲ್ ಬಳಸುತ್ತಾಳೆ ಎಂದು ಪತಿ ಕತ್ತಿಯಿಂದ ಕಡಿದು ಹತ್ಯೆಗೈದ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ನಡೆದಿದೆ. ರೇಖಾ‌(27) ಕೊಲೆಯಾದ ಮಹಿಳೆ. ಕೊಳಂಬೆ ಗ್ರಾಮದ ನಿವಾಸಿಯಾದ ಆರೋಪಿ ಪತಿ ಗಣೇಶ ಪೂಜಾರಿಯನ್ನು(42) ಸದ್ಯ ಬಂಧಿಸಲಾಗಿದೆ. ಆದ್ರೆ, ಪಾಪ ಇಬ್ಬರು ಮಕ್ಕಳು ಅನಾಥವಾಗಿವೆ. ತಾಯಿ ಮಸಣ ಸೇರಿದ್ದರೆ, ತಂದೆ ತಂದೆ ಜೈಲು ಪಾಲಾಗಿದ್ದಾನೆ. ಇದರಿಂದ ದಂಪತಿಗಳ ಎರಡು ಮಕ್ಕಳು ಅನಾಥರಾಗಿದ್ದಾರೆ. ಆಕೆಗೆ ಮೊಬೈಲ್ ಚಟ ಇವನಿಗೆ ಕುಡಿತದ ಚಟ ಈಗ ಮಕ್ಕಳಿಗೆ ದಿಕ್ಕಿಲ್ಲದಂತಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.